Advertisement
ಹಾರ್ದಿಕ್ ಪಾಂಡ್ಯ ವಿಶ್ವಕಪ್‌ನಿಂದ ಹೊರಬಿದ್ದ ಸುದ್ದಿ ಅಧಿಕೃತಗೊಂಡದ್ದು ಭಾರತದ ಪಾಲಿಗೆ ತುಸು ಮಾನಸಿಕ ಹಿನ್ನಡೆ ಆಗಬಹುದಾದರೂ ಇದರಿಂದ ಹೊರಬರುವ ಸಾಮರ್ಥ್ಯವಂತೂ ಇದ್ದೇ ಇದೆ. ಅಂದು ಅಜೇಯ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸುವಾಗಲೂ ಭಾರತ ಪಾಂಡ್ಯ ಸೇವೆಯಿಂದ ವಂಚಿತವಾಗಿತ್ತು. ಆದರೂ ಗೆಲುವಿಗೇನೂ ಅಡ್ಡಿ ಆಗಿರಲಿಲ್ಲ. ಅನಂತರವೂ ರೋಹಿತ್ ಪಡೆಯ ಗೆಲುವಿನ ಓಟ ಮುಂದುವರಿಯಿತು. ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಶರಣಾದವು. ಇವೆರಡೂ ಭಾರೀ ಅಂತರದ ಗೆಲುವುಗಳಾಗಿದ್ದವು. ಆಂಗ್ಲರನ್ನು 100 ರನ್ನುಗಳಿಂದ, ಲಂಕೆಯನ್ನು 302 ರನ್ನುಗಳಿಂದ ಉರುಳಿಸಿದ ಹಿರಿಮೆ ಟೀಮ್ ಇಂಡಿಯಾದ್ದಾಗಿತ್ತು.
Related Articles
ದಕ್ಷಿಣ ಆಫ್ರಿಕಾ ವಿಭಿನ್ನ ಮಾದರಿಯ ತಂಡ. ಈ ಬಾರಿಯಂತೂ ಅತ್ಯಂತ ಬಲಾಡ್ಯ ಪಡೆಯನ್ನು ಕಟ್ಟಿಕೊಂಡು ಬಂದಿದೆ. ಎಲ್ಲರೂ ಪವರ್ ಹಿಟ್ಟರ್. ಮೊದಲು ಬ್ಯಾಟಿಂಗ್ ನಡೆಸಿದರೆ ಸ್ಕೋರ್‌ಬೋರ್ಡ್ 350 ರನ್ ದಾಖಲಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಚೇಸಿಂಗ್‌ನಲ್ಲಿ ಬವುಮ ತಂಡ ಹಿಂದುಳಿದಿದೆ. ಇದಕ್ಕೆ ನೆದರ್ಲೆಂಡ್ಸ್ ಎದುರಿನ ಪಂದ್ಯವೇ ಸಾಕ್ಷಿ. ಬಳಿಕ ಪಾಕ್ ವಿರುದ್ಧ 271 ರನ್ ಬೆನ್ನಟ್ಟುವಾಗಲೂ ಪರದಾಡಿತ್ತು. ಕೇಶವ್ ಮಹಾರಾಜ್ ಕೊನೆಯಲ್ಲೊಂದು ಬೌಂಡರಿ ಬಾರಿಸಿ ಒಂದು ವಿಕೆಟ್ ಅಂತರದ ರೋಚಕ ಗೆಲುವು ತಂದಿತ್ತಿದ್ದರು.
Advertisement
ಬರ್ತ್‌ಡೇ ಬಾಯ್ ಕೊಹ್ಲಿಟಾಸ್ ಗೆದ್ದರೆ ಭಾರತವೇ ಮೊದಲು ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ದಾಖಲಿಸುವುದು ಕ್ಷೇಮ ಎನಿಸುತ್ತದೆ. ರೋಹಿತ್, ಗಿಲ್, ಕೊಹ್ಲಿ, ಅಯ್ಯರ್, ರಾಹುಲ್, ಜಡೇಜ ಕ್ರೀಸ್ ಆಕ್ರಮಿಸಿಕೊಂಡರೆ ಇದು ಕಷ್ಟವೇನಲ್ಲ. ಅಂದಹಾಗೆ ರವಿವಾರ ವಿರಾಟ್ ಕೊಹ್ಲಿ ಬರ್ತ್‌ಡೇ. ಅವರು ವಿಶ್ವದಾ ಖಲೆಯ 49ನೇ ಶತಕದ ಹೊಸ್ತಿಲಲ್ಲಿ ನಿಂತಿದ್ದಾರೆ. ಇದಕ್ಕೆ “ಈಡನ್’ ಬಾಗಿಲು ತೆರೆದೀತೇ ಎಂಬ ಕೌತುಕ ಎಲ್ಲರದೂ. ಆಸ್ಟ್ರೇಲಿಯ (85), ನ್ಯೂಜಿಲ್ಯಾಂಡ್ (95) ಮತ್ತು ಶ್ರೀಲಂಕಾ ವಿರುದ್ಧ (88) ಅವರಿಗೆ ಸೆಂಚುರಿ ತಪ್ಪಿತ್ತು. ಇದು ರೋಹಿತ್ ಶರ್ಮ ಅವರ ನೆಚ್ಚಿನ ಕ್ರೀಡಾಂಗಣವೂ ಹೌದು. ದ. ಆಫ್ರಿಕಾಕ್ಕೆ ಬೇಕು ಬ್ರೇಕು
ಅಕಸ್ಮಾತ್ ದಕ್ಷಿಣ ಆಫ್ರಿಕಾಕ್ಕೆ ಫಸ್ಟ್ ಬ್ಯಾಟಿಂಗ್ ಅವಕಾಶ ಲಭಿಸಿದರೆ ಅವರನ್ನು ಸಾಮಾನ್ಯ ಮೊತ್ತಕ್ಕೆ ಹಿಡಿದು ನಿಲ್ಲಿಸಲೇಬೇಕು. ಅರ್ಥಾತ್, ಡಿ ಕಾಕ್, ಡುಸೆನ್, ಮಾರ್ಕ್‌ರಮ್, ಕ್ಲಾಸೆನ್ ಮೊದಲಾದವರಿಗೆ ದೊಡ್ಡ ಲಗಾಮು ತೊಡಿಸಬೇಕು. ಡಿ ಕಾಕ್ ಈ ಪಂದ್ಯಾವಳಿಯಲ್ಲಿ ಈಗಾಗಲೇ 4 ಶತಕ ಬಾರಿಸಿ ಅತ್ಯಮೋಘ ಫಾರ್ಮ್ ಪ್ರದರ್ಶಿಸಿದ್ದಾರೆ. 545 ರನ್ ಬಾರಿಸಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇದೇ ಕೂಟದಲ್ಲಿ ವಿಶ್ವಕಪ್ ಇತಿಹಾಸದ ಸರ್ವಾಧಿಕ ರನ್ ಬಾರಿಸಿದ ಹೆಗ್ಗಳಿಕೆ ಕೂಡ ದಕ್ಷಿಣ ಆಫ್ರಿಕಾದ್ದಾಗಿದೆ (5ಕ್ಕೆ 428 ರನ್). ಇದೆಲ್ಲ ಭಾರತದ ಪಾಲಿಗೆ ಎಚ್ಚರಿಕೆಯ ಗಂಟೆ. ಎಲ್ಲದಕ್ಕೂ ಸೈ
ಭಾರತ ಚೇಸಿಂಗ್‌ನಲ್ಲಿ ಹಿಂದೆ ಬಿದ್ದಿಲ್ಲ. ಮೊದಲ 5 ಪಂದ್ಯಗಳನ್ನು ಚೇಸ್ ಮಾಡಿಯೇ ಗೆದ್ದಿತ್ತು. ಇಂಗ್ಲೆಂಡ್ ಮತ್ತು ಲಂಕಾ ವಿರುದ್ಧ ಘಾತಕ ಬೌಲಿಂಗ್ ನಡೆಸಿ ಜಯಭೇರಿ ಮೊಳಗಿಸಿತ್ತು. ಎಲ್ಲದಕ್ಕೂ ಸೈ ಎಂಬುದು ಭಾರತದ ಥಿಯರಿ. ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ಎದುರಾಳಿಗಳ ಪಾಲಿಗೆ ಸಿಂಹಸ್ವಪ್ನ ರಾಗುತ್ತಿದ್ದಾರೆ. 2 ಸಲ 5 ವಿಕೆಟ್ ಉರುಳಿಸಿದ್ದು, 3 ಪಂದ್ಯಗಳಿಂದ 14 ವಿಕೆಟ್ ಕೆಡವಿದ ಸಾಧನೆಗೈದಿದ್ದಾರೆ. ಬುಮ್ರಾ, ಸಿರಾಜ್ ಕೂಡ ಸಿಡಿಲಾಗಿ ಎರಗುತ್ತಿದ್ದಾರೆ.