Advertisement

Tiger: ಹುಲಿ ಉಗುರು ಹೆಸರಲ್ಲಿ ಏಕಾಏಕಿ ಬಂಧನ ಸರಿಯಲ್ಲ: ಆರಗ ಜ್ಞಾನೇಂದ್ರ

11:26 PM Oct 27, 2023 | Team Udayavani |

ತೀರ್ಥಹಳ್ಳಿ: ಕೆಲವು ದಿನಗಳಿಂದ ಹುಲಿ ಉಗುರು ವಿಷಯ ತೀವ್ರ ಚರ್ಚೆಯಾಗುತ್ತಿದ್ದು, ಇದಕ್ಕೆ ಸಂಬಂಧಿಸಿ ಕೆಲವರನ್ನು ಬಂ ಧಿಸಲಾಗಿದೆ. ಪ್ರಚಾರದ ಗೀಳಿಗೆ ಬಿದ್ದವರಂತೆ ಅರಣ್ಯ ಅಧಿ ಕಾರಿಗಳು ಕೆಲವರನ್ನು ಬಂಧಿಸುತ್ತಿದ್ದಾರೆ ಹಾಗೂ ಪೂರ್ವಾಪರ ನೋಡದೆ ಕೇಸ್‌ ದಾಖಲಿಸುತ್ತಿದ್ದಾರೆ. ಇದೆಲ್ಲ ಸರಿಯಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Advertisement

ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಲೆನಾಡು, ಕರಾವಳಿ ಭಾಗದ ಮನೆಗಳಲ್ಲಿ ಇಂದಿಗೂ ನೂರಾರು ವರ್ಷದ ಕೋಡುಗಳಿವೆ. ಕಾಡೆಮ್ಮೆ, ಕಾಡುಕೋಣ, ಜಿಂಕೆಯ ಕೋಡುಗಳನ್ನು ಆಲಂಕಾರಿಕ ವಸ್ತುಗಳಾಗಿ ಇರಿಸಿಕೊಂಡಿದ್ದಾರೆ. ವನ್ಯಜೀವಿ ಸಂರಕ್ಷಣೆ ಕಾಯ್ದೆ ಬರುವ ಮುಂಚೆಯೇ ಕೆಲವು ವಸ್ತುಗಳನ್ನು ಬಳಸುತ್ತಿದ್ದರು. ಹೀಗಿರುವಾಗ ಬಂಧಿಸಿ ಜೈಲಿಗೆ ಹಾಕುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಹಿಂದೂ-ಮುಸ್ಲಿಂ ಭಾವೈಕ್ಯದ ಕ್ಷೇತ್ರವಾಗಿರುವ ಶಿವಮೊಗ್ಗದ ಹಣಗೆರೆಯಲ್ಲಿ ನವಿಲು ಗರಿ ಮೂಲಕ ಆಶೀರ್ವಾದ ಮಾಡಲಾಗುತ್ತದೆ. ಅದು ಒಂದು ಪದ್ಧತಿ. ನವಿಲು ಗರಿ ಸಂಗ್ರಹಿಸಿದ್ದಕ್ಕೆ ಅದು ರಾಷ್ಟ್ರೀಯ ಪಕ್ಷಿಯದ್ದು ಎಂಬ ಕಾರಣ ಮುಂದಿಟ್ಟು ಪ್ರಕರಣ ದಾಖಲಿಸಿ ಬಂಧಿಸಲು ಆಗುತ್ತದಾ? ಟಿಪ್ಪುವನ್ನು ನಾವು ನೋಡುವುದೇ ಹುಲಿಯನ್ನು ಕೊಲ್ಲುತ್ತಿರುವ ಫೋಟೋದಲ್ಲಿ. ಅದನ್ನು ನೋಡಿ ಪ್ರೇರಣೆ ಪಡೆದು ಹುಲಿಯನ್ನು ಕೊಲ್ಲಲು ಜನ ಮುಂದಾದರೆ ಹೇಗೆ? ಹಾಗಂತ ಫೋಟೋ ಇಟ್ಟುಕೊಂಡವರನ್ನೆಲ್ಲ ಬಂಧಿಸಲು ಸಾಧ್ಯವೇ? ನಾನು ವನ್ಯಜೀವಿ ಕಾಯ್ದೆಗೆ ವಿರುದ್ಧವಾಗಿ ಮಾತನಾಡುತ್ತಿಲ್ಲ.

ವನ್ಯಜೀವಿ ಹತ್ಯೆ, ವಸ್ತುಗಳ ಮಾರಾಟದ ವಿರುದ್ಧ ಕ್ರಮ ಆಗಬೇಕು. ಆದರೆ ನೂರಾರು ವರ್ಷಗಳಿಂದ ಇರುವುದಕ್ಕೆಲ್ಲ ಕಾಯ್ದೆ ಅನ್ವಯ ಆಗಬಾರದು. ಅಂಥವರನ್ನೆಲ್ಲ ಬಂಧಿಸುತ್ತಾ ಹೋದರೆ ರಾಜ್ಯದ ಜೈಲುಗಳು ಸಾಕಾಗದು. ಕೂಡಲೇ ರಾಜ್ಯ ಸರಕಾರ ಮಧ್ಯಪ್ರವೇಶ ಮಾಡಬೇಕು ಎಂದು ಆರಗ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next