Advertisement
ಇಲ್ಲೆಲ್ಲೂ ಅರಳಿದೆ ವಂದೇಮಾತರಂ
Related Articles
Advertisement
ಬಿಡುಗಡೆಗಾಗಿ ಹಂಬಲಿಸಿದರು
ಸ್ವಾತಂತ್ರ ಭಾರತಕ್ಕಾಗಿ ಎಲ್ಲೆಲ್ಲೂ
ಕ್ರಾಂತಿ ಕಹಳೆ ಮುಳುಗಿತ್ತು
ಸ್ವಾತಂತ್ರ ಸಂಗ್ರಾಮ ಚಳುವಳಿಗೆ
ಧುಮುಕಿದರು ಸಹಸ್ರಾರು ದೇಶಪ್ರೇಮಿಗಳು
ಕೆಚ್ಚೆದೆಯ ಸಂಗ್ರಾಮ ನಮ್ಮದು
ಭಾರತದ ಅಳಿವು ಉಳಿವಿಗಾಗಿ
ಒಗ್ಗೂಡಿ ಹೋರಾಡಿದರು
ಎಲ್ಲೆಲ್ಲೂ ಜನಸಾಗರ
ಕೆಚ್ಚೆದೆಯ ಸ್ವಾತಂತ್ರ
ಹೋರಾಟಗಾರರು ಸದಾ ನಿತ್ಯ
ನಮ್ಮದೊಂದೆ ಮಂತ್ರ
ಜಯದ ಮಂತ್ರ
ಸ್ವಾತಂತ್ರ ಹೋರಾಟಗಾರರು
ಭಾರತಾಂಬೆಯ ಮೇರುಗು ಬೀರಿದರು
ಗಾಂಧೀಜಿಯವರ ಶಾಂತಿ ಸಹನೆಯ
ನಮ್ಮ ಭೂಷಣ
ಸುಭಾಷ್ ಭಗತ್ ಪಂಡೆ ಆಜಾದ್ ಅವರ
ಕೆಚ್ಚೆದೆಯ ಧೈರ್ಯ ನಮ್ಮದು
ಮುಗಿಲು ಮುಟ್ಟಿದೆ
ಸ್ವರಾಜ್ಯ ಚಳುವಳಿಗಳು
ಕ್ರಾಂತಿ ಕಹಳೆ ಎಲ್ಲೆಲ್ಲೂ
ಸ್ವತಂತ್ರಕ್ಕಾಗಿ ಒಂದೆಡೆ
ಶಾಂತಿ ಸಹನೆ ಚಳುವಳಿಗಳು
ಸ್ವತಂತ್ರಕ್ಕಾಗಿ ಮತ್ತೊಂದೆಡೆ
ಕ್ರಾಂತಿ ದಂಗೆ ಚಳುವಳಿಗಳು
ಸ್ವತಂತ್ರಕ್ಕಾಗಿ ಹಲವು ಮಾರ್ಗಗಳು
ಒಂದೇ ಗುರಿಯವರದು
ಸ್ವಾತಂತ್ರವಾಯಿತು ನಮ್ಮ ಭಾರತ
ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ
– ಜೈಕುಮಾರ ವಿ.ಕುಂಬಾರದೊಡ್ಡ.