ಚಂಡೀಗಢ/ಹೊಸದಿಲ್ಲಿ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ರಾಜಕೀಯ ಚಟುವಟಿಕೆಗಳು ಚುರುಕು ಪಡೆದಿದೆ. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಕಾಂಗ್ರೆಸ್ ನಲ್ಲಿ ಕಸರತ್ತುಗಳು ನಡೆಯುತ್ತಿದೆ.
ಈ ಮಧ್ಯೆ ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ರಾಜ್ಯಸಭೆ ಸದಸ್ಯೆ ಅಂಬಿಕಾ ಸೋನಿ ನಿರಾಕರಿಸಿದ್ದಾರೆ. ಸಿಖ್ ನಾಯಕನನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ ಮೂಲಗಳು ತಿಳಿಸಿವೆ.
ಸಿಖ್ ಸಮುದಾಯೇತರ ವ್ಯಕ್ತಿಯಾಗಿರುವ ತಾವು ರಾಜ್ಯದ ಮುಖ್ಯಮಂತ್ರಿಯಾದರೆ ಅಡ್ಡಪರಿಣಾಮಗಳು ಎದುರಾಗುತ್ತದೆ. ಆದ್ದರಿಂದ ತಾವು ಸಿಎಂ ಆಗುವುದಕ್ಕೆ ಸಾಧ್ಯವಿಲ್ಲ, ಈ ಹಿನ್ನೆಲೆಯಲ್ಲಿ ತಮ್ಮ ಹೆಸರನ್ನು ಪರಿಗಣಿಸುವುದು ಬೇಡ ಎಂದು ಅಂಬಿಕಾ ಸೋನಿ ಕಾಂಗ್ರೆಸ್ ಹೈಕಮಾಂಡ್ ಗೆ ಹೇಳಿದ್ದಾರೆ.
ಇದನ್ನೂ ಓದಿ:ನೀವು ಚಹಾದೊಂದಿಗೆ ಸವಿಯುವ ಟೋಸ್ಟ್ ಹೀಗೂ ಮಾಡ್ತಾರೆ! ಶಾಕಿಂಗ್ ವಿಡಿಯೋ ವೈರಲ್
ಆ.18 ರಂದು ರಾತ್ರಿ ರಾಹುಲ್ ಗಾಂಧಿಯವರು ಅಂಬಿಕಾ ಸೋನಿ ಅವರನ್ನು ಭೇಟಿ ಮಾಡಿದ್ದು ಈ ವೇಳೆ ಸಿಎಂ ಆಫರ್ ನೀಡಿದ್ದಾರೆ, ಆದರೆ ಸಂಸದೆ ಅದನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.