Advertisement

Instagram: ಹದಿಹರೆಯದವರಿಗೆಂದೇ ವಿಶೇಷ ಇನ್‌ಸ್ಟಾಗ್ರಾಂ ಖಾತೆ; ಮಕ್ಕಳ ಸುರಕ್ಷತೆಗಾಗಿ ಕ್ರಮ

11:04 PM Sep 17, 2024 | Team Udayavani |

ವಾಷಿಂಗ್ಟನ್‌: ಸಾಮಾಜಿಕ ಜಾಲತಾಣಗಳು ಹದಿಹರೆಯದವರ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂಬ ಆರೋಪ ಹಾಗೂ 18 ವರ್ಷಕ್ಕಿಂತ ಕಡಿಮೆ ವಯೋಮಿತಿ ಒಳಗಿನವರಿಗೆ ರಕ್ಷಣೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯದ ಬೆನ್ನಲ್ಲೇ ಇನ್‌ಸ್ಟಾಗ್ರಾಂ ಕೆಲವು ಬದಲಾವಣೆ ತಂದಿದೆ.

Advertisement

ಮಂಗಳವಾರದಿಂದಲೇ ಅನ್ವಯವಾಗುವಂತೆ 18 ವರ್ಷಕ್ಕಿಂತ ಕೆಳಗಿನ­ವರು ಇನ್‌ಸ್ಟಾಗೆ ಸೈನ್‌ ಅಪ್‌ ಆದರೆ, ಅಂಥವರನ್ನು “ಟೀನ್‌ ಅಕೌಂಟ್‌'(ಹದಿಹರೆಯದವರ ಖಾತೆ)ನಡಿ ತರಲಾಗುತ್ತದೆ. ಪ್ರಸ್ತುತ ಖಾತೆ ಹೊಂದಿರುವ ಮಕ್ಕಳನ್ನು ಮುಂದಿನ 60 ದಿನಗಳಲ್ಲಿ ಟೀನ್‌ ಅಕೌಂಟ್‌ಗೆ ವರ್ಗಾಯಿಸಲಾಗುತ್ತದೆ. ಅಮೆರಿಕ, ಯು.ಕೆ., ಕೆನಡಾ, ಆಸ್ಟ್ರೇಲಿಯಾದ‌ಲ್ಲಿ ನಿಯಮ ಜಾರಿಗೆ ಬಂದಿದೆ.

ಒಂದು ವೇಳೆ ಖಾತೆ ತೆರೆಯುವವರು ಸುಳ್ಳು ವಯಸ್ಸು ನೀಡಿದ್ದು ಪತ್ತೆಯಾದರೆ ಅಂಥವರ ಖಾತೆಯನ್ನು ಸಸ್ಪೆಂಡ್‌ ಮಾಡಲಾಗುತ್ತದೆ ಎಂದು ಮೆಟಾ ಹೇಳಿದೆ. ಇದನ್ನು ಪತ್ತೆ ಹಚ್ಚಲು ಅಗತ್ಯ ವಾಗಿರುವ ತಂತ್ರಾಂಶವನ್ನೂ ಅಭಿವೃದ್ಧಿ ಗೊಳಿಸಲಾಗುತ್ತಿದೆ ಎಂದಿದೆ. ಇಂಥ ಖಾತೆಗೆ ಅಪರಿಚಿತರಿಂದ ಸಂದೇಶ ಕಳುಹಿಸಲು ಸಾಧ್ಯವಾಗದಂತೆಯೂ ಮಾಡಲಾಗಿದೆ. ಐರೋಪ್ಯ ರಾಷ್ಟ್ರಗಳಲ್ಲಿ ಹೊಸ ವ್ಯವಸ್ಥೆ ವರ್ಷಾಂತ್ಯಕ್ಕೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next