ತಿ.ನರಸೀಪುರ: ಉಪನಗರ ಮಾದರಿಯಲ್ಲಿ ತಿ.ನರಸೀಪುರ ಪಟ್ಟಣವನ್ನು ಅಭಿವೃದ್ಧಿ ಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ವಹಿಸಿರುವ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪನವರು ಪಟ್ಟಣಕ್ಕೆ ಹೆಚ್ಚಿನ ಯೋಜನೆಗಳನ್ನು ಮಂಜೂರು ಮಾಡಿದ್ದಾರೆ ಎಂದು ಪುರಸಭಾ ಅಧ್ಯಕ್ಷೆ ಸುಧಾ ಗುರುಮಲ್ಲಪ್ಪ ಹೇಳಿದರು.
ಗುರುವಾರ ಪಟ್ಟಣದ ಜೆಎಸ್‌ಎಸ್ ಸಭಾ ಭವನದ ಬಳಿ ಎಸ್‌ಎಫ್ಸಿ ಹಾಗೂ 14ನೇ ಹಣಕಾಸು ಯೋಜನೆಯ 1,30 ಕೋಟಿ ರೂ. ಅನುದಾನದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣ ಸೇರಿದಂತೆ ದಿನದ 24 ತಾಸು ನಿರಂತರ ಕುಡಿಯುವ ನೀರಿನ ಯೋಜನೆಯನ್ನು ನೀಡುವ ಮೂಲಕ ಪಟ್ಟಣಕ್ಕೆ ಉಪ ನಗರ ಸ್ವರೂಪ ನೀಡಲು ಮುಂದಾಗಿದ್ದಾರೆ ಎಂದರು.
ಪುರಸಭೆಯಾಗಿ ಮೇಲ್ದರ್ಜೆಗೇರಿದ ಕೂಡಲೇ ಸದಸ್ಯರ ನಿಯೋಗ ತೆರಳಿ ಹೆಚ್ಚಿನ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಗೆ ಮುಖ್ಯ ಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ವರ್ಷದೊಳಗೆ ಪಟ್ಟಣಕ್ಕೆ ಮತ್ತಷ್ಟು ಯೋಜನೆಗಳು ಹಾಗೂ ಹೆಚ್ಚಿನ ಅನುದಾನ ಬರುವ ನಿರೀಕ್ಷೆಯಿದೆ. ಪುರಸಭೆಯ ಪ್ರಸಕ್ತ ಸದಸ್ಯರೆಲ್ಲರೂ ಪುರಸಭೆಗೆ ಸೇರ್ಪಡೆಗೊಂಡ ಬಡಾವಣೆಗಳ ಕಡೆಗೂ ಗಮನವನ್ನು ನೀಡುತ್ತೇವೆ ಎಂದು ಸುಧಾ ಗುರುಮಲ್ಲಪ್ಪ ತಿಳಿಸಿದರು.
ಕಾಂಗ್ರೆಸ್ ಯುವ ಮುಖಂಡ ಸುನೀಲ್ ಬೋಸ್ ಮಾತನಾಡಿ, ಪರಿವರ್ತಿತ ಪುರ ಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ಬಡಾ ವಣೆಗಳಲ್ಲಿ ಜನಪ್ರತಿನಿಧಿಗಳಿಲ್ಲದ್ದರಿಂದ ಅಭಿವೃದ್ಧಿಗೆ ಹಾಗೂ ಅಲ್ಲಿನ ಜನರಿಗೆ ಮೂಲ ಭೂತ ಸೌಲಭ್ಯವನ್ನು ಒದಗಿಸಲು ಸದಸ್ಯರು ಹಾಗೂ ಅಧಿಕಾರಿಗಳು ಹೆಚ್ಚಿನ ಗಮನವನ್ನು ನೀಡಬೇಕು. ಅಭಿವೃದ್ಧಿಗೆ ಪೂರಕವಾಗಿ ಪûಾತೀತವಾಗಿ ಎಲ್ಲಾ ಮುಖಂಡರ ಸಲಹೆ ಸಹಕಾರವನ್ನು ಪಡೆದುಕೊಳ್ಳಬೇಕು. ಮುಂದಿನ ಎಲ್ಲಾ ಯೋಜನೆಗಳು ಪುರಸಭೆ ಯನ್ನು ಕೇಂದ್ರೀಕರಿಸಿ ರೂಪುಗೊಳ್ಳಬೇಕೆಂದು ಸಲಹೆ ನೀಡಿದರು.
ಜಿಪಂ ಸದಸ್ಯ ಟಿ.ಎಚ್. ಮಂಜು ನಾಥನ್, ಪುರಸಭೆ ಉಪಾಧ್ಯಕ್ಷೆ ರತ್ನಮ್ಮ, ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಸದಸ್ಯ ರಾದ ಟಿ.ಜೆ. ಪುಟ್ಟಸ್ವಾಮಿ, ನೈಸ್ ಮಹದೇವ ಸ್ವಾಮಿ, ಸಿ.ಉಮೇಶ್, ಶಶಿಕಲಾ ಪ್ರಕಾಶ್, ಮೀನಾಕ್ಷಿ, ನಾಮ ನಿರ್ದೇಶಿತ ಸದಸ್ಯರಾದ ಎನ್.ಮಹದೇವಸ್ವಾಮಿ, ಸಿ.ಮಹದೇವ, ಗುಲ್ಜಾರ್ ಖಾನ್, ಮೃಗಾಲಯ ಪ್ರಾಧಿಕಾರದ ನಿರ್ದೇಶಕಿ ಲತಾ ಜಗದೀಶ್, ಕಿರಿಯ ಎಂಜಿನಿಯರ್ ಕೆ.ಪುರುಷೋತ್ತಮ,
ಪಪಂ ಮಾಜಿ ಅಧ್ಯಕ್ಷರಾದ ಬಸವಣ್ಣ, ವೀರೇಶ್, ಎನ್.ಪಿ. ಕನಕರಾಜು, ಎಸ್. ನಂಜುಂಡ ಸ್ವಾಮಿ, ಟಿಎಪಿಸಿಎಂಎಸ್ ನಿರ್ದೇಶಕ ಬಿ.ಮಹದೇವ, ಗುತ್ತಿಗೆದಾರ ಜೆ.ಅನೂಪ್‌ಗೌಡ, ಯೋಜನಾಧಿಕಾರಿ ಕೆಂಪರಾಜು, ತಾಪಂ ಸದಸ್ಯ ಕೆ.ಎಸ್.ಗಣೇಶ್, ಗ್ರಾಪಂ ಮಾಜಿ ಅಧ್ಯಕ್ಷ ಅಕ್ಕೂರು ಮಹೇಶ, ಮುಖಂಡರಾದ ಅಂಗಡಿ ಸಿದ್ದ, ಉಕ್ಕಲಗೆರೆ ರಾಜು, ಕಲಿಯೂರು ಶಿವಣ್ಣ, ಕುಮಾರ ಹಾಗೂ ಇನ್ನಿತರರು ಹಾಜರಿದ್ದರು.