Advertisement

ಎಲ್ಲರನ್ನೂ ಸೆಳೆಯುವ ರಂಗಭೂಮಿ

02:50 PM Sep 29, 2020 | Karthik A |

ಕಲೆಗೆ ಸಾವಿಲ್ಲ,ಕಲೆಗಾರನಿಗೆ ಸುಖವಿಲ್ಲ ಎಂಬ ಮಾತಿದೆ. ಕಲಾವಿದ ಎಷ್ಟೇ ಕಷ್ಟದಲ್ಲಿರಲಿ ರಂಗದಲ್ಲಿ ಆತ ಎಲ್ಲರಿಗೂ ಮನರಂಜನೆಯನ್ನೇ ನೀಡಲು ಬಯಸುತ್ತಾನೆ.

Advertisement

ಕಲಾರಂಗಕ್ಕೆ ಕಲಾವಿದನಿಗೆ ರಾಜ್ಯದಲ್ಲಂತೂ ಅಪಾರ ಮನ್ನಣೆಯನ್ನು ಎಲ್ಲರೂ ಕೊಡುತ್ತಾರೆ. ಹೌದು… ಒಂದು ಕಾಲದಲ್ಲಿ ದೂರದರ್ಶನ ಇಲ್ಲದಂತಹ ಪರಿಸ್ಥಿತಿ ಇತ್ತು. ಇಂತಹ ಸಮಯದಲ್ಲಿ ಪ್ರಾರಂಭವಾದದ್ದೇ ಪರದೆ ನಾಟಕ.

ಒಂದು ಬಿಳಿ ಪರದೆಯ ಹಿಂದೆ ಮನುಷ್ಯ ಅಥವಾ ಬೊಂಬೆ ಆಟದ ನೆರಳನ್ನು ತೋರಿಸುವುದರ ಮೂಲಕ ಜನರನ್ನು ಮನರಂಜಿಸುವುದರೊಂದಿಗೆ ಮೌಲ್ಯಯುತವಾದಂತಹ ಮಾಹಿತಿಯನ್ನು ನೀಡುತಿದ್ದರು. ಇದನ್ನು ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ವಯಸ್ಕರು ಕೂಡ ಮನರಂಜಿಸುತಿದ್ದರು. ಬರುಬರುತ್ತಾ ಊರಿನ ಜನ ಸೇರಿ ತಮ್ಮಿಂದಾಗುವಷ್ಟು ಅಭಿನಯದ ಮೂಲಕ ವೇದಿಕೆಯ ಮೇಲೆ ನಾಟಕಗಳನ್ನು ಮೂಡಿಸುವುದರ ಮೂಲಕ ಊರಿನ ಜನರನ್ನು ಆಕರ್ಷಿಸುತಿದ್ದರು.

ಆರಂಭದಲ್ಲಿ ಪೌರಾಣಿಕ ನಾಟಕಗಳೇ ಹೆಚ್ಚು
ರಾಮಾಯಣ, ಮಹಾಭಾರತದ ಪರ್ವ ಗಳು ಹೀಗೆ ಮುಂತಾದ ಪೌರಾಣಿಕ ನಾಟಕ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನ ಗೆಲ್ಲುವುದರೊಂದಿಗೆ ನಂತರದಲ್ಲಿ ಪೌರಾ ಣಿಕ ಕಥೆಗೆ ಸೀಮಿತವಲ್ಲದೆ, ಸಾಮಾಜಿಕ, ಧಾರ್ಮಿಕತೆಯನ್ನು ಬಿಂಬಿಸುವ ನಾಟಕ ಪ್ರದರ್ಶನಗೊಳ್ಳಲಾರಂಭವಾಯಿತು.

ರಂಗಕಲೆಗೆ ದೂರದರ್ಶನ, ರೇಡಿಯೋ ನೆರವು
ಸುಮಾರು 1927 ಇಸವಿಯಲ್ಲಿ ದೂರದರ್ಶನವು ಮಾರುಕಟ್ಟೆಯನ್ನು ಪ್ರವೇಶಿಸಿತು. ಅಂತ ಸಂದರ್ಭದಲ್ಲಿ ಜನರ ಚಿತ್ತವು ದೂರದರ್ಶನದ ಕಡೆಗೆ ಸೆಳೆದರೂ ನಾಟಕವು ಅದರಲ್ಲಿಯೂ ಕೂಡ ಧನಾತ್ಮಕವಾಗಿ ನೆಲೆಯೂರಿತು. ಆದರೂ ಜನರೆಲ್ಲರೂ ಒಟ್ಟಾಗಿ ಸೇರಿಕೊಳ್ಳುತ್ತಿದ್ದಂತಹ ಸಂದರ್ಭವು ಕಣ್ಮರೆಯಾಗತೊಡಗಿತು. ಕೇವಲ ದೂರದರ್ಶನ ಮಾಧ್ಯಮದಲ್ಲಿ ನಾಟಕಗಳು ಪ್ರದರ್ಶನ ಆಗುವ ಜತೆಗೆ ರೇಡಿಯೋದಲ್ಲಿಯೂ ಕೂಡ ಪ್ರಸಾರವಾಗುತ್ತದೆ ಇದು ಸಾಮಾನ್ಯ ಪ್ರೇಕ್ಷಕರಿಗಿಂತ, ಕೆಲಸ ಮಾಡುತ್ತಾ ಕೇಳುವವರಿಗೆ, ಚಾಲಕರಿಗೆ, ಮುಖ್ಯವಾಗಿ ದೃಷ್ಟಿಹೀನರಿಗೆ ಇದರಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಮನರಂಜಿಸುವುದರೊಂದಿಗೆ ಮೌಲ್ಯಯುತವಾಗಿರುತ್ತದೆ.

Advertisement

ರಂಗಭೂಮಿಗೆ ತಳಹದಿ
ಸರಿ ಸುಮಾರು 1920ರ ಹೊತ್ತಿಗೆ “ಗುಬ್ಬಿ ವೀರಣ್ಣ’ ಅವರು ರಂಗಭೂಮಿಗೆ ತಳಪಾಯವನ್ನು ಹಾಕಿಕೊಟ್ಟರು “ಗುಬ್ಬಿ ಶ್ರೀ ಚೆನ್ನಬಸವೇಶ್ವರ ನಾಟಕ ಮಂದಿರ’ ಪ್ರಾರಂಭಿಸುವುದರ ಮೂಲಕ ಕಲೆಗಾರರಿಗೆ ನೆಲೆ ಹುಟ್ಟುಹಾಕಿತು. ಜತೆಗೆ ಪ್ರೇಕ್ಷಕರನ್ನು ಆಕರ್ಷಿಸಿತು. ಇದರಿಂದ ಅನೇಕ ಪ್ರತಿಭಾವಂತರು ಹೊರ ಬಂದರು.

ಬೀದಿ ನಾಟಕಗಳು
ಕೇವಲ ವೇದಿಕೆಯ ಮೇಲೆ ಮಾತ್ರ ನಾಟಕಗಳನ್ನು ಪ್ರದರ್ಶಿಸುವುದಲ್ಲದೇ, ಬೀದಿಗಳಲ್ಲಿ ಜನರಿಗೆ ಮೌಲ್ಯಯುತದ ಮಾಹಿತಿಗಳನ್ನು ನೀಡುವುದರ ಮೂಲಕ ಸಮಾಜಕ್ಕೆ ಒಂದಷ್ಟು ಅರಿವನ್ನು ಮೂಡಿಸಿ ಪ್ರೇಕ್ಷಕರ ಮನ ಮುಟ್ಟುವ ಪ್ರಯತ್ನ ಮಾಡಿದ್ದು ಬೀದಿ ನಾಟಕಗಳು. ವೇದಿಕೆಯ ಮೇಲೆ ಮಾತ್ರ ಜನರನ್ನು ಆಕರ್ಷಿಸುವುದಲ್ಲದೆ ಬೀದಿ ಮೂಲಕವೂ ಜನರ ಮನವನ್ನು ನಾಟಕಗಳು ಪ್ರವೇಶಿಸಿತು. ರ’ ಪ್ರಾರಂಭಿಸುವುದರ ಮೂಲಕ ಕಲೆಗಾರರಿಗೆ ನೆಲೆ ಹುಟ್ಟುಹಾಕಿತು. ಜತೆಗೆ ಪ್ರೇಕ್ಷಕರನ್ನು ಆಕರ್ಷಿಸಿತು. ಇದರಿಂದ ಅನೇಕ ಪ್ರತಿಭಾವಂತರು ಹೊರ ಬಂದರು.

ನೀನಾಸಂ ತಿರುಗಾಟ
ನೀನಾಸಂ . ಪ್ರೋತ್ಸಾಹದ ತಳಹದಿಯಾಗಿದ್ದು, ಇದರ ಮುಖ್ಯ ಕೇಂದ್ರವು ಹೆಗ್ಗೊàಡು, ಸಾಗರ ತಾಲೂಕಿನಲ್ಲಿದೆ.  ಇಲ್ಲಿ ಇಂತಿಷ್ಟು ದಿನ ಗಳು ತರಬೇತಿ ಇರುತ್ತದೆ, ಇದರಲ್ಲಿ ಕೇವಲ ಅಭಿನಯ ಅಲ್ಲದೇ ನಾನಾ ರೀತಿಯ ವಿದ್ಯೆಗಳನ್ನು ಕಲಿಯಬಹುದು, ಪ್ರೇಕ್ಷಕರ ಮನದ ಮಾತುಗಳನ್ನು ಸಹ ಅರಿತುಕೊಳ್ಳುವಂತಹ ಸಾಮರ್ಥ್ಯವನ್ನು ಈ ಸಂಸ್ಥೆ ನೀಡುತ್ತದೆ. ಇದರ ತರಬೇತಿಗಳ ಅನಂತರ ಕಲೆಗಾರರು ಯಾರೂ ಕೂಡ ಒಂದೇ ಕಡೆಯವರು ಆಗಿರುವುದಿಲ್ಲ. ಬೇರೆ ಬೇರೆ ಕಡೆಗಳಿಂದ ಬಂದಂತಹ ನದಿಗಳು ಬಂದು ಸಾಗರ ಸೇರುವ ಹಾಗೆ ಕಲೆಗಾರರು ಒಂದಾಗುತ್ತಾರೆ.

 ಹರ್ಷಿತಾ ಎ.ಬಿ., ಎಸ್‌ಡಿಎಂ ಕಾಲೇಜು, ಉಜಿರೆ 

Advertisement

Udayavani is now on Telegram. Click here to join our channel and stay updated with the latest news.

Next