Advertisement

ಬೆಂಗಳೂರಿನಲ್ಲಿ “ಎ’ತಂಡಗಳ ಟೆಸ್ಟ್‌

06:00 AM Aug 04, 2018 | Team Udayavani |

ಬೆಂಗಳೂರು: ಉದ್ಯಾನನಗರಿಯ “ಎಂ. ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ಶನಿವಾರದಿಂದ ಭಾರತ “ಎ’ ಮತ್ತು ದಕ್ಷಿಣ ಆಫ್ರಿಕಾ “ಎ’ ತಂಡಗಳ ನಡುವಿನ ಮೊದಲ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. 4 ದಿನಗಳ ಈ ಪಂದ್ಯದಲ್ಲಿ ಭಾರತ “ಎ’ ತಂಡವನ್ನು ಶ್ರೇಯಸ್‌ ಅಯ್ಯರ್‌, ದಕ್ಷಿಣ ಆಫ್ರಿಕಾ “ಎ’ ತಂಡವನ್ನು ಖಯ ಜೊಂಡೊ ಮುನ್ನಡೆಸುತ್ತಿದ್ದಾರೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆಯಲು ಇದೊಂದು ವೇದಿಕೆಯಾಗಲಿದೆ. ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌, ಆರ್‌. ಸಮರ್ಥ್, ಟೀಮ್‌ ಇಂಡಿಯಾದ ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಅವರೆಲ್ಲ ಆತಿಥೇಯ ತಂಡದ ಆಕರ್ಷಣೆಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next