Advertisement

ಹೆಣವಾಗಿ ಪತ್ತೆಯಾದ ತೈವಾನ್‌ ಶತಕೋಟ್ಯಧಿಪತಿ

12:28 AM May 25, 2023 | Team Udayavani |

ತೈವಾನ್‌: ಇತ್ತೀಚೆಗಷ್ಟೇ 134 ಕೋಟಿ ರೂ.ಗಳ ಆಸ್ತಿಗೆ ಉತ್ತರಾಧಿ­ಕಾರಿಯಾಗಿದ್ದ ತೈವಾನ್‌ ಮೂಲದ ಯುವಕನೊಬ್ಬ ತಾನು ಮದುವೆ­ಯಾದ ಕೇವಲ 2 ಗಂಟೆಗಳಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

Advertisement

ಲೈ ಎನ್ನುವ 18 ವರ್ಷದ ಯುವಕನ ತಂದೆ ಎಪ್ರಿಲ್‌ನಲ್ಲಿ ಮೃತಪಟ್ಟಿದ್ದು ಅವರ ಸಂಪೂರ್ಣ ಆಸ್ತಿಗೆ ಮಗನನ್ನು ಉತ್ತರಾಧಿಕಾರಿಯ­ನ್ನಾ­ಗಿ­ಸಿದ್ದಾರೆ. ಬಳಿಕ ಅವರ ಆಸ್ತಿಯ ಮೇಲ್ವಿಚಾರಕರಾದ ರಿಯಲ್‌ ಎಸ್ಟೇಟ್‌ ಏಜೆಂಟ್‌ ಎಸ್ಸಿಯಾ ಎಂಬುವವರು 2 ಬಾರಿ ಲೈನನ್ನು ಭೇಟಿಯಾಗಿದ್ದಾರೆ. ಅನಂತರ ಇದ್ದಕ್ಕಿದ್ದಂತೆ ಮೇ 4ರಂದು ಎಸ್ಸಿಯಾ ಮನೆಯಲ್ಲಿ ಲೈ ಶವವಾಗಿ ಪತ್ತೆಯಾಗಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಬಿಂಬಿಸಲಾಗಿದೆ. ಮತ್ತೂಂದೆಡೆ ಲೈ ಮತ್ತು ಎಸ್ಸಿಯಾ ಸಲಿಂಗಕಾಮಿಗಳಾಗಿದ್ದರು ಈ ಹಿನ್ನೆಲೆ ಲೈ ಎಸ್ಸಿಯಾ ಜತೆಗೆ ತಾನು ಸಾಯುವ 2 ಗಂಟೆಗೆ ಮೊದಲಷ್ಟೇ ವಿವಾಹ ನೋಂದಣಿ ಮಾಡಿಕೊಂಡಿದ್ದರು ಎಂಬುದು ತಿಳಿದುಬಂದಿದೆ. ಇತ್ತ ಲೈ ಅವರ ತಾಯಿ ತನ್ನ ಮಗ ಸಲಿಂಗಕಾಮಿ ಎನ್ನುವುದನ್ನು ತಳ್ಳಿ ಹಾಕಿದ್ದಾರೆ. ಅಲ್ಲದೇ ತೈವಾನ್‌ ಕಾನೂನಿನ ಪ್ರಕಾರ ಸಾಮಾನ್ಯ ವಿವಾಹವಾದ ದಂಪತಿಗಿರುವಂತೆಯೇ, ಸಲಿಂಗ ದಂಪತಿಗೂ ಸಂಗಾತಿಯ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿರುವ ಹಿನ್ನೆಲೆ ಎಸ್ಸಿಯನೆ ಈ ಸಂಚು ರೂಪಿಸಿ ತನ್ನ ಮಗನನ್ನು ಕೊಂದಿದ್ದಾನೆಂದು ಆರೋಪಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next