Advertisement
ನಕ್ಸಲರ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಗೌರಿ ಲಂಕೇಶ್ ಹತ್ಯೆಯ ಬಳಿಕ ನಿಷ್ಕ್ರಿಯಗೊಂಡಿತ್ತು. ಅನಂತರ ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ. ಸರಕಾರ ಕೂಡ ಹೊಸ ಸಮಿತಿ ರಚನೆಗೆ ಮುಂದಾಗಿರಲಿಲ್ಲ. ಕಾಂಗ್ರೆಸ್ ಸರಕಾರ ಬರುತ್ತಿದ್ದಂತೆ ಇದಕ್ಕೆ ಜೀವ ಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು.
Related Articles
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಬೇಕೆಂದು ಹಿಂದಿನ ಕಾಂಗ್ರೆಸ್ ಸರಕಾರ ಗೌರಿ ಲಂಕೇಶ್ ನೇತೃತ್ವದಲ್ಲಿ ಸಮಿತಿ ಮಾಡಿತ್ತು. ಈವರೆಗೆ ಒಟ್ಟು 14 ಮಂದಿ ನಕ್ಸಲರು ಮುಖ್ಯವಾಹಿನಿಗೆ ಬಂದಿದ್ದು ಕೆಲವರು ಸರಕಾರದ ಸೌಕರ್ಯ ಪಡೆಯದೇ ಬದುಕುತ್ತಿದ್ದಾರೆ. ಸಮಿತಿ ಮೂಲಕ ಇನ್ನಷ್ಟು ಜನರನ್ನು ಕರೆತರಲು ಸಮಿತಿ ಪ್ರಯತ್ನ ಮಾಡಿತ್ತು. ಆದರೆ ಈ ಹಿಂದೆ ಶರಣಾಗತಿ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ವಿಕ್ರಂ ಗೌಡ ಸಮಿತಿಯ ಗೌರಿ ಲಂಕೇಶ್ ವಿರುದ್ಧವೇ ಭಿತ್ತಿಪತ್ರ ಹಂಚಿದ್ದ. ಪ್ರಸ್ತುತ ಇರುವ ಡಾ| ಬಂಜಗೆರೆ ಜಯಪ್ರಕಾಶ್ ನೇತೃತ್ವದ ಸಮಿತಿಗೂ ಈವರೆಗೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
Advertisement