Advertisement

ಕೇರಳ ದೇಗುಲಕ್ಕೆ ಇ-ಆನೆ; ಇರಿಂಜಾಲಪ್ಪಿಲಿ ಶ್ರೀಕೃಷ್ಣ ದೇಗುಲದಲ್ಲಿ ಹೊಸ ಪ್ರಯೋಗ

07:46 PM Feb 20, 2023 | Team Udayavani |

ತಿರುವನಂತಪುರ : ದೇವಸ್ಥಾನಗಳ ಸಮಾರಂಭಗಳಲ್ಲಿ ಆನೆಗಳ ಉಪಸ್ಥಿತಿ ಸರ್ವೇಸಾಮಾನ್ಯ. ಅದೇ ರೀತಿ ಅವುಗಳ ಖರೀದಿ, ನಿರ್ವಹಣೆಗೆ ಆಗುವ ವೆಚ್ಚವೂ ಅಪಾರ. ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇರಳದ ದೇಗುಲವೊಂದು ಹೊಸ ಕಾರ್ಯಕ್ಕೆ ಕೈ ಹಾಕಿದ್ದು, ಇ-ಆನೆಯನ್ನು ಖರೀದಿಸಿದೆ.

Advertisement

ತ್ರಿಶ್ಶೂರ್‌ ಜಿಲ್ಲೆಯ ಇರಿಂಜಾಲಕ್ಕುಡ ಸಮೀಪವಿರುವ ಇರಿಂಜಾಡಪ್ಪಿಲ್ಲಿ ಶ್ರೀ ಕೃಷ್ಣ ದೇವಸ್ಥಾನ, ಇಲೆಕ್ಟ್ರಾನಿಕ್‌ ಆನೆಯನ್ನು ಖರೀದಿಸಿದೆ. 11 ಅಡಿ ಎತ್ತರವಿರುವ ಈ ಆನೆಯನ್ನು ಉಕ್ಕಿನಿಂದ ತಯಾರಿಸಲಾಗಿದ್ದು, ಮೇಲೆ ರಬ್ಬರ್‌ ಚರ್ಮದ ಹೊದಿಕೆಯನ್ನು ಹೊಂದಿದೆ. ಅಲ್ಲದೇ, ಥೇಟ್‌ ನಿಜವಾದ ಆನೆಯಂತೆ ಇ-ಆನೆ ತಲೆ ಆಡಿಸಲು ಮೋಟಾರ್‌ಗಳನ್ನು ಅಳವಡಿಸಲಾಗಿದೆ. 4 ಮಂದಿಯನ್ನು ಹೊತ್ತು ಆನೆ ಸಾಗಬಲ್ಲದ್ದಾಗಿದ್ದು, ಕಾಲಿಗೆ ಚಕ್ರಗಳನ್ನು ಅಳವಡಿಸಲಾಗಿದೆ.

800 ಕೆಜಿ ತೂಕವಿರುವ ಆನೆಯನ್ನು ಭಕ್ತರು ನೀಡಿದ ದೇಣಿಗೆ ಹಾಗೂ ಪ್ರಾಣಿ ಕಲ್ಯಾಣ ಸಂಘಗಳು ನೀಡಿದ ಸಹಾಯಧನದಿಂದ ಅಭಿವೃದ್ಧಿಪಡಿಸಲಾಗಿದ್ದು, 5 ಲಕ್ಷ ರೂ.ವೆಚ್ಚವಾಗಿದೆ. ಫೆ. 26ರಂದು ದೇಗುಲದಲ್ಲಿ ಇ-ಆನೆಯ ಅನಾವರಣವಾಗಲಿದೆ. ಅದಕ್ಕೆ ಆನೆಗೆ ಇರಿಂಜಾಡಪ್ಪಿಲ್ಲಿ ರಾಮನ್‌ ಎಂದು ಹೆಸರನ್ನಿಡಲಾಗಿದೆ ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next