Advertisement
ಹೃದ್ರೋಗಕ್ಕೆ ಸಂಬಂಧಿಸಿದಂತೆ ದಿನಂಪ್ರತಿ ಸಾಕಷ್ಟು ಸಂಖ್ಯೆಯ ರೋಗಿಗಳು ವೆನ್ಲಾಕ್ ಗೆ ಬರುತ್ತಾರೆ. ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸಾ ವಿಭಾಗ, ತಜ್ಞರು ಇದ್ದಾರೆ; ಆದರೆ ಕ್ಯಾಥ್‌ಲ್ಯಾಬ್ ಇಲ್ಲದೆ ಹೆಚ್ಚಿನ ಚಿಕಿತ್ಸೆ ಸಾಧ್ಯವಾಗುತ್ತಿಲ್ಲ. ಹೊರರೋಗಿ ಚಿಕಿತ್ಸೆ ಮಾತ್ರ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಯೋಜಿತ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತಿದೆ.
ಕಾರ್ಡಿಯಾಕ್ ಕ್ಯಾಥಟರೈಜೇಶನ್ ಲ್ಯಾಬ್ (ಕ್ಯಾಥ್ ಲ್ಯಾಬ್) ಹೃದಯ ಸಂಬಂಧಿ ರೋಗಗಳ ಅತ್ಯಾಧುನಿಕ ತಪಾಸಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಇರುವ ಸೌಲಭ್ಯ. ರಕ್ತನಾಳಗಳ ಬ್ಲಾಕ್ ಪತ್ತೆ ಮಾಡುವ ಕೊರೊನರಿ ಆ್ಯಂಜಿಯೋಗ್ರಾಂ, ಆ್ಯಂಜಿಯೋಪ್ಲಾಸ್ಟಿ (ಸ್ಟಂಟ್ ಅಳವಡಿಕೆ) ಮೊದಲಾವುಗಳನ್ನು ಇಲ್ಲಿಯೇ ನಿರ್ವಹಿಸಲಾಗುತ್ತದೆ. ಹೃದಯಾಘಾತಕ್ಕೆ ಸಂಬಂಧಿಸಿದ ತುರ್ತುಚಿಕಿತ್ಸೆ ನೀಡುವ ವ್ಯವಸ್ಥೆಯೂ ಇದರಲ್ಲಿದೆ. ಐಸಿಯು ಮಾದರಿಯಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಹೃದಯ ಚಿಕಿತ್ಸಾ ತಜ್ಞರ ಜತೆಗೆ ಪ್ರತ್ಯೇಕ ರೇಡಿಯೋಲಜಿ ಟೆಕ್ನಿಶಿಯನ್‌ಗಳು, ನರ್ಸ್‌ಗಳು ಇರುತ್ತಾರೆ.
Related Articles
ವೆನ್ಲಾಕ್ ನಲ್ಲಿ ಈಗಾಗಲೇ ಸುಸಜ್ಜಿತವಾದ ಹೊಸ ಸರ್ಜಿಕಲ್ ಬ್ಲಾಕ್ ನಿರ್ಮಾಣವಾಗಿದ್ದು, ಅಂತಸ್ತಿನಲ್ಲಿ ಕ್ಯಾಥ್‌ಲ್ಯಾಬ್‌ಗ ಜಾಗ ಕಾದಿರಿಸಲಾಗಿದೆ. ವೆನ್ಲಾಕ್ ನ ನಿರ್ವಹಣೆಯ ಹೊಣೆ ಹೊತ್ತಿರುವ ಕೆಎಂಸಿ ಆಸ್ಪತ್ರೆಯವರೇ ಲ್ಯಾಬ್ ಆರಂಭಿಸಲು ಮುಂದಾಗಿದೆ.
Advertisement