Advertisement
ಶ್ರೀಕೃಷ್ಣ ಮಠದ ಭೋಜನ ಶಾಲೆ, ಬಡಗುಮಾಳಿಗೆಗೆ ನೈಸರ್ಗಿಕ ಬಣ್ಣವನ್ನು ಕೊಡಲಾಗಿದೆ. ಮಾರ್ಚ್‌ಗೆ ಮೊದಲೇ ಭಕ್ತರು ದರ್ಶನಕ್ಕೆ ತೆರ ಳುವ ಮಾರ್ಗವನ್ನು ಬದಲಾಯಿಸಲಾಗಿತ್ತು. ರಾಜಾಂಗಣ ಪ್ರವೇಶದಿಂದಲೇ ಭೋಜನ ಶಾಲೆಯ ಮೇಲೇರಿ, ಅಲ್ಲಿಂದ ಕೃಷ್ಣಮಠದ ಗರ್ಭಗುಡಿ ಪ್ರವೇಶಿಸುವುದು ಹೊಸ ಮಾರ್ಗವಾಗಿದೆ.
ಈ ದಾರಿಯಿಂದ ಸಾಗುವಾಗ ಪ್ರಾಚೀನ ಪರಂಪರೆಗೆ ತೆರಳಿದ ಅನುಭವವಾಗುತ್ತದೆ. ಗಾಳಿ-ಬೆಳಕು ಧಾರಾಳ ಸಿಗುತ್ತದೆ. ದೇವರ ದರ್ಶನಕ್ಕೆ ಇಳಿಯುವ ಮೊದಲೇ ಮೇಲ್ಭಾಗದಲ್ಲಿ ಗರ್ಭಗುಡಿಗೆ ಕಳೆದ ವರ್ಷ ಹೊದೆಸಿದ ಸ್ವರ್ಣ ಗೋಪುರವನ್ನು ವೀಕ್ಷಿಸಬಹುದು.
Related Articles
ಪ್ರಾಣನ ಹೊರಭಾಗದಲ್ಲಿ ಕರಾವಳಿಯ ಸೊಗಡಾದ ಹೆಂಚಿನ ಮಾಡನ್ನು, ಮಧ್ವ ಸರೋವರದ ಮೆಟ್ಟಿಲ ಮೇಲೆ ಬೈಹುಲ್ಲಿನ ಮಾಡನ್ನು ನಿರ್ಮಿಸಲಾಗಿದೆ. ಸೆ. 28ರಿಂದ ಭಕ್ತರಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುತ್ತಿದೆ. ಸದ್ಯ ಅಪರಾಹ್ನ 2ರಿಂದ ಸಂಜೆ 5ರ ವರೆಗೆ ಮಾತ್ರ ಪ್ರವೇಶಾವಕಾಶವಿದೆ. ಪರಿಸ್ಥಿತಿ ಗಮನಿಸಿ ಇತರ ವ್ಯವಸ್ಥೆ ಮಾಡುವುದಾಗಿ ಪರ್ಯಾಯ ಅದಮಾರು ಮಠದ ಆಡಳಿತ ಮಂಡಳಿ ತಿಳಿಸಿದೆ.
Advertisement
ಹಳೆ ಬೇರು-ಹೊಸ ಚಿಗುರುಶ್ರೀ ಅದಮಾರು ಮಠದ ಹಿರಿಯ ಸ್ವಾಮೀಜಿ ಶ್ರೀ ವಿಶ್ವಪ್ರಿಯತೀರ್ಥರ ಮಾರ್ಗದರ್ಶನದಲ್ಲಿ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥರು ಹಲವು ಹೊಸ ಯೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸುತ್ತಿದ್ದಾರೆ. ಮಠಕ್ಕೆ ಬೇಕಾಗುವ ಬಾಳೆ ಎಲೆಗಳನ್ನು ಸ್ಥಳೀಯ ಕೃಷಿಕರಿಂದ ಪಡೆಯುವ ಪ್ರಯತ್ನಕ್ಕೆ ಬಾಳೆ ಮುಹೂರ್ತ ದಲ್ಲಿಯೇ ಚಾಲನೆ ನೀಡಲಾಗಿತ್ತು. ಕೃಷಿಕರು ಗದ್ದೆಗಳನ್ನು ಪಾಳುಬಿಡುವ ಬದಲು ವ್ಯವಸಾಯ ಮಾಡಬೇಕೆಂಬ ಆಶಯದಿಂದ ಹಲವರಿಗೆ ಪ್ರೋತ್ಸಾಹ ನೀಡಲಾಗಿದೆ. ನೇಕಾರಿಕೆಗೆ ಪ್ರೋತ್ಸಾಹ ಕೊಡುವ ದೃಷ್ಟಿ ಯಿಂದ ಕೈಮಗ್ಗದ ಶಾಲುಗಳನ್ನು ಖರೀದಿಸ ಲಾಗುತ್ತಿದೆ. ಇದೇ ಮೊದಲ ಬಾರಿ ಕೈಮಗ್ಗದ ಸೀರೆಯನ್ನು ಶುಕ್ರವಾರದ ದೇವರ ಅಲಂಕಾರಕ್ಕೆ ಬಳಸಲಾಯಿತು. ಅದಮಾರು ಮಠದಲ್ಲಿ ನೀರಿಂಗಿಸುವಿಕೆ, ಗೋಡೆಗಳಿಗೆ ನೈಸರ್ಗಿಕ ಬಣ್ಣವನ್ನು ಪರ್ಯಾಯದ ಮೊದಲೇ ನಿರ್ವಹಿಸಲಾಗಿತ್ತು.