Advertisement
ಸೆ. 27ರಿಂದ ಅ. 2ರ ವರೆಗೆ ಒಂದು ವಾರಗಳ ಕಾಲ ಈ ಕಾರ್ಯಾಚರಣೆ ನಡೆಯಲಿದ್ದು, ಮೊದಲ ದಿನ ಟಿಂಟೆಡ್ ಗ್ಲಾಸ್ ಅಳವಡಿಸಿರುವವರನ್ನು ಕೇಂದ್ರೀಕರಿಸಿ ಪೊಲೀಸರು ತಪಾಸಣೆ ನಡೆಸಿದರು. ವಿಂಡೋ ಟಿಂಟ್ ಮೀಟರ್ ಮೂಲಕ ಪೊಲೀಸರು ವಾಹನಗಳ ಗ್ಲಾಸಿನ ಪಾರದರ್ಶಕತೆಯ ಪ್ರಮಾಣವನ್ನು ಮಾಪನ ಮಾಡಿದರು. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪಾರದರ್ಶಕವುಳ್ಳ ಗ್ಲಾಸ್‌ಗಳನ್ನು ಹೊಂದಿರುವ ವಾಹನಗಳ ಚಾಲಕರಿಂದ ದಂಡ ವಸೂಲಿ ಮಾಡಲಾಯಿತು. ಸ್ಥಳದಲ್ಲಿಯೇ ಟಿಂಟ್ ಶೀಟ್‌ಗಳನ್ನು ತೆರವುಗೊಳಿಸಲಾಯಿತು. ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸಂಚಾರ ಉಪವಿಭಾಗದ ಎಸಿಪಿ ಎಂ.ಎ. ನಟರಾಜ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಸೆ. 28ರಂದು ನಂಬರ್ ಪ್ಲೇಟ್‌ಗಳ ತಪಾಸಣೆ (500 ರೂ. ದಂಡ), ಸೆ. 29ರಂದು ಹೆಲ್ಮೆಟ್ (500 ರೂ. ದಂಡ), ಸೆ. 30ರಂದು ವಿಮೆ (ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ 1,000 ರೂ., ಲಘು ವಾಹನಗಳಿಗೆ 2,000 ರೂ. ಹಾಗೂ ಘನ ವಾಹನಗಳಿಗೆ 4,000 ರೂ.ದಂಡ), ಅ. 1ರಂದು ಹಳೆಯ ಪ್ರಕರಣಗಳ ಬಗ್ಗೆ, ಅ. 2ರಂದು ಹೊಗೆ ತಪಾಸಣೆ ನಡೆಯಲಿದೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ನಿಯಮ ಪಾಲಿಸಬೇಕು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಇದನ್ನೂ ಓದಿ:ಮದುವೆಗೆ ಮಾಡಿದ ಸಾಲ ತೀರಿಸಲಾಗಲಿಲ್ಲ ಎಂದು ಮದುವೆಯಾದ ಐದೇ ತಿಂಗಳಲ್ಲಿ ವ್ಯಕ್ತಿ ನೇಣಿಗೆ ಶರಣು
Related Articles
ವಾಹನಗಳ ಎದುರಿನ ಹಾಗೂ ಹಿಂದಿನ ಗ್ಲಾಸ್‌ಗಳು ಶೇ.70 ಪಾರದರ್ಶಕತೆ (ವಿಶುವಲ್ ಲೈಟ್ ಟ್ರಾನ್ಸ್‌ಮಿಷನ್), ಬದಿಯ ಗ್ಲಾಸ್‌ಗಳು ಶೇ. 40 ಪಾರದರ್ಶಕತೆ ಹೊಂದಿರುವುದು ಕಡ್ಡಾಯ. ಈ ಬಗ್ಗೆ ಉತ್ಪಾದಕರಿಗೆ ನ್ಯಾಯಾಲಯ ಆದೇಶ ನೀಡಿದೆ. ಆದರೆ ಕೆಲವು ಮಂದಿ ವಾಹನಗಳ ಮಾಲಕರು ಈ ನಿಯಮವನ್ನು ಮೀರಿ ಹೆಚ್ಚು ಟಿಂಟ್ ಇರುವ ಗ್ಲಾಸ್‌ಗಳನ್ನು ಅಳವಡಿಸುತ್ತಾರೆ. ಇನ್ನು ಕೆಲವರು ಸನ್ ಫಿಲ್ಮ್ ಶೀಟ್‌ಗಳನ್ನು ಹಾಕಿಸಿಕೊಳ್ಳುತ್ತಾರೆ. ಇದು ನಿಯಮ ಬಾಹಿರ. ಗ್ಲಾಸ್‌ಗಳ ಪಾರದರ್ಶಕತೆ ಯನ್ನುತಿಳಿಯಲು ಪೊಲೀಸ್ ಇಲಾಖೆ “ವಿಂಡೋ ಟಿಂಟ್ ಮೀಟರ್’ ಉಪಕರಣ ಬಳಸುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
Advertisement