ನವದೆಹಲಿ:ಒಂದು ಸಣ್ಣ ಸುಳ್ಳು(ಫೇಕ್) ಸುದ್ದಿ ಇಡೀ ದೇಶಾದ್ಯಂತ ಬಿರುಗಾಳಿ ಎಬ್ಬಿಸಬಹುದು ಎಂದು ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಯಾವುದೇ ಸುದ್ದಿ, ವಿಡಿಯೋಗಳನ್ನು ಫಾರ್ವರ್ಡ್ ಮಾಡುವ ಮೊದಲು ಯೋಚಿಸಲು ಮತ್ತು ನಂಬುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಇದನ್ನೂ ಓದಿ:ರಾಜಧಾನಿಯಲ್ಲಿ ಹಾವುಗಳ ಸಂಚಾರ ಹೆಚ್ಚಳ; ಅಪಾಯಕ್ಕೆ ಸಿಲುಕಿದ ಪಕ್ಷಿಗಳು
ಅವರು ಶುಕ್ರವಾರ(ಅಕ್ಟೋಬರ್ 28) ಹರ್ಯಾಣದ ಸೂರಜ್ ಕುಂಡ್ ನಲ್ಲಿ ವಿವಿಧ ರಾಜ್ಯಗಳ ಗೃಹ ಸಚಿವರ ಚಿಂತನ್ ಶಿವಿರ್ (ಶಿಬಿರ) ಅನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಸಮನಾಗಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ವಿವರಿಸಿದ ಅವರು, ದೇಶದ ಕಾನೂನು ಏಜೆನ್ಸಿಗಳು ಅಪರಾಧ ಜಗತ್ತಿಕ್ಕಿಂತ ಹತ್ತು ಹೆಜ್ಜೆ ಮುಂದಿರಬೇಕು ಎಂದು ಹೇಳಿದರು. ಕಾನೂನು ಪಾಲಿಸುವ ನಾಗರಿಕರ ಸುರಕ್ಷತೆ ಮತ್ತು ಹಕ್ಕುಗಳಿಗಾಗಿ ವಿಧ್ವಂಸಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ.
“ಒಂದು ದೇಶ, ಒಂದು ಪೊಲೀಸ್ ಸಮವಸ್ತ್ರ ವ್ಯವಸ್ಥೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಒಂದು ವೇಳೆ ಇದನ್ನು ಜಾರಿಗೊಳಿಸಲು ಸಾಧ್ಯವೇ ಎಂಬ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಚರ್ಚಿಸಬೇಕು ಎಂದು ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.