Advertisement
34ನೇ ನೆಕ್ಕಿಲಾಡಿ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮಶತಾಬ್ದ ಅಂಗವಾಗಿ ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ನಡೆದ ಮಹಾಸಂಪರ್ಕ ಅಭಿಯಾನ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅವರ ಹಾದಿಯಲ್ಲಿ ಮುನ್ನಡೆಯುತ್ತಿ ರುವ ಭಾರತೀಯ ಜನತಾ ಪಾರ್ಟಿಯು ಸರ್ವ ವ್ಯಾಪಿ, ಸರ್ವಜನ ಮೆಚ್ಚುಗೆಯ ಪಕ್ಷವಾಗಿ ಹೊರ ಹೊಮ್ಮಿದೆ. ದೇಶದಲ್ಲಿಂದು ಬದಲಾವಣೆಯ ಗಾಳಿ ಬೀಸುತ್ತಿದ್ದು, ನುಡಿದಂತೆ ನಡೆದಿರುವ ಕೇಂದ್ರ ಸರಕಾರವು ಭ್ರಷ್ಟ ಮುಕ್ತ ಆಡಳಿತ ನಡೆಸಿ, ಸದೃಢ ಭಾರತ ನಿರ್ಮಾಣ ಮಾಡುವಲ್ಲಿ ಮಹತ್ತರ ಹೆಜ್ಜೆಯಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಗೆ ಇಡೀ ಜಗತ್ತೇ ಬೆರಗಾಗಿದ್ದು, ಭಾರತವು ವಿಶ್ವಗುರುವಾಗಿ ಬೆಳೆಯುತ್ತಿದೆ. ಯೋಗದ ಮೂಲಕ ಸಾಂಸ್ಕೃತಿಕ ಭಾರತ ಪ್ರತಿಪಾದನೆ ಯನ್ನು ಮಾಡಿ ವಿಶ್ವದ ವಿಶ್ವಾಸಕ್ಕೆ ಪಾತ್ರ ವಾಗಿರುವ ಮೋದಿ ಸರಕಾರ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ದೇಶದ ಸಮಗ್ರ ಅಭಿವೃದ್ಧಿ ನಡೆಸುತ್ತಿದೆ ಎಂದರು. ವರದಾನ
ಬಿಜೆಪಿ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಮೂಡಬಿದ್ರೆ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಕಾನೂನು ಪರಿಸ್ಥಿತಿ ತೀರಾ ಹದ ಗೆಟ್ಟಿದ್ದು, ರೈತರು ಬದುಕುವ ಭರವಸೆ ಯನ್ನು ಕಳದುಕೊಂಡಿದ್ದಾರೆ ಎಂದು ಹೇಳಿದರು.
Related Articles
Advertisement
ಜನರ ಹಿತ ಮರೆತಿದೆಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ರಾಜ್ಯ ಸರಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿ ರಾಜ್ಯದ ಜನರ ಹಿತವನ್ನು ಮರೆತಿದೆ. ಕೊಲೆ ಸುಲಿಗೆ, ಅತ್ಯಾಚಾರ ನಿರಂತರ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಸಿದ್ದರಾಮಯ್ಯ ಅವರು ಸಾರ್ವಜನಿಕರಿಗೆ ಮುಖ ತೋರಿಸದಂತಾಗಿದೆ. ಸರಕಾರದ ಸಚಿವರುಗಳು ನಿದ್ರೆ ಮಾಡುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಗ್ಗೊàಲೆಯಾಗುತ್ತಿದೆ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ. ಕೇಂದ್ರ ಸರಕಾರ ನೀಡಿದ ಅನುದಾನಗಳನ್ನು ಸಮರ್ಪಕ ಬಳಕೆ ಮಾಡಿಕೊಳ್ಳಲು ಸಾಧ್ಯ ವಾಗದ ರಾಜ್ಯ ಸರಕಾರ ವಿನಾಕಾರಣ ಕೇಂದ್ರ ಹಾಗೂ ಬಿಜೆಪಿಯನ್ನು ದೂಷಿಸಿ ಕಾಲಹರಣ ಮಾಡುತ್ತಿದೆ ಎಂದರು. ವೇದಿಕೆಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶಂಭು ಭಟ್, ಕೇಶವ ಗೌಡ ಬಜತ್ತೂರು, ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ ಗೌಡ, ತಾ.ಪಂ.ಸದಸ್ಯೆ ಸುಜಾತಾ ಕೃಷ್ಣ ಆಚಾರ್ಯ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಹರೀಶ್ ಮೂಡುಶೆಡ್ಡೆ, ಬಿಜೆಪಿ ಪುತ್ತೂರು ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸುನೀಲ್ ದಡ್ಡು, ಹಿರಿಯ ಬಿಜೆಪಿ ಕಾರ್ಯ ಕರ್ತ ಭಾಸ್ಕರ ಆಚಾರ್ಯ, 34 ನೆಕ್ಕಿಲಾಡಿ ಗ್ರಾ.ಪಂ. ಸದಸ್ಯರಾದ ಕೃಷ್ಣವೇಣಿ, ಜ್ಯೋತಿ, ಪ್ರಶಾಂತ್ ಶಿವಾಜಿ ನಗರ, ಗ್ರಾಮ ಸಮಿತಿ ಅಧ್ಯಕ್ಷ ರಾಜೇಶ್ ಮುಖಾರಿ, ಉಷಾ ಮುಳಿಯ, ಸದಾನಂದ ಕಾರ್ ಕ್ಲಬ್, ಶಿವಾನಂದ ಕಜೆ, ತಾ.ಪಂ. ಮಾಜಿ ಸದಸ್ಯ ಉಮೇಶ್ ಶೆಣೈ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು ಶಿಲ್ಪಾ ಭಾರ್ಗವ ವಂದೇ ಮಾತರಂ ಗೀತೆ ಹಾಡಿದರು. ವೈಶಾಲಿ ಕುಂದರ್ ವೈಯಕ್ತಿಕ ಗೀತೆ ಹಾಡಿದರು. ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ರಾಜೇಶ್ ರಾವ್ ಅವರು ಸ್ವಾಗತಿಸಿದರು. ದಿನಕರ ಆಚಾರ್ಯ ಸುಭಾಸ್ ನಗರ ಅವರು ವಂದಿಸಿದರು. ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು. ಅಧಿಕಾರ ಹಸ್ತಾಂತರ
ಇದೇ ಸಂದರ್ಭದಲ್ಲಿ ಬಿಜೆಪಿ ಗ್ರಾಮ ಸಮಿತಿ ಹಾಗೂ ಬೂತ್ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು ಹಾಗೂ ಯುವ ಮೋರ್ಚಾದ ವತಿಯಿಂದ ನಡೆಸಲಾದ ಕಬಡ್ಡಿ ಪಂದ್ಯಾಟದ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.