ಬೆಂಗಳೂರು: ಮನುಷ್ಯರು ಪ್ರತಿನಿತ್ಯದ ಚಟುವಟಿಕೆಗಳ ಮೇಲೆ ಗಮನ ಹರಿಸುವುದಕ್ಕಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಸ್ಮಾರ್ಟ್ ವಾಚ್ ಮಾದರಿಯಲ್ಲಿಯೇ ಪ್ರಾಣಿಗಳಿಗೂ ಪಿಇಎಸ್ ವಿದ್ಯಾರ್ಥಿಗಳ ತಂಡ ಸ್ಮಾರ್ಟ್ ವಾಚ್ ಸಂಶೋಧನೆ ನಡೆಸಿದೆ.
ಪ್ರಾರ್ಥನಾ, ಪಲ್ಲಿವಿ ಮತ್ತು ವಿಸ್ಮಯ ಎಂಬ ಮೂವರು ವಿದ್ಯಾರ್ಥಿಗಳು ಈಗಾಗಲೇ ಪಿಇಎಸ್ ವಿವಿಯಲ್ಲಿ ಎಂಜಿನಿಯರಿಂಗ್ ಕೋರ್ಸ್ ಮುಗಿಸಿ ನವೋದ್ಯಮ ಆರಂಭಿಸಿ ದ್ದಾರೆ. “ಫಾಂಡ್’ ಎಂಬ ಹೆಸರಿನಲ್ಲಿ ಹಕ್ಕು ಸ್ವಾಮ್ಯ (ಪೇಟೆಂಟ್) ಕೂಡ ಪಡೆದಿದೆ. ಸದ್ಯ ದಲ್ಲಿಯೇ ಫಾಂಡ್ ಸಂಸ್ಥೆ ಹೆಸರಿನಲ್ಲಿ ಆನ್ ಲೈನ್ ಮೂಲಕ ವಾಚ್‌ಗಳು ಲಭ್ಯವಾಗಲಿವೆ.
ಒಂದು ವರ್ಷದಲ್ಲಿ ನಾಯಿಗಳಿಗೆ ಬಳಸುವಂತಹ ವಾಚ್‌ಗಳನ್ನು ಸಂಶೋಧನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಈಗ ಸಂಶೋಧಿಸಿರುವ ತಂತ್ರಜ್ಞಾನವನ್ನೇ ಬಳಸಿ ಹಸು ಸೇರಿದಂತೆ ಇನ್ನಿತರ ಪ್ರಾಣಿಗಳಿಗೆ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಪಿಇಎಸ್ ನವೋದ್ಯಮ ವಿಭಾಗದ ಮುಖ್ಯಸ್ಥ ಸುರೇಶ್ ನರಸಿಂಹ ತಿಳಿಸಿದರು.
ಇದನ್ನೂ ಓದಿ: ಶಿರಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ: ಘನ ವಾಹನಗಳ ಸಂಚಾರ ಬಂದ್
ಏನೇನು ಉಪಯೋಗ?: ಪ್ರಸ್ತುತ ಮನುಷ್ಯರಿಗೆ ಇರುವ ಸ್ಮಾರ್ಟ್ ವಾಚ್‌ಗಳಲ್ಲಿ ಸಮಯ, ದಿನಾಂಕ, ಹಾರ್ಟ್‌ಬೀಟ್, ರಕ್ತದೊತ್ತಡದ ಮಟ್ಟ, ರನ್ನಿಂಗ್, ನ್ಪೋರ್ಟ್ಸ್, ನಿದ್ರಾಸಮಯ, ಉಸಿರಾಟ ಸೇರಿ ಇತರ ಮಾಹಿತಿಗಳು ಸಿಗುತ್ತವೆ. ಮನೆಯಲ್ಲಿ ಸಾಕುವ ಪ್ರಾಣಿಗಳು ಆಹಾರ ವನ್ನು ಚೆನ್ನಾಗಿ ತಿಂದು ಬೊಜ್ಜಿನಿಂದ ಸಾವನ್ನಪ್ಪುವ ಸಾಧ್ಯತೆಗಳಿವೆ. ಇಂತಹ ಘಟನೆಗಳನ್ನು ತಪ್ಪಿಸುವುದಕ್ಕಾಗಿ ಪ್ರಾಣಿಗಳು ಪ್ರತಿ ದಿನ ಎಷ್ಟು ಆಹಾರ ತಿನ್ನುತ್ತವೆ, ಎಷ್ಟು ಸಮಯ ಓಡಾಡುತ್ತವೆ, ನಿದ್ರಿಸುತ್ತವೆ ಎಂಬ ಮಾಹಿತಿ ಈ ವಾಚ್‌ನಲ್ಲಿ ಸಿಗಲಿದೆ. ನಗರ ಪ್ರದೇಶದಲ್ಲಿ ದಂಪತಿಗಳಿಬ್ಬರು ಕೆಲಸಕ್ಕೆ ಹೋಗುವಂತಹ ಪರಿಸ್ಥಿತಿಗಳಿದ್ದರೆ, ನಾಯಿಗಳನ್ನು ಉಪಚರಿಸಲು ಯಾರೊಬ್ಬರು ಇಲ್ಲದಿರುವ ಮನೆಗಳಲ್ಲಿ ಈ ವಾಚ್ ಸಹಕಾರಿಯಾಗಲಿದೆ.