Advertisement
ರಜೆಯ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಆಗಮಿಸಿದ್ದ ಅವರು ನಿಟ್ಟೂರು ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಿಎಎ, ಎನ್‌ಪಿಆರ್ ಅನಿವಾರ್ಯ ಪ್ರಪಂಚದ ಬಹುತೇಕ ರಾಷ್ಟ್ರಗಳು ಸಿಎಎ, ಎನ್‌ಪಿಆರ್‌ನಂತಹ ಕಾನೂನುಗಳನ್ನು ಕಡ್ಡಾಯವಾಗಿ ಜಾರಿಗೆ ತಂದಿವೆ. ಭಾರತದಲ್ಲಿ ಮಾತ್ರ ಇದು ಜಾರಿ ಇರಲಿಲ್ಲ. ಪ್ರಸ್ತುತ ಕೇಂದ್ರ ಸರಕಾರ ಇದನ್ನು ಜಾರಿಗೊಳಿಸಲು ಮುಂದಾಗಿರುವುದು ಒಳ್ಳೆಯ ಕೆಲಸ. ಇದು ಆಗಲೇ ಬೇಕು. ಪ್ರತಿಯೊಂದು ದೇಶವೂ ಅಕ್ರಮ ನುಸುಳುಕೋರರನ್ನು, ಭಯೋತ್ಪಾದಕರನ್ನು ಹಿಮ್ಮೆಟ್ಟಿಸದೆ ಹೋದಲ್ಲಿ ಆ ದೇಶಕ್ಕೆ ಉಳಿಗಾಲವಿಲ್ಲ. ಜನರಿಗೆ ನೆಮ್ಮದಿಯಿಂದ ಜೀವನ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ಈ ಕಾನೂನು ಬರಲೇಬೇಕಿತ್ತು ಎಂದರು.
ಯುವಕರು ಸೇನೆಗೆ ಸೇರ್ಪಡೆಗೊಳ್ಳುವುದು ಈಗ ಹಿಂದಿಗಿಂತ ಸರಳ ಮತ್ತು ಸುಲಭವಾಗಿದೆ. ಸೇನೆ ಸೇರ್ಪಡೆಯ ಪ್ರತಿ ಮಾಹಿತಿಗಳನ್ನು ಆನ್‌ಲೈನ್ ತಂತ್ರಜ್ಞಾನದಂತಹ ಸುಧಾರಿತ ವ್ಯವಸ್ಥೆಗೆ ಅಳವಡಿಸಲಾಗಿದೆ. ತರಬೇತಿಯೂ ಉತ್ತಮವಾಗಿದ್ದು ಯುವಕರು ಸೇನೆಗೆ ಸೇರ್ಪಡೆಗೊಳ್ಳಲು ಮನಸ್ಸು ಮಾಡಬೇಕು ಎಂದರು. ಸದ್ಯದಲ್ಲೇ ಯುವತಿಯರೂ ಕಮಾಂಡರ್
ಜಗತ್ತಿನ ಅನ್ಯ ರಾಷ್ಟ್ರಗಳಲ್ಲಿ ಈಗಾಗಲೇ ಸೇನೆಯ ಸೇವೆಗೆ ಯುವತಿಯರನ್ನು ಸೇರ್ಪಡೆಗೊಳಿ ಸಲಾಗು ತ್ತಿದೆ. ಇಸ್ರೇಲ್ ಸೇನೆಯಲ್ಲಿ ಯುವತಿಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಸದ್ಯದಲ್ಲೇ ನಮ್ಮ ಯುವತಿ ಯರು ಸೇನೆಯಲ್ಲಿ ಕಮಾಂಡರ್‌ಗಳಾಗಿ ಗಡಿ ಕಾಯುವ ಅವಕಾಶ ಸಿಗಲಿಏಆ ಎಂದರು.
Related Articles
Advertisement
ಗುಮಾಸ್ತನಿಂದ ಕಮಾಂಡರ್ ತನಕಸೈನಿಕನಾಗಬೇಕೆಂಬ ಹಂಬಲದಿಂದ ಗುಮಾಸ್ತನಾಗಿ ಸೇನೆಗೆ ಸೇರಿಕೊಂಡೆ. ಅನಂತರ ಬೇರೆ ಬೇರೆ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿ ಕಮಾಂಡರ್ ಆಗಿ ಭಡ್ತಿ ಪಡೆದ ಅವರು ಸಿಯಾಚಿನ್, ಲಡಾಖ್, ಪೂಂಛ… ಸುಂದರಬನಿ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಂತಹ ಅತೀ ಕೊರೆಯುವ ಚಳಿ ಇರುವ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಕ್ಷಣಗಳನ್ನು ಎಳೆ ಎಳೆಯಾಗಿ ಮಕ್ಕಳೊಡನೆ ತೆರೆದಿಟ್ಟರು.