Advertisement

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

01:55 PM May 10, 2020 | Hari Prasad |

ನಗುವಲ್ಲಿ ತಾ ನಕ್ಕು, ಅಳುವಲ್ಲಿ ತಾ ಅತ್ತು
ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ
ಬರಸೆಳೆದಪ್ಪುವಳು.

Advertisement

ಸುಡುವ ಬಿಸಿಲಲ್ಲಿ ಮುಸುಕು ಹೊದಿಸಿ ಕೊರೆವ ಚಳಿಯಲ್ಲಿ
ಬೆಚ್ಚಗಿರಿಸಿ ಸುರಿವ ಮಳೆಯಲಿ ನಯವಾಗಿ ಒರೆಸಿ ನಿದ್ದೆಯ ಮಂಪರಿನಲ್ಲಿ
ಬೆಚ್ಚಿ ಕನವರಿಸಿ ಕಂದನ ಒಳಿತಿಗಾಗಿಯೇ ಮರಗುವಳು.

ಕೂಸು ನರಳದಂತೆ ನೆರಳಾಗಿ ನಿಂತಿಹಳು
ಅನವರತ ಶ್ರಮಿಸಿ ಉಸಿರಾಗಿಹಳು ಮಗುವ ಭವಿಷ್ಯಕ್ಕಾಗಿ
ನಗನಾಣ್ಯ ಕೂಡಿಡುತಿಹಳು ಆಸೆಗಳ ಬದಿಗೊತ್ತಿ.

ನಿನಗೇನೂ ಕಾಣಿಕೆ ನೀಡಿದರು ನೀ ಮಾಡಿದ ತ್ಯಾಗದ ಮುಂದೆ
ಎಲ್ಲವೂ ತೃಣಸಮಾನ ಬೆಲೆಕಟ್ಟಲು ಸಾಧ್ಯವೇ
ನಿನ್ನ ಜೀವಮಾನವನ್ನ

ನಿನ್ನ ಬೆಚ್ಚನೆಯ ಗೂಡಿನಲಿ ನಿನ್ನಂತೆ ನಾನೊಂದು ಸಂಸ್ಕಾರಯುತ ತಾಯಿ,
ಅಕ್ಕ, ತಂಗಿ, ಮಡದಿ, ಗೆಳತಿ, ಸಹದ್ಯೋಗಿ ಆಗುವ  ಕನಸು ನನಸಾಯಿತು
ನೀ ತೋರಿಸಿದ ದಾರಿಯಿಂದ ತೀರಿಸಲು ಸಾಧ್ಯವಿಲ್ಲ ಏಳೇಳು ಜನ್ಮದಲು ನಿನ್ನ ಋಣವ.

Advertisement

ಜನ್ಮ ಜನ್ಮಾಂತರದಲ್ಲೂ ನಿನ್ನ ಮಗುವಾಗಿ ಜನಿಸುವಾಸೆ
ಬರೆಯುತ್ತಿರುವೆನು ಸದಾ ದೇವನಿಗೆ ಒಂದು ಪತ್ರವ
ನಿನೇ ನನ್ನ ಅಮ್ಮನಾಗಲೆಂದು…

– ಶೋಭಾ ಸತೀಶ್, ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next