Advertisement

ಹನಿ ನೀರಾವರಿ ಸಹಾಯಧನ ಬಿಡುಗಡೆ ಮಾಡಲು ಲಂಚ ಸ್ವೀಕರಿಸಿದ ರೇಷ್ಮೆ ನಿರೀಕ್ಷಕ ಎಸಿಬಿ ಬಲೆಗೆ

08:19 PM Oct 13, 2020 | Mithun PG |

ಚಿಕ್ಕಬಳ್ಳಾಪುರ:  ರೇಷ್ಮೆ ಹುಳು ಸಾಕಾಣಿಕೆ ಮನೆ ಮತ್ತು ಹನಿ ನೀರಾವರಿಯ ಸಹಾಯಧನ ಬಿಡುಗಡೆ ಮಾಡಲು 12,500 ರೂಗಳು ಲಂಚ ಸ್ವೀಕರಿಸಿದ ಶಿಡ್ಲಘಟ್ಟ ತಾಲೂಕಿನ ಮೇಲೂರು ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ನಿರೀಕ್ಷಕರೊಬ್ಬರು ಭ್ರಷ್ಟಚಾರ ನಿಗ್ರಹದಳ(ಎಸಿಬಿ) ಬಲೆಗೆ ಸಿಕ್ಕಿಬಿದ್ದಿದ್ದಾರೆ.

Advertisement

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರು ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ನಿರೀಕ್ಷಕ ಪ್ರವೀಣ್ ಅವರು ಲಂಚ ಸ್ವೀಕರಿಸುವಾಗ ಎಸಿಬಿ ಪೋಲಿಸರು ಹಣದ ಸಮೇತ ಬಂಧಿಸಿದ್ದಾರೆ.

ಶಿಡ್ಲಘಟ್ಟ ತಾಲೂಕಿನ ಮೇಲೂರಿನ ಶ್ರೀನಿವಾಸರೆಡ್ಡಿ ಅವರು ನೀಡಿದ ದೂರಿನ ಮೇರೆಗೆ ಭ್ರಷ್ಟಚಾರ ನಿಗ್ರಹದಳ(ಎಸಿಬಿ) ಡಿವೈಎಸ್ಪಿ ಮಂಜುನಾಥ್ ಅವರ ನೇತೃತ್ವದಲ್ಲಿ ಸಿಪಿಐ ಬಿ.ವಿ.ಲಕ್ಷ್ಮೀದೇವಿ ಮತ್ತು ಸಿಬ್ಬಂದಿ ದಾಳಿ ನಡೆಸಿ ರೈತರಿಂದ ಲಂಚ ಸ್ವೀಕರಿಸುತ್ತಿದ್ದ ಮೇಲೂರು ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ನಿರೀಕ್ಷಕ ಪ್ರವೀಣ್ ಅವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಘಟನೆ ಹಿನ್ನೆಲೆ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರಿನ ಶ್ರೀನಿವಾಸರೆಡ್ಡಿ ಅವರು ತಮ್ಮ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಿಸಲು ಸಹಾಯಧನವನ್ನು ಪಡೆಯಲು ಈಗಾಗಲೇ ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ನಿರೀಕ್ಷಕ ಪ್ರವೀಣ್ ಅವರಿಗೆ 20 ಸಾವಿರ ರೂಗಳನ್ನು ನೀಡಿದ್ದಾರೆ ಎನ್ನಲಾಗಿದೆ ಅದರ ಬಾಬತ್ತು 5 ಸಾವಿರ ರೂಗಳು ಮತ್ತು ಹನಿ ನೀರಾವರಿಯ 35 ಸಾವಿರ ರೂಗಳ ಸಹಾಯಧನ ಬಿಡುಗಡೆ ಮಾಡಲು 5 ಸಾವಿರ ಲಂಚ ನೀಡಲು ಅಧಿಕಾರಿ ನವೀನ್ ಬೇಡಿಕೆ ಇಟ್ಟಿದ್ದಾರೆ ಒಟ್ಟು 12500 ರೂಗಳನ್ನು ಪಾವತಿಸಲು ಪದೇ ಪದೇ ಒತ್ತಡ ಹಾಕುತ್ತಿದ್ದರಿಂದ ನೊಂದ ರೈತ ಭ್ರಷ್ಟಚಾರ ನಿಗ್ರಹದಳಕ್ಕೆ ದೂರು ದಾಖಲಿಸಿದ್ದಾರೆ.

ಭ್ರಷ್ಟಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಎಸಿಬಿ ಅಧಿಕಾರಿಗಳ ತಂಡ ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ನಿರೀಕ್ಷಕ ಪ್ರವೀಣ್ ಅವರನ್ನು ಲಂಚ ಸ್ವೀಕರಿಸುವಾಗ ದಾಳಿ ನಡೆಸಿ ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next