Advertisement

ಮೈತ್ರೇಯಿ ಗುರುಕುಲ ವಿದ್ಯಾರ್ಥಿನಿಯರ ಪ್ರತಿಭಾ ದರ್ಶನ

01:01 AM Jan 03, 2020 | mahesh |

ವಿಟ್ಲಪಟ್ನೂರು ಗ್ರಾಮದ ಮೂರು ಕಜೆ ಮೈತ್ರೇಯಿ ಗುರುಕುಲದ ವಿ ದ್ಯಾರ್ಥಿನಿಯರು ಪತಂಜಲಿ ಯೋಗ ಪೀಠದ ಬಾಬಾ ರಾಮ್‌ ದೇವ್‌ ಉಪಸ್ಥಿತಿಯಲ್ಲಿ ವಿಶಿಷ್ಟವಾದ ಪ್ರತಿಭಾ ದರ್ಶನ ನೀಡಿ ವ್ಯಾಪಕ ಶ್ಲಾಘನೆಗೆ ಪಾತ್ರರಾದರು.

Advertisement

ಮಾತೃಶಕ್ತಿಯನ್ನು ಬಿಂಬಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಸಂಸ್ಕೃತ ಭಾಷೆಯಲ್ಲೇ ಸಂಭಾಷಣೆ ನಡೆಸಿದರು. ಮೈತ್ರೇಯಿ-ಯಾಜ್ಞ ವಲ್ಕé ಕಾತ್ಯಾಯಿನಿ ಅವರ ಮೂಲಕ ಜ್ಞಾನವೆ ನಿಜವಾದ ಸಂಪತ್ತು ಎಂಬ ಸಂದೇಶವನ್ನು ನೀಡಲಾಯಿತು. ಜೀಜಾಬಾಯಿ ಮುಖೇನ ರಾಷ್ಟ್ರಭಕ್ತಿಯನ್ನು ಸಾರಲಾಯಿತು. ವಿಶ್ವಸಾರಥಿ ವಿವೇಕಾನಂದರು ವಿಶ್ವವನ್ನೇ ಬೆರಗಾಗಿಸಿದ ದೃಶ್ಯವನ್ನು ಪ್ರದರ್ಶಿಸಲಾಯಿತು.

ಸತ್ಯವನ್ನೇ ನುಡಿಯುವ ಸಂದೇಶವನ್ನು ಸತ್ಯಕಾಮನಿಂದ ರವಾನಿಸಲಾಯಿತು. ಸೀತೆಯ ಜತೆ ಇದ್ದ ಲವ – ಕುಶರು ಅರಣ್ಯದಲ್ಲಿ ಆಟವನ್ನು ಆಡುತ್ತ ಮರವನ್ನು ಕಡಿಯಲು ಹೊರಟಾಗ ಸೀತೆ ಅದು ಸಲ್ಲದು ಎಂದು ಆಕ್ಷೇಪಿಸಿ, ಮರವನ್ನು ಉಳಿಸುವ ಪಾಠವನ್ನು ಬೋಧಿಸಲಾಯಿತು. ಯೋಗ,ನೃತ್ಯದಿಂದ ದೇಹ ಸುದೃಢವಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಯಿತು. ಕೊನೆಗೆ ತಾಯಿ ಸ್ತುತಿಯ ಮೂಲಕ ಇಚ್ಛಾ ಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿಯ ಸಮನ್ವಯತೆಯ ಭಾವವನ್ನು ಪ್ರದರ್ಶಿಸುವ ನೃತ್ಯ ಆಕರ್ಷಣೀಯವಾಗಿ ಮೂಡಿಬಂತು.

ವಿಶೇಷವೆಂದರೆ ಇಷ್ಟೊಂದು ಮಹಾನ್‌ ವ್ಯಕ್ತಿತ್ವಗಳನ್ನು ಅನಾಯಾಸವಾಗಿ ವಿದ್ಯಾರ್ಥಿನಿಯರು ಪರಿಚಯಿಸಿದರು ಹಾಗೂ ಕೇವಲ ಅರ್ಧ ಗಂಟೆಯಲ್ಲಿ ತುಣುಕು ತುಣುಕಾಗಿ ವಿವಿಧ ದೃಶ್ಯಗಳನ್ನು ಪ್ರದರ್ಶಿಸ ಲಾಯಿತು. ಪ್ರೇಕ್ಷಕರು ನೋಡುತ್ತಿದ್ದಂತೆ ವಿವಿಧ ಸಂದೇಶಗಳು, ಶ್ರೇಷ್ಠರ ನುಡಿಗಳು, ಸಮಕಾಲೀನ ಕಾಲಕ್ಕೆ ಅವಶ್ಯವಿರುವ ಸೂತ್ರಗಳು ಅವರಿಗೆ ಅರಿವಿಲ್ಲದೆಯೇ ಮನಸ್ಸಿನೊಳಗೆ ಹೊಕ್ಕುಬಿಟ್ಟವು.

ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸಬೇಕಾಗಿಲ್ಲ. ಆದರೆ ಅವರು ಎಲ್ಲಾ ಕ್ಷೇತ್ರಗಳಲ್ಲೂ ತಾವು ಪ್ರತಿಭಾವಂತರು ಎಂಬುದನ್ನು ಸಭೆಗೆ ತೋರಿಸಿಕೊಟ್ಟರು. ಒಂದೇ ಕಂಠದಲ್ಲಿ ವೇದ ಪಠನ, ವೇದ ಘೋಷವು ಪ್ರಕಟವಾಯಿತು. ನಿರರ್ಗಳವಾಗಿ ಸಂಸ್ಕೃತದಲ್ಲೇ ಮಾತನಾಡಿದ ಅವರು ಯಾವುದೇ ಅಳುಕಿಲ್ಲದೇ ದಿಟ್ಟವಾಗಿ ನಟಿಸಿದರು. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿನಿಯರಿದ್ದಾರೆ. ಅವರೆಲ್ಲರೂ ಏಕಮನಸ್ಸಿನಿಂದ ಏಕ ಕಂಠದಿಂದ ಭಾಷೆಗಳ ತೊಡಕಿಲ್ಲದೇ ಭಾಗವಹಿಸಿದರು. ಆ ಅವಧಿಯಲ್ಲಿ ಸಂಪೂರ್ಣ ತನ್ಮಯರಾಗಿ ಪಾಲ್ಗೊಂಡು ತಾವೇ ಆಸ್ವಾದಿಸಿದರು. ಪ್ರೇಕ್ಷಕರಿಗೆ ಇದು ಸಾಂಸ್ಕೃತಿಕ ಕಾರ್ಯಕ್ರಮವಾಗದೇ ಗುರುಕುಲ ವಿದ್ಯಾರ್ಥಿನಿಯರ ನೈಜ ಪ್ರತಿಭಾ ದರ್ಶನವಾಯಿತು.

Advertisement

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next