Advertisement

ಒಂದು ಸ್ಪೆಷಲ್‌ ತರಕಾರಿ ಚೀಟಿ, ಸಂತೆಯಲ್ಲಿ ನಿಂತ ಪೆದ್ದ ಗಂಡ 

07:50 AM Oct 04, 2017 | Harsha Rao |

ಕೆಲವೊಮ್ಮೆ ಹೆಂಡತಿ ಏನು ಹೇಳುತ್ತಿದ್ದಾಳೆ, ಆಕೆಗೆ ಏನು ಬೇಕಾಗಿದೆ ಅನ್ನೋದು ಗಂಡನಿಗೆ ಗೊತ್ತೇ ಆಗುವುದಿಲ್ಲ. ತರಕಾರಿ ತರುವ ವಿಷಯದಲ್ಲಿ ಹೆಂಡತಿಯಿಂದ ಬೈಸಿಕೊಳ್ಳದ ಗಂಡನಿರಲಿಕ್ಕಿಲ್ಲ. ಈ ಜಾಗತಿಕ ಸಮಸ್ಯೆ ಪರಿಹರಿಸಲು ಎರಾ ಲೋಂಧೆ ಎಂಬಾಕೆ ರೂಪಿಸಿದ ಮಾಸ್ಟರ್‌ ಪ್ಲಾನ್‌ ತುಂಬಾ ಚೆನ್ನಾಗಿದೆ.
 - – – –
ಗಂಡನ ಮೇಲೆ ಹೆಂಡತಿ ಮುನಿಸಿಕೊಳ್ಳಲು ನಂಬರ್‌ ಒನ್‌ ಕಾರಣ ಯಾವುದು?
ಈ ಪ್ರಶ್ನೆಯನ್ನು ಹತ್ತು ಜನರಿಗೆ ಕೇಳಿದರೆ ಅವರಲ್ಲಿ ಏಳು ಜನ, “ಹೆಂಡತಿ ಹೇಳಿದ ತರಕಾರಿ/ ದಿನಸಿಯನ್ನು ಸರಿಯಾಗಿ ತರದೇ ಇರೋದು’ ಅಂತಲೇ ಉತ್ತರಿಸುತ್ತಾರೆ!

Advertisement

ಅಡುಗೆ ಮನೆಯಲ್ಲಿ ಯಾವ್ಯಾವ ಪದಾರ್ಥ ಖಾಲಿಯಾಗಿದೆ, ಅಡುಗೆಗೆ ಯಾವ ತರಕಾರಿ ಬೇಕು ಅಂತ ಹೆಂಡತಿ ಲೆಕ್ಕಾಚಾರ ಹಾಕಿ ಲಿಸ್ಟ್‌ ಮಾಡಿ ಗಂಡನ ಕೈಗಿಡುತ್ತಾಳೆ. ಆದರೆ, ಪತಿ ಮಹಾಶಯ ಮಾರ್ಕೆಟ್‌ನಿಂದ ಬರುವಾಗ ಆತನ ಬಾಸ್ಕೆಟ್‌ನಲ್ಲಿರುವುದು ಹುಳುಕು ಹಿಡಿದ, ಬಾಡಿಹೋದ ತರಕಾರಿಗಳೇ! “ಥೂ, ನಿಮ್ಮ ಜನ್ಮಕ್ಕಿಷ್ಟು’ ಎನ್ನುವಂತೆ ನೋಡುವ ಹೆಂಡತಿ, “ರೀ, ಅಡುಗೆ ಅಂತೂ ಬರಲ್ಲ. ಅಟ್ಲೀಸ್ಟ್‌ ತರಕಾರಿನಾದ್ರೂ ಸರಿಯಾಗಿ ತರಬಾರದಾ?’ ಅಂತ ಮೂತಿ ಮುರಿಯುತ್ತಾಳೆ.

ಇದು ಘರ್‌ ಘರ್‌ ಕಿ ಕಹಾನಿ!
ತರಕಾರಿ ವಿಷಯದಲ್ಲಿ ಆಗುತ್ತಿದ್ದ “ಗಂಡಾಂತರ’ ತಡೆಯಲೆಂದೋ, ಪತಿರಾಯನಿಗೆ ಫ‌ಜೀತಿ ಆಗದಿರಲಿ ಎಂದೋ ಎರಾ ಲೋಂಧೆ ಎಂಬಾಕೆ ಒಂದು ಐಡಿಯಾ ಮಾಡಿದ್ದು, ಅದೀಗ ಟ್ವಿಟರ್‌ನಲ್ಲಿ ಭಾರೀ ಪ್ರಶಂಸೆಗೆ ಒಳಗಾಗಿದೆ. ಏನದು ಐಡಿಯಾ ಅಂತೀರ? ಆಕೆ ಗಂಡನಿಗೆ ಸುಲಭವಾಗಿ ಅರ್ಥವಾಗುವಂತೆ, ಯಾವುದೇ ರೀತಿಯಲ್ಲೂ ಗೊಂದಲವಾಗದಂತೆ ಡಿಟೇಲ್‌ ಆಗಿ ತರಕಾರಿ ಲಿಸ್ಟ್‌ ಬರೆಯುವುದು ಹೇಗೆಂದು ತೋರಿಸಿದ್ದಾರೆ. ತನಗೆ ಯಾವ ತರಕಾರಿ, ಯಾವ ಬಣ್ಣದ್ದು, ಎಷ್ಟು ಕೆಜಿ ಬೇಕು, ಅದನ್ನು ಎಲ್ಲಿಂದ ತರಬೇಕು ಎಂಬೆಲ್ಲಾ ವಿಷಯವನ್ನು ಬರೆದಿದ್ದಾರೆ. ತರಕಾರಿ ಹೇಗಿರಬೇಕು, ಹೇಗಿರಬಾರದು ಎಂದು ಚಿತ್ರ ಬರೆದು ವಿವರಿಸಿದ್ದಾರೆ. ಅಷ್ಟೇ ಅಲ್ಲದೆ, ಯಾವುದನ್ನು ಫ್ರೀ ಆಗಿ ಕೇಳಿ ಪಡೆಯಬೇಕು ಎಂಬುದನ್ನು ಹೇಳಲೂ ಆಕೆ ಮರೆತಿಲ್ಲ.

ಎರಾ ಲೋಂಧೆ ಬರೆದ ತರಕಾರಿ ಚೀಟಿ ಹೀಗಿದೆ ನೋಡಿ. ಹೆಂಡತಿ ಹೀಗೆ ಬರೆದುಕೊಟ್ಟಾಗಲೂ ಗಂಡ ಬಾಡಿದ ಬೆಂಡೆ ಹಿಡಿದು ಮನೆಗೆ ಬಂದರೆ “ಮುಂದಿನ ಕ್ರಮ ಕೈಗೊಳ್ಳುವುದು’ ಬಿಟ್ಟ ವಿಷಯ!
  —
– ಟೊಮೇಟೊ
– ಕೆಲವು ಹಳದಿಯಿರಲಿ, ಕೆಲವು ಕೆಂಪು
– ತೂತು/ ಹುಳುಕು ಇಲ್ಲದ್ದು
– 1.5 ಕೆ.ಜಿ. ಸಾಕು

– ಈರುಳ್ಳಿ
– ಸಣ್ಣ ಗಾತ್ರದ್ದು 
– ರೌಂಡಾಗಿರಲಿ

Advertisement

– ಮೆಂತ್ಯೆ ಸೊಪ್ಪು 
– ಉದ್ದ ಕಡಿಮೆ ಇರಲಿ
– ಎಲೆ ಹಸಿರಾಗಿರಲಿ
– 1 ಕಟ್ಟು ಸಾಕು

– ಆಲೂಗಡ್ಡೆ
– ಮೀಡಿಯಂ ಗಾತ್ರದ್ದು
– ಹಾಳಾಗದ್ದು 
– 1 ಕೆ.ಜಿ. 

– ಬೆಂಡೇಕಾಯಿ
– ಜಾಸ್ತಿ ಎಳೆಯದ್ದು/ ಬಲಿತದ್ದು ಬೇಡ
– ಹಿಂದಿನಿಂದ ಸುಲಭವಾಗಿ ಮುರಿಯಲು ಬರಬೇಕು
– 350 ಗ್ರಾಂ

– ಹಸಿ ಮೆಣಸಿನಕಾಯಿ
– ಗಾಢ ಹಸಿರು ಬಣ್ಣದ್ದು 
– ಉದ್ದ ಮತ್ತು ನೇರವಾಗಿರಲಿ
– ಅದನ್ನು ಫ್ರೀ ಆಗಿ ಕೇಳಿ

– ಪಾಲಕ್‌
– ಹುಳುಕಿರದ ಫ್ರೆಶ್‌ ಎಲೆಗಳಿರಲಿ
– ಜಾಸ್ತಿ ಉದ್ದ ಬೇಡ
– 2 ಕಟ್ಟು 
– 1 ಲೀಟರ್‌ ಅಮುಲ್‌ ತಾಜಾ- ನೀಲಿ ಪ್ಯಾಕೆಟ್‌
– 1/2 ಕೆ.ಜಿ. ದೋಸೆ ಹಿಟ್ಟು

ಹಾರ್ಡ್‌ವೇರ್‌ ಶಾಪ್‌ನ ಹೊರಗೆ ಇರುವ ಭಾಜಿವಾಲನ ಅಂಗಡಿಯಿಂದ ತಗೊಂಡು ಬನ್ನಿ.

Advertisement

Udayavani is now on Telegram. Click here to join our channel and stay updated with the latest news.

Next