ಗಾಲೆ: ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್‌ನ ಎರಡನೇ ದಿನದಾಟವು ಪ್ರತಿಕೂಲ ಹವಾಮಾನದ ಕಾರಣದಿಂದ ತಡವಾಗಿ ಆರಂಭವಾಯಿತು. ಇಂದು ಬೆಳಗ್ಗೆ ಭಾರೀ ಗಾಳಿ ಮಳೆ ಸುರಿದಿದ್ದು, ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸ್ಟ್ಯಾಂಡ್ ಕುಸಿದಿದೆ.
ಟೆಸ್ಟ್ ಪಂದ್ಯದ ಆರಂಭಿಕ ದಿನದಂದು ಜನರಿಂದ ತುಂಬಿದ್ದ ತ್ರಿ ಟೈರ್ ಗ್ಯಾಲರಿಯಲ್ಲಿ ಇಂದು ಬೆಳಗ್ಗೆ ಯಾರೂ ಇರಲಿಲ್ಲ. ಮೊದಲ ದಿನದಾಟದ ವೇಳೆ ಪ್ರವಾಸಿ ತಂಡದ ಕುಳಿತಿದ್ದ ಜಾಗದಲ್ಲಿ ದೊಡ್ಡ ಗಾಜಿನ ಫಲಕ ಬಿದ್ದು ಒಡೆದಿದೆ.
ಇದನ್ನೂ ಓದಿ:400 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ ‘ಬೈರಾಗಿ’
ಗಾಲೆ ಮೈದಾನದಲ್ಲಿ ಈ ಪಂದ್ಯಕ್ಕಾಗಿ ವಿಶೇಷ ಸ್ಟ್ಯಾಂಡ್ ಮಾಡಲಾಗಿತ್ತು. ಇಂದು ಬೆಳಗ್ಗೆಯ ಭಾರೀ ಗಾಳಿ ಮಳೆಗೆ ಈ ಸ್ಟ್ಯಾಂಡ್ ಕುಸಿದು ಬಿದ್ದು, ಇರಿಸಲಾಗಿದ್ದ ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿದೆ. ಈ ವೇಳೆ ಯಾರೂ ಪ್ರೇಕ್ಷಕರು ಇಲ್ಲದ ಕಾರಣ ಅನಾಹುತ ತಪ್ಪಿದೆ.
Related Articles
ಮಳೆಯ ಕಾರಣದಿಂದ ಬೆಳಗ್ಗೆ ಆರಂಭವಾಗಬೇಕಿದ್ದ ಎರಡನೇ ದಿನದಾಟವು ಮಧ್ಯಾಹ್ನ 1.45ಕ್ಕೆ ಶುರುವಾಗಿದೆ. ಎರಡನೇ ಓವರ್ ನಲ್ಲಿ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ 31 ಓವರ್ ನ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ. ಶ್ರೀಲಂಕಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 212 ರನ್ ಗಳಿಸಿತ್ತು.