Advertisement

ಎರಡು ಸೆಕೆಂಡ್‌ಗೊಬ್ಬ ಗ್ರಾಹಕ ಜನನ, ಗ್ರಾಹಕ ಪತ್ರಿಕೆಗೆ ಬಂಜೆತನ!

07:15 AM Jul 31, 2017 | Harsha Rao |

ಗ್ರಾಹಕ ರಕ್ಷಣೆ, ಕಾನೂನು, ಮಾಹಿತಿಗಳನ್ನು ಕೇಂದ್ರೀಕರಿಸಿಕೊಂಡ ಆಂಗ್ಲ ಪತ್ರಿಕೆಗಳನ್ನು ಅರಸುತ್ತ ಹೊರಟರೆ ದೊಡ್ಡ ನಿರಾಶೆ ಕಾಡುತ್ತದೆ. ಹಲವು ವರ್ಷಗಳ ಕಾಲ “ಇನ್‌ಸೈಟ್‌’ ಎಂಬ ಗ್ರಾಹಕ ಪರ ಪತ್ರಿಕೆ ಗ್ರಾಹಕ ಜಾಗೃತಿಯಲ್ಲಿ ಅತಿ ದೊಡ್ಡ ಕೆಲಸ ಮಾಡಿ ಕಣ್ಮುಚ್ಚಿಕೊಂಡಿತು. ಈಗ ಉಳಿದಿರುವುದು “ಕನ್ಸೂ$Âಮರ್‌ ವಾಯ್ಸ’ ಎಂಬ ಏಕೈಕ ಆಂಗ್ಲ ಪತ್ರಿಕೆ ಮಾತ್ರ!

Advertisement

ಭಾರತದ ಜನಸಂಖ್ಯೆ 2011ರ ಜನಗಣತಿಯ ಪ್ರಕಾರ 1.21 ಬಿಲಿಯನ್‌. 2016ರಲ್ಲಿ 1.324 ಬಿಲಿಯನ್‌ ಎಂಬುದು ಒಂದು ಅಂದಾಜು. ಅಷ್ಟಿಷ್ಟಲ್ಲ ಎಂದು ಪ್ರತಿಪಾದಿಸುವ ಜನಗಣತಿಯ ಸ್ವಯಂಚಾಲಿತ ಕೌಂಟರ್‌ ಒಂದು ಈ ಕ್ಷಣಕ್ಕೆ ಜನಸಂಖ್ಯೆ 1,283,021 ಎಂದು ಸಾರುತ್ತದೆ. ಈ ಲೆಕ್ಕಾಚಾರಗಳ ಹೊರತಾಗಿಯೂ ಭಾರತದ ಜನಸಂಖ್ಯೆ 120 ಕೋಟಿಗಿಂತ ಹೆಚ್ಚು ಎಂಬುದು ಖಚಿತ. ಇವರಲ್ಲಿ ಗ್ರಾಹಕ ಯಾರು ಎಂದು ವ್ಯಾಖ್ಯಾನಿಸುವ ಕೆಲಸಕ್ಕೆ ನಾವು ಮುಂದಾದರೆ ಅಷ್ಟೂ ಮಂದಿ ಗ್ರಾಹಕರೇ ಆಗುತ್ತಾರೆ. ಪ್ರತಿ ಎರಡು ಸೆಕೆಂಡ್‌ಗೊಂದರಂತೆ ಭಾರತದಲ್ಲಿ ಜನಿಸುತ್ತಿರುವ ಪ್ರತಿ ಮಗುವು ಏನಕೇನ ಪ್ರಕಾರೇಣ ಗ್ರಾಹಕನೇ ಆಗುತ್ತದೆ.

ಇಂಗ್ಲಿಷ್‌ಗೊಂದೇ ಗ್ರಾಹಕ ಪತ್ರಿಕೆಯೇ?
ಈ ಪ್ರಮಾಣದ ಗ್ರಾಹಕರಿರುವ ದೇಶದಲ್ಲಿ ಗ್ರಾಹಕ ರಕ್ಷಣೆ, ಕಾನೂನು, ಮಾಹಿತಿಗಳನ್ನು ಕೇಂದ್ರೀಕರಿಸಿಕೊಂಡ ಆಂಗ್ಲ ಪತ್ರಿಕೆಗಳನ್ನು ಅರಸುತ್ತ ಹೊರಟರೆ ದೊಡ್ಡ ನಿರಾಶೆ ಕಾಡುತ್ತದೆ. ಹಲವು ವರ್ಷಗಳ ಕಾಲ “ಇನ್‌ಸೈಟ್‌’ ಎಂಬ ಗ್ರಾಹಕ ಪರ ಪತ್ರಿಕೆ ಗ್ರಾಹಕ ಜಾಗೃತಿಯಲ್ಲಿ ಅತಿ ದೊಡ್ಡ ಕೆಲಸ ಮಾಡಿ ಕಣ್ಮುಚ್ಚಿಕೊಂಡಿತು. ಈಗ ಉಳಿದಿರುವುದು “ಕನ್ಸೂಮರ್‌ ವಾಯ್ಸ’ ಎಂಬ ಏಕೈಕ ಆಂಗ್ಲ ಪತ್ರಿಕೆ ಮಾತ್ರ!

ಎರಡು ತಿಂಗಳಿಗೊಮ್ಮೆ ಪ್ರಕಟಗೊಳ್ಳುತ್ತಿದ್ದ ಇನ್‌ಸೈಟ್‌ ಅಹ್ಮದಾಬಾದ್‌ನ ಕನ್ಸೂಮರ್‌ ಎಜುಕೇಷನ್‌ ಸೊಸೈಟಿ ಸಿಇಆರ್‌ಎಸ್‌ನ ಪ್ರಕಟಣೆಯಾಗಿತ್ತು. ಸಿಇಆರ್‌ಎಸ್‌ 80ರ ದಶಕದ ಕಾಲದಲ್ಲಿಯೇ ರಾಷ್ಟ್ರದ ಪ್ರತಿಷ್ಟಿತ ಗ್ರಾಹಕ ಸಂಘಟನೆಯಾಗಿತ್ತು. ಅದು ತನ್ನ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಪ್ರಯೋಗಾಲಯ, ಪರೀûಾಕೇಂದ್ರದ ವ್ಯವಸ್ಥೆ ಹೊಂದಿತ್ತು. ಇದು ರಾಷ್ಟ್ರದಾದ್ಯಂತ ಮಾರಾಟವಾಗುವ, ರಾಜ್ಯಗಳಲ್ಲಿ ಮಾತ್ರ ಚಾಲ್ತಿಯಲ್ಲಿರುವ ವಿವಿಧ ತಯಾರಿಕೆಗಳನ್ನು ಭಾರತೀಯ ಹಾಗೂ ಅಂತಾರಾಷ್ಟ್ರೀಯ ಮಾನದಂಡಗಳಿಗನುಗುಣವಾಗಿ ಪರೀಕ್ಷಿಸುತ್ತಿತ್ತು. ಅದರ ಸಮಗ್ರ ವರದಿಯನ್ನು ಪ್ರತಿ ಬಾರಿ ಇನ್‌ಸೈಟ್‌ನಲ್ಲಿ ಆಮೂಲಾಗ್ರವಾಗಿ ಪ್ರಕಟಿಸುತ್ತಿತ್ತು.

ಹಾಗಂತ ಒಂದೇಟಿಗೆ ಪರೀûಾ ವರದಿಯನ್ನು ಪ್ರಕಟಿಸಿ ಇದುಮಿತ್ಥಂ ಹೇಳುವ ಅವಸರ, ಬೇಜವಾಬ್ದಾರಿತನ ಅಲ್ಲಿರಲಿಲ್ಲ. ಪರೀಕ್ಷಿಸುವ ವಸ್ತುಗಳನ್ನು ಅಂಗಡಿಗಳಿಂದ ರಸೀದಿ ಸಮೇತವಾಗಿ ಖರೀದಿಸಲಾಗುತ್ತಿತ್ತು. ಆ ಸ್ಯಾಂಪಲ್‌ಗ‌ಳನ್ನು ದೇಶದ ಕಾಯ್ದೆ ಸೂಚಿಸಿದ ಮಾನದಂಡಗಳ ಅನ್ವಯ ನಡೆಸಿದ ಪರೀûಾ ವರದಿಯನ್ನು ಆಯಾ ಕಂಪನಿಗಳಿಗೆ ಪ್ರತ್ಯೇಕವಾಗಿ ಕಳುಹಿಸಲಾಗುತ್ತಿತ್ತು. ಆ ಕಂಪನಿಯ ಅಭಿಪ್ರಾಯ, ಸಂವಹನಗಳನ್ನು ಕೂಡ ಒಳಗೊಂಡಂತೆಯೇ ವರದಿ ಇನ್‌ಸೈಟ್‌ನಲ್ಲಿ ಪ್ರಕಟವಾಗುತ್ತಿತ್ತು. 1998ರಿಂದ ಪ್ರಕಟವಾದ ಇನ್‌ಸೈಟ್‌ 2013ರಲ್ಲಿ ಕಣ್ಮುಚ್ಚಿತ್ತು. ಆದರೆ ಇದರ ಹಿಂದಿ ಆವೃತ್ತಿ “ಗ್ರಾಹಕ್‌ ಸಾಥಿ’ ಇಂದಿಗೂ ಪ್ರಕಟವಾಗುತ್ತಿದೆ.

Advertisement

ಹಲವು ಆಯಾಮಗಳಲ್ಲಿ ನೋಡಿದರೆ ಇನ್‌ಸೈಟ್‌ ಒಂದು ಗ್ರಾಹಕ ಪತ್ರಿಕೆ ಇರಬೇಕಾದ ವಿನ್ಯಾಸಕ್ಕೆ ಮಾದರಿ ಎಂಬಂತಿತ್ತು. ಈಗಲೂ ಸಿಇಆರ್‌ಸಿ ಇದೆ. ಅದರ ವೆಬ್‌ಸೈಟ್‌ www.cercindia.org ಇದೆ.  ಇದರಲ್ಲಿ ವಿವಿಧ ಪ್ರಾಡಕ್ಟ್ಗಳ ಪರೀûಾ ವರದಿಯನ್ನು ವಿನಂತಿಸಿ ಪಡೆಯಬಹುದು. ಆದರೂ ಇನ್‌ಸೈಟ್‌ ಇದ್ದ ಕಾಲದಲ್ಲಿ ಕಾಣುತ್ತಿದ್ದ ಹುರುಪು ಈ ಸಂಘಟನೆಯಲ್ಲಿ ಕಾಣಿಸುತ್ತಿಲ್ಲ. ಪೌಡರ್‌, ಸಾವಯವ ಅಕ್ಕಿ, ಚವನ್‌ಪ್ರಾಶ್‌ ಸೇರಿದಂತೆ ಕಳೆದ ವರ್ಷ ನಡೆಸಿದ ಪರೀûಾ ವಿಶ್ಲೇಷಣೆಗಳು ವೆಬ್‌ನಲ್ಲಿ ಕಾಣುತ್ತಿದೆ. ಗ್ರಾಹಕ ಜಾಗೃತಿಯತ್ತ ಆಸಕ್ತಿಇರುವವರಿಗೆ ಈಗಲೂ ಈ ಅಂತಜಾìಲ ತಾಣ ಉಪಯುಕ್ತ.

ಧ್ವನಿ ಎತ್ತಲು ಕನ್ಸೂಮರ್‌ ವಾಯ್ಸ ಇದೆ!
ಇನ್‌ಸೈಟ್‌ಗೆ ಹೋಲಿಕೆ ಇಲ್ಲದಿದ್ದರೂ ಕಳೆದ 18 ವರ್ಷಗಳಿಂದ ನವದೆಹಲಿಯ ವಾಯ್ಸ ಗ್ರಾಹಕ ಸಂಘಟನೆಯ “ಕನ್ಸೂಮರ್‌ ವಾಯ್ಸ’ ಗಮನಿಸಲೇಬೇಕಾದ ಮಾಸಪತ್ರಿಕೆ. 
ವಾಯ್ಸ ಸಂಘಟನೆ ಕೂಡ ಪರೀûಾ ವರದಿಗಳು, ಹಣಕಾಸು ಸಲಹೆಗಳು, ವೈದ್ಯಕೀಯದ ಮಾಹಿತಿಗಳನ್ನು ಒಳಗೊಂಡಂತೆ 48 ಪುಟಗಳ ಬಹುವರ್ಣದ ಪತ್ರಿಕೆಯನ್ನು ಹೊರತರುತ್ತಿದೆ. ಎನ್‌ಎಬಿಎಲ್‌ ಮಾನ್ಯತೆ ಪಡೆದ ಲ್ಯಾಬ್‌ನಲ್ಲಿಯೇ ಪರೀಕ್ಷೆ ನಡೆಸಿ ವರದಿ ಪ್ರಕಟಿಸಲಾಗುತ್ತದೆ. ಉದಾಹರಣೆಗೆ, ಮೇ 2017ರ ಸಂಚಿಕೆಯಲ್ಲಿ ಬ್ರಾಂಡ್‌ ಕುಡಿಯುವ ನೀರು ಬಾಟಲಿಗಳನ್ನು ಪರೀಕ್ಷಿಸಿ ಪ್ರಕಟಿಸಿದ ವರದಿ ಇದೆ. ಕುಡಿಯಬಹುದಾದ ಹಾಗೂ ಕುಡಿಯುವ ಮುನ್ನ ಹತ್ತು ಬಾರಿ ಯೋಚಿಸಿ ಎಂಬ ಸಲಹೆ ಹೊತ್ತ 12 ಬ್ರಾಂಡ್‌ಗಳನ್ನು ಅದು ಹೆಸರಿಸಿದೆ. 50ರೂ. ಮುಖಬೆಲೆಯ ಪತ್ರಿಕೆಯನ್ನು ಅಂಚೆಯಲ್ಲಿ ತರಿಸಿಕೊಳ್ಳಲು ಅವಕಾಶವಿದೆ. ಕನ್ಸೂéಮರ್‌ ವಾಯ್ಸ ಸೊಸೈಟಿ, ಇ-34, ಈಸ್ಟ್‌ ಆಫ್ ಕೈಲಾಶ್‌, ನ್ಯೂ ಡೆಲ್ಲಿ -110065ಕ್ಕೆ ವಾರ್ಷಿಕ ಚಂದಾ 600 ರೂ. ಕಳುಹಿಸಿದರೆ ಮೂರು ತಿಂಗಳ ಹೆಚ್ಚುವರಿ ಚಂದಾ ಅವಧಿ ಉಚಿತವಾಗಿ ಲಭ್ಯವಾಗುತ್ತದೆ. ಇದೇ ರೀತಿ 5 ವರ್ಷಕ್ಕೆ ರಿಯಾಯಿತಿ ದರ 2,500 ರೂ. ಪಾವತಿಸಿದರೆ ಮತ್ತೂಂದು ವರ್ಷ ಸಂಪೂರ್ಣ ಉಚಿತ. ಆನ್‌ಲೈನ್‌ ವಾಯ್ಸ ಸಂಚಿಕೆಯೂ ಲಭ್ಯ. ಯಾವುದಕ್ಕೂ ಒಮ್ಮೆ ಅವರ ಅಂತಜಾìಲ ತಾಣ www.consumer-voice.orgಯಲ್ಲಿ ಇಣುಕುವುದು ಸೂಕ್ತ. 33 ವರ್ಷಗಳ ವಾಯ್ಸ ವೆಬ್‌ ತಾಣದಲ್ಲೂ ಉಪಯುಕ್ತ ಲಿಂಕ್‌ಗಳಿವೆ.

ಅದೇ ಕಥೆ, ವ್ಯಥೆಯೂ ಹಾಗೇ!
ಕನ್ನಡಕ್ಕೆ ಬಂದರೂ ಪರಿಸ್ಥಿತಿ ತುಂಬಾ ಭಿನ್ನವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಗ್ರಾಹಕ ಪತ್ರಿಕೆಗಳಲ್ಲೂ ಪ್ರಕಟಣೆ ಸ್ಥಗಿತಗೊಳಿಸಿದ ಸುದ್ದಿ ಬರುತ್ತಿದೆಯೇ ವಿನಃ ಹೊಸದಾಗಿ ಗ್ರಾಹಕ ಪತ್ರಿಕೆ ಆರಂಭವಾದ ಮಾಹಿತಿ ಇಲ್ಲ. ದೊಡ್ಡ ಮಟ್ಟದ, ಹೆಚ್ಚು ಪುಟಗಳ, ವರ್ಣದ ಗ್ರಾಹಕ ಪತ್ರಿಕೆಗಳನ್ನಂತೂ ಈಗ ಕಲ್ಪಿಸಲೂ ಸಾಧ್ಯವಾಗುತ್ತಿಲ್ಲ. ದಕ್ಷಿಣ ಕನ್ನಡದ ಬಸೂÅರಿನ ಬಳಕೆದಾರರ ವೇದಿಕೆಯಿಂದ ಪ್ರಕಟಗೊಳ್ಳುತ್ತಿದ್ದ “ಬಳಕೆದಾರರ ಶಿಕ್ಷಣ’ ಮಾಸ ಪತ್ರಿಕೆ ಒಂದು ಕಾಲದಲ್ಲಿ ಜನರಲ್ಲಿ ಗ್ರಾಹಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಪತ್ರಿಕೆಯಲ್ಲಿ ದುಡಿದಿದ್ದ ಡಾ. ರವೀಂದ್ರನಾಥ ಶ್ಯಾನಭಾಗರ “ಬಹುಜನ ಸುಖಾಯ ಬಹುಜನ ತಾಯ’ ಎಂಬ ಅಂಕಣ ಗ್ರಾಹಕ ಹಿತ ತಳಹದಿಯ ಮೇಲೆ ಉದಯವಾಣಿಯ ಮಣಿಪಾಲ ಆವೃತ್ತಿಯಲ್ಲಿ ಹಲವು ವರ್ಷಗಳ ಕಾಲ ಪ್ರಕಟವಾಗಿತ್ತು. ಕಾಲಾಂತರದಲ್ಲಿ ಮುದ್ರಣ ಪತ್ರಿಕೆಯನ್ನು ಸಾರ್ವಜನಿಕ ಸಂಘಟನೆಯಾಗಿ ನಿರ್ವಹಿಸಲಾಗದ ಅಸಹಾಯಕತೆಯಿಂದ ಪತ್ರಿಕೆ ನಿಲುಗಡೆಯಾಯಿತು. 

ಮೈಸೂರಿನ ಗ್ರಾಹಕರ ಪರಿಷತ್‌ ಪ್ರಕಟಿಸುತ್ತಿದ್ದ “ಗ್ರಾಹಕ ಪತ್ರಿಕೆ’ ಕೂಡ ಹಲವು ವರ್ಷಗಳ ಕಾಲ ತನ್ನ ಸೇವೆ ಸಲ್ಲಿಸಿತ್ತು. ನಗರದ ಸಮಸ್ಯೆ ಕುರಿತು ಫೋಟೋ ಶೀರ್ಷಿಕೆ, ಕಾನೂನು ಕಾಯ್ದೆ ನಿಯಮಗಳ ಬಗ್ಗೆ ವಿಸ್ತೃತವಾದ ಲೇಖನಗಳನ್ನು ಒಳಗೊಂಡ ನಾಲ್ಕಾರು ಪುಟದ ಟ್ಯಾಬ್ಲಾಯ್ಡ ಪತ್ರಿಕೆ ತನ್ನ ಪ್ರಯತ್ನದಲ್ಲಂತೂ ಯಶಸ್ವಿಯಾಗಿತ್ತು. ಬಹುಶಃ ಇತ್ತೀಚಿನ ದಿನಗಳಲ್ಲಿ ಪ್ರಕಟಣೆಯನ್ನು ಸ್ಥಗಿತಗೊಳಿಸಿದೆ ಎಂದು ಭಾವಿಸಬೇಕಾಗಿರುವ ಉಡುಪಿಯ “ಬಳಕೆದಾರರ ವೇದಿಕೆ’ ಪಾಕ್ಷಿಕ ನಿಯತವಾಗಿ ಪ್ರಕಟಗೊಂಡ ಗ್ರಾಹಕ ಪತ್ರಿಕೆ. ಕಾನೂನು ಪ್ರಶ್ನೋತ್ತರಗಳನ್ನು ಮುದ್ರಿಸುವ ಮೂಲಕ ಸರಳವಾಗಿ ಬಳಕೆದಾರರಿಗೆ ಅವರಿಗನುಕೂಲವಾದ ಅಂಶಗಳನ್ನು ಈ ಪತ್ರಿಕೆ ಬಿತ್ತರಿಸುತ್ತಿತ್ತು. ಹಲವು ಪ್ರಬುದ್ಧ ಲೇಖನಗಳು ಮೆದುಳಿಗೆ ಆಹಾರ ಒದಗಿಸುತ್ತಿತ್ತು. ಆದರೆ ಈ ಪತ್ರಿಕೆ ಸ್ಥಗಿತಗೊಂಡ ಬಗ್ಗೆ ಅಧಿಕೃತ ಮಾಹಿತಿಯಂತೂ ಲಭ್ಯವಾಗಿಲ್ಲ.

ದ್ವಿಭಾಷಾ ಮಾಸಿಕ ಗ್ರಾಹಕ ತರಂಗ
ಕಳೆದ 13 ವರ್ಷಗಳಿಂದ ಕನ್ನಡ ಮತ್ತು ಇಂಗ್ಲೀಷ್‌ ಭಾಷೆಗಳಲ್ಲಿ ಪ್ರಕಟಗೊಳ್ಳುವ ಗ್ರಾಹಕ ತರಂಗ ಕೂಡ ರಾಜ್ಯದಲ್ಲಿ ತನ್ನ ಛಾಪು ಮೂಡಿಸಿದೆ. ಡಾ. ತಿರುಮಲರಾವ್‌ ಸಂಪಾದಕೀಯದ ಮಾಸಿಕ ಕಾಯ್ದೆಗಳು ಮತ್ತು ತೀರ್ಪುಗಳನ್ನು ಸಂಗ್ರಹಿಸಿ ಕೊಡುತ್ತದೆ. ವಾರ್ಷಿಕ ಚಂದಾ 20 ರೂ. 250 ರೂ. ಆಜೀವ ಹಾಗೂ ಪ್ರಾಯೋಜಕರಾಗಿ 2 ಸಾರ ರೂ. ಕೊಡಬಹುದು. ಕರ್ನಾಟಕ ಗ್ರಾಹಕ ವೇದಿಕೆ(ರಿ), 93, 9ನೇ ಅಡ್ಡ ರಸ್ತೆ, ಗೋಕುಲಂ ಮೊದಲ ಹಂತ, ಮೈಸೂರು – 570001ಕ್ಕೆ ಹಣ ಪಾವತಿಸಬಹುದು. 

ಮೀಡಿಯಾ ಟೈಮ್ಸ್‌; ಪತ್ರಿಕೆಯಿಂದ ಬುಕ್‌ಲೆಟ್‌ವರೆಗೆ 
ಒಂದು ಕಾಲದಲ್ಲಿ ಗ್ರಾಹಕ ಜಾಗೃತಿ ವಿಚಾರದಲ್ಲಿ ಮೀಡಿಯಾ ಟೈಮ್ಸ್‌ ಎಂಬ ಮಾಸ ಪತ್ರಿಕೆಯನ್ನು ಪೊ›. ಬಿ.ಹೆಚ್‌.ಇಚಂಗೋಡ್‌ ಟ್ಯಾಬ್ಲಾಯ್ಡ ರೀತಿಯಲ್ಲಿ ತರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಈ ಪತ್ರಿಕೆಯ ಬದಲು ತಮ್ಮ ಪಬ್ಲಿಕೇಷನ್‌ನಿಂದ ವೈದ್ಯರು ಮತ್ತು ಗ್ರಾಹಕರು ಎಂಬ ಸರಣಿ ಬುಕ್‌ಲೆಟ್‌ ತರುತ್ತಿದ್ದಾರೆ. ಇದರಲ್ಲೂ ಗ್ರಾಹಕ ಮಾತಿ, ಕಾಯ್ದೆ ವಿವರ ಮತ್ತು ಆರೋಗ್ಯ ಸಂಬಂಧಿ ಕಿವಿಮಾತುಗಳು ಇವೆ. ಸರಳ ಭಾಷೆಯಲ್ಲಿ ಮಾಹಿತಿಗಳಿರುವುದು ಒಂದು ಬೋನಸ್‌. ಈ ಬುಕ್‌ಲೆಟ್‌ಗಾಗಿ ಪೊ›. ಬಿ.ಎಂ.ಇಚ್ಲಗೋಡ್‌, ುàಡಿಯಾ ಟೈಮ್ಸ್‌, ಪೋಸ್ಟ್‌ ಬಾಕ್ಸ್‌ ನಂ. 546, ಕಂಕನಾಡಿ, ನಂದಿಗುಡ್ಡೆ, ಮಂಗಳೂರು – 575 002ಗೆ ಪತ್ರ ರವಾನಿಸಬಹುದು. 

ಕೆಲವು ಗ್ರಾಹಕ ಪರ ಪತ್ರಿಕೆಗಳು ಈಗ ಅಸ್ಥಿತ್ವದಲ್ಲಿ ಇವೆ ಎಂಬ ಬಗ್ಗೆ ಅನುಮಾನಗಳಿವೆ. ಶಿವಮೊಗ್ಗದಿಂದ ಪ್ರಕಟಗೊಳ್ಳುತ್ತಿದ್ದ ಶಿವಮೊಗ್ಗ ಗ್ರಾಹಕ, ನೇರವಾಗಿ ಗ್ರಾಹಕ ಪತ್ರಿಕೆ ಅನ್ನಲು ಬಾರದ, ಆದರೆ ಇದೇ ಕ್ಷೇತ್ರದಲ್ಲಿ ಕೆಲಸ ನಿರ್ವಸುತ್ತಿದ್ದ ಚಿಂತಾಮಣಿಯ “ಅರಿವು’ ಒಂದು ನೂತನ ಪ್ರಯತ್ನ. ಈಗ ಪ್ರಕಟಗೊಳ್ಳುತ್ತಿಲ್ಲ ಎಂಬ ಶಂಕೆ ಇದೆ. ನೆನಪು ಸರಿ ಇದ್ದರೆ, ಇನ್ನೊಂದು ಗ್ರಾಹಕ ಮ್ಯಾಗಝೀನ್‌ ಕೂಡ ಚಾಲ್ತಿಯಲ್ಲಿತ್ತು.

ಮುದ್ರಣ ಪತ್ರಿಕೆಗಳೇ ಏಕೆ ಬೇಕು?
ಇಂದು ಅಂತಜಾìಲದ ಕ್ರಾಂತಿಯೇ ನಡೆದಿರುವುದರಿಂದ ಮೇಲಿನ ಪ್ರಶ್ನೆ ಪ್ರಸ್ತುತ. ಮುದ್ರಣ ಮಾದರಿ ಬಿಟ್ಟು ಕೇವಲ ಆನ್‌ಲೈನ್‌ನಲ್ಲಷ್ಟೇ ಸಿಗುವ ಐಡಿಯಾವನ್ನು ಆಂಗ್ಲ ಪತ್ರಿಕೆ ಇನ್‌ಸೈಟ್‌ ಮಾಡಿತ್ತಾದರೂ ಅದು ಯಶಸ್ವಿಯಾಗಲಿಲ್ಲ. ಕನ್ಸೂಮರ್‌ ವಾಯ್ಸ ಆನ್‌ಲೈನ್‌ನಲ್ಲಿ ಲಭ್ಯ, ಆದರೆ ಅದಕ್ಕೂ ವೆಚ್ಚವಿದೆ. ಉಳಿದಂತೆ ನಾವು ಬ್ರೌಸ್‌ ಮಾಡಿದಾಗ ಗ್ರಾಹಕ ಪರ ಮಾಹಿತಿಗಳು ಉದ್ದಾನುದ್ದಕ್ಕೂ ವೆಬ್‌ ಪುಟದಲ್ಲಿ ಕಾಣಿಸುತ್ತದೆ. ಆದರೆ ಈ ಮಾಹಿತಿಗಳ ವಿಶ್ವಾಸಾರ್ಹತೆಯೇ ಮಗದೊಂದು ಪ್ರಶ್ನೆ. ಆ ಮಟ್ಟಿಗೆ ಪತ್ರಿಕೆಯಲ್ಲಿ ಅದು ಬರುತ್ತದೆ ಎಂತಾದರೆ ಒಂದು ನಂಬಿಕೆ ಇರುತ್ತದೆ. ಕಾನೂನು ನಿಯಮ ದಿನೇದಿನೆ ಬದಲಾಗುವುದು ಅನಿವಾರ್ಯವಾದಾಗ ಅದನ್ನು ಪತ್ರಿಕೆಗಳು ಮಾತ್ರ ಹಿಡಿದು ಕೊಡಬಲ್ಲವು. ಒಂದು ವೆಬ್‌ ಹಳೆ ಮಾಹಿತಿಯನ್ನೇ ಬಿಂಬಿಸಿದರೆ ಅದೇ ಅಂತಿಮ ಎಂದು ನಂಬಿಸುವ ಪ್ರಕ್ರಿಯೆ ತಾನೇತಾನಾಗಿ ನಡೆಯುತ್ತದೆ. ಅವುಗಳನ್ನು ನಿಯಂತ್ರಿಸಲು ಈಗಿನ ಕಾನೂನಿನಲ್ಲಂತೂ ಸಾಧ್ಯವಿಲ್ಲದ ಮಾತು.

ಸಾಗರದಿಂದ ಈಗಲೂ ಬಳಕೆ ತಿಳುವಳಿಕೆ
ಸಾಗರದ ಬಳಕೆದಾರರ ವೇದಿಕೆ ಕಳೆದ 27 ವರ್ಷಗಳಿಂದ ಕಾರ್ಯನಿರ್ವಸುತ್ತಿದೆ. ಇದು ತನ್ನ ಕಾರ್ಯಚಟುವಟಿಕೆಗಳನ್ನು ಜನರಿಗೆ ವಿವರಿಸಲು ಹಾಗೂ ಗ್ರಾಹಕ ಕ್ಷೇತ್ರದ ಕಾಯ್ದೆ ನೀತಿ ನಿಯಮಗಳ ಮಾಹಿತಿ, ಗ್ರಾಹಕ ಪರ ಪ್ರಕರಣಗಳ ತೀರ್ಪು ಮೊದಲಾದ ಬಹು ಸ್ತತ ನೆಲೆಯಲ್ಲಿ ಮಾತಿಗಳನ್ನು ತನ್ನ ನಾಲ್ಕು ಪುಟಗಳ ಟ್ಯಾಬ್ಲಾಯ್ಡ ಮಾದರಿಯ “ಬಳಕೆ ತಿಳುವಳಿಕೆ’ ಕಪ್ಪು ಬಿಳುಪು ಮಾಸಪತ್ರಿಕೆಯಲ್ಲಿ ಒದಗಿಸುತ್ತಿದೆ. ವೇದಿಕೆಯ ಕಾರ್ಯದರ್ಶಿ ಕೆ.ಎನ್‌.ವೆಂಕಟಗಿರಿ ಇದರ ಸಂಪಾದಕರು. ಕಳೆದ 24 ವರ್ಷಗಳಿಂದ ನಿರಂತರವಾಗಿ ಪ್ರಕಟಣೆಯನ್ನು ಕಾಯ್ದುಕೊಂಡು ಬಂದಿರುವುದು ಮತ್ತು ಇದರ ಪ್ರಕಟಣೆಗಾಗಿಯೇ “ಬಳಕೆ ನಿಧಿ’ಯೆಂಬ ಒಂದಷ್ಟು ಮೊತ್ತವನ್ನು ಬ್ಯಾಂಕ್‌ನಲ್ಲಿ ಇರಿಸಿಕೊಂಡಿರುವುದು ಇವರ ವೈಶಿಷ್ಟ್ಯ.

ಈ ಪತ್ರಿಕೆಯ ಚಂದಾದಾರರಾಗಬಯಸುವವರು 500 ರೂ. ನೀಡಿದಲ್ಲಿ ಪತ್ರಿಕೆ ಆಜೀವಪರ್ಯಂತ ಲಭ್ಯವಾಗಲಿದೆ. ಒಂದೊಮ್ಮೆ ಒಂದು ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು “ಬಳಕೆ ನಿಧಿ’ಗೆ ಸಲ್ಲಿಸಿದರೆ ಪತ್ರಿಕೆಯ ಜೊತೆಗೆ ಬಳಕೆದಾರರ ಪ್ರಕಟಿಸುವ ಎಲ್ಲ ಪುಸ್ತಕ ಪ್ರಕಟಣೆಗಳು ಕೂಡ ಉಚಿತವಾಗಿ ಅಂತಹ ಸದಸ್ಯರಿಗೆ ಲಭ್ಯವಾಗಲಿದೆ. ಹಣ ಪಾವತಿಯನ್ನು ಬಳಕೆದಾರರ ವೇದಿಕೆ(ರಿ) ಸಾಗರ, ಬ್ರಾಸಂ, ನೆಹರೂ ಮೈದಾನ, ಸಾಗರ -577401, ಹೆಚ್ಚಿನ ಮಾತಿಗೆ 9448007542 ಸಂಖ್ಯೆಗೆ ಕರೆ ಮಾಡಬಹುದು.

-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
 

Advertisement

Udayavani is now on Telegram. Click here to join our channel and stay updated with the latest news.

Next