ಕಾಸರಗೋಡು: ಗಡಿ ಪ್ರದೇಶದ ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಎಲೆಚುಕ್ಕಿ ರೋಗ, ಹಳದಿ ರೋಗ, ತಿರಿ ಕೊಳೆ ರೋಗದ ಬಗ್ಗೆ ಅಧ್ಯಯನ ನಡೆಸಲು ಕಾಸರಗೋಡು ಸಿಪಿಸಿಆರ್‌ಐ ಕೇಂದ್ರದ ವಿಜ್ಞಾನಿಗಳು ಪೆರ್ಲ ಬೆದ್ರಂಪಳ್ಳ ಸಮೀಪದ ನಡುಬೈಲಿನಲ್ಲಿರುವ ಶ್ರೀಧರ ಮಾಸ್ತರ್ ಕುಕ್ಕಿಲ ಅವರ ಅಡಿಕೆ ತೋಟಕ್ಕೆ ಭೇಟಿ ನೀಡಿ ರೋಗದ ಬಗ್ಗೆ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಿದರು.
ಸ್ಥಳದಿಂದ ಮಣ್ಣು ಹಾಗೂ ಹಾನಿಕಾರಕ ಕೀಟಗಳನ್ನು ಸಂಗ್ರಹಿಸಿದ ವಿಜ್ಞಾನಿಗಳು ರೋಗದ ವಿರುದ್ಧ ತಾತ್ಕಾಲಿಕ
ಔಷ ಧ ಪ್ರಯೋಗಕ್ಕೆ ಸೂಕ್ತ ಸಲಹೆ ನೀಡಿದರು. ಮಣ್ಣು ಹಾಗೂ ಹಾನಿಕಾರಕ ಕೀಟಗಳ ಬಗ್ಗೆ ಅಧ್ಯಯನ ನಡೆಸಿದ ಅನಂತರ ಶಾಶ್ವತ ಪರಿಹಾರದ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಿಪಿಸಿಆರ್‌ಐ ವಿಜ್ಞಾನಿಗಳಾದ ಡಾ| ಪ್ರತಿಭಾ, ಡಾ| ರಾಜ್‌ಕುಮಾರ್ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸರಿತಾ ಹೆಗ್ಡೆ ಸ್ಥಳ ಸಂದರ್ಶನ ನಿಯೋಗದಲ್ಲಿದ್ದರು. ಈ ಸಂದರ್ಭ ಪ್ರಗತಿಪರ ಕೃಷಿಕರಾದ ನಾರಾಯಣ ಭಟ್ ಕನ್ನಟಿಕಾನ, ಶ್ರೀಧರ ಮಾಸ್ತರ್ ಉಪಸ್ಥಿತರಿದ್ದರು.