Advertisement

ಶ್ರೀನಗರದ ಮಸೀದಿಯಲ್ಲಿ ದೇಶ ವಿರೋಧಿ ಘೋಷಣೆ: 13 ಮಂದಿ ಬಂಧನ

04:11 PM Apr 09, 2022 | Team Udayavani |

ಶ್ರೀನಗರ: ಜಾಮಿಯಾ ಮಸೀದಿಯೊಳಗೆ ಶುಕ್ರವಾರ ಪ್ರಾರ್ಥನೆ ವೇಳೆ ದೇಶ ವಿರೋಧಿ ಮತ್ತು ಪ್ರಚೋದನಕಾರಿ ಘೋಷಣೆಗಳಿಗೆ ಸಂಬಂಧಿಸಿ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಶ್ರೀನಗರ ಪೊಲೀಸರು ನಿನ್ನೆ ಜಾಮಿಯಾ ಮಸೀದಿ ಆವರಣದಲ್ಲಿ ಗೂಂಡಾಗಿರಿ ಮತ್ತು ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣದಲ್ಲಿ ಬಂಧಿತ 13 ಆರೋಪಿಗಳ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅಡ್ಡಿಪಡಿಸಿ, ಹಾಜರಾದವರನ್ನು ಪ್ರಚೋದಿಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಲು ಪಾಕಿಸ್ಥಾನಿ ಭಯೋತ್ಪಾದಕ ಸಂಘಟನೆಗಳ ನಿರ್ವಾಹಕರಿಂದ ಉತ್ತಮ ಯೋಜಿತ ಸಂಚಿನ ಭಾಗವಾಗಿದೆ ಎಂಬುದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ” ಎಂದು ಪೊಲೀಸ್ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಯುವಕರು ಪೊಲೀಸರು ಮತ್ತು ಕೆಲವರ ಆಕ್ಷೇಪದ ಬಳಿಕ 2-3 ನಿಮಿಷಗಳಲ್ಲಿ ಸ್ಥಳದಿಂದ ಪಲಾಯನ ಗೈದಿದ್ದರು.

Advertisement

ಭದ್ರತಾ ಪರಿಸ್ಥಿತಿಯನ್ನು ಕಾಪಾಡುವ ಬಗ್ಗೆ ಭದ್ರತೆ ಮತ್ತು ಅರೆಸೇನಾ ಪಡೆಗಳು ಜಾಗರೂಕವಾಗಿವೆ. ಯಾವುದೇ ಧರ್ಮದ ದೇಗುಲ, ಚರ್ಚ್, ಮಸೀದಿ, ಮಂದಿರ ಅಥವಾ ಗುರುದ್ವಾರವಾಗಿರಲಿ ಸುರಕ್ಷಿತವಾಗಿರಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಬಾರಾಮುಲ್ಲಾ ಜಿಲ್ಲೆಯ ಪಟ್ಟನ್‌ನಲ್ಲಿ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next