Advertisement

ಸಾವಿರ ಹೆಣ್ಣು ಮಕ್ಕಳ ಮತಾಂತರ

03:01 AM Dec 31, 2020 | Team Udayavani |

ಕರಾಚಿ: ಪಾಕಿಸ್ಥಾನದಲ್ಲಿ ಪ್ರತೀ ವರ್ಷ 1 ಸಾವಿರ ಹಿಂದೂ, ಸಿಕ್ಖ್, ಕ್ರೈಸ್ತ ಸಮುದಾಯದ 14 ವರ್ಷದೊಳಗಿನ ಹೆಣ್ಣು ಮಕ್ಕಳನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ!

Advertisement

“ಅಸೋಸಿಯೇಟೆಡ್‌ ಪ್ರಸ್‌’ ಸುದ್ದಿಸಂಸ್ಥೆಯ ತನಿಖಾ ವರದಿ, “ವಿವಾಹ ಉದ್ದೇಶಕ್ಕಾಗಿ ಇಂಥ ಕೃತ್ಯ ಎಸಲಾಗುತ್ತಿದೆ’ ಎಂಬ ಸಂಗತಿ ಬಹಿರಂಗಪಡಿಸಿದೆ. “ಅನ್ಯಧರ್ಮದ 14 ವರ್ಷದೊಳಗಿನ ಹೆಣ್ಮಕ್ಕಳ ಮತಾಂತರ ಲಾಕ್‌ಡೌನ್‌ ವೇಳೆ ಅತೀ ಹೆಚ್ಚು ನಡೆದಿದೆ’ ಎಂದು ವರದಿ ಹೇಳಿದೆ.

“ಲಾಕ್‌ಡೌನ್‌ನಲ್ಲಿ ಶಾಲೆಗಳು ಮುಚ್ಚಿದ್ದ ಕಾರಣ ಹೆಣ್ಮಕ್ಕಳು ಮನೆಯಲ್ಲೇ ಉಳಿದಿದ್ದರು. ಅವರ ಕುಟುಂಬಗಳು ಸಾಲದ ಸುಳಿಗೆ ಸಿಲುಕಿದ್ದವು. ಇದನ್ನೇ ದುರುಪಯೋಗಪಡಿಸಿಕೊಂಡ ವಧು ಕಳ್ಳಸಾಗಣೆದಾರರು ಇಂಟರ್ನೆಟ್‌ಗಳ ಮೂಲಕ ಇಂಥ ಕುಟುಂಬ ಗಳನ್ನು ಸಂಪರ್ಕಿಸಿ, ವ್ಯವಹಾರ ನಡೆಸಿದ್ದಾರೆ’ ಎಂದು ಮಾನವ ಹಕ್ಕು ಹೋರಾಟಗಾರರು ತಿಳಿಸಿದ್ದಾರೆ.

“ಹೆಣ್ಮಕ್ಕಳ ಕುಟುಂಬದವರು ಮತಾಂತರಕ್ಕೆ ಒಪ್ಪದಿದ್ದಾಗ ಹಲವರನ್ನು ಕಿಡ್ನ್ಯಾಪ್‌ ಮಾಡಿ, ಅತ್ಯಾಚಾರ ಎಸಗಲಾಗಿದೆ. ಕೆಲವು ಪ್ರಕರಣಗಳಲ್ಲಿ ಪೋಷಕರು ಸಾಲ ಪಡೆದ ಕಾರಣಕ್ಕಾಗಿ, ಹೆಣ್ಮಕ್ಕಳನ್ನು ಬಲವಂತವಾಗಿ ಮತಾಂತರಿಸಲಾಗಿದೆ. ಇಂಥ ಹೆಣ್ಮಕ್ಕಳನ್ನು ಇಸ್ಲಾಂ ವೃದ್ಧರು ಮದುವೆಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ಸಾಲು ಸಾಲು ಪ್ರಕರಣ
ಚರ್ಚ್‌ನಲ್ಲಿ ಸಂಗೀತ ಹೇಳುತ್ತಿದ್ದ 14 ವರ್ಷದ ನೇಹಾ ಇತ್ತೀಚೆಗೆ ಹಾಡೋದನ್ನೇ ನಿಲ್ಲಿಸಿದ್ದಾಳೆ. ಅವಳನ್ನು ಕಳೆದ ವಾರ ಬಲವಂತವಾಗಿ ಇಸ್ಲಾಮ್‌ಗೆ ಮತಾಂತರ ಮಾಡಲಾಗಿದ್ದು, ಇಬ್ಬರು ಮಕ್ಕಳ ತಂದೆ, 45 ವರ್ಷದ ವ್ಯಕ್ತಿ ಈಕೆಯನ್ನು ನಿಖಾ ಆಗಿದ್ದಾನೆ. ಆದರೆ ಎಳೆ ಹೆಣ್ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಈಕೆಯ ಗಂಡನನ್ನು ಜೈಲಿಗಟ್ಟಲಾಗಿದೆ. ಇತ್ತೀಚೆಗಷ್ಟೇ, ಸಿಂಧ್‌ ಪ್ರಾಂತ್ಯದಲ್ಲಿ 13 ವರ್ಷದ ಸೋನಿಯಾ ಕುಮಾರಿಯನ್ನು ಅಪಹರಿಸಿ, ಮತಾಂತರ ಮಾಡಲಾಗಿದೆ. ಕರಾಚಿಯ ತನ್ನ ಮನೆಯಿಂದ ಕಣ್ಮರೆಯಾಗಿರುವ 13 ವರ್ಷದ ಅಝೂì ರಾಜಾ, ಇನ್ನೂ ಪತ್ತೆಯಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next