ಸುಬ್ರಹ್ಮಣ್ಯ: ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಸರ್ವತೋಮುಖ ಹೊಂದಲು ಸಾಧ್ಯ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕ ಪೊ| ಪ್ರಕಾಶ್ ಪ್ರಭು ಹೇಳಿದರು.ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿಗಳ ತರಗತಿವಾರು ಪ್ರತಿಭಾ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸೃಜನಶೀಲತೆಯು ವಿದ್ಯಾರ್ಥಿಯನ್ನು ಶ್ರೇಷ್ಠ ಮಟ್ಟಕ್ಕೆ ಕೊಂಡೊಯ್ಯತ್ತದೆ. ಭವಿಷ್ಯ ದಲ್ಲಿ ಸಾಂಸ್ಕೃತಿಕ ಜಗತ್ತಿಗೆ ತನ್ನದೇ ಆದಂತಹ ಕೊಡುಗೆ ನೀಡಲು ಇಂತಹ ಕಾರ್ಯಕ್ರಮ ಗಳು ಪೂರಕವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪೊ›| ಕೆ.ಆರ್. ಶೆಟ್ಟಿಗಾರ್, ವಿದ್ಯಾರ್ಥಿಗಳು ತಮಗಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಯುವ ಕಲಾವಿದ, ಕೊಳಲು ವಾದಕ ಪ್ರವೀಣ್ ಯೇನೆಕಲ್ಲು ಅವರನ್ನು ಕಾಲೇಜಿನ ವತಿಯಿಂದ ಸಮ್ಮಾನಿಸಲಾಯಿತು.
ಸಾಂಸ್ಕೃತಿಕ ತಂಡದ ಸಂಯೋಜಕ ಪ್ರೊ| ಬಾಲಕೃಷ್ಣ ಪೈ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ವೇತಾ ಮುತ್ಲಾಜೆ ವಂದಿಸಿದರು. ಹರ್ಷಿತ್ ಪಡ್ರೆ ನಿರೂಪಿಸಿದರು. ಸಮಾರಂಭದ ಅನಂತರ ವಿವಿಧ ತರಗತಿಗಳ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಿತು.