Advertisement

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?

12:49 AM Nov 20, 2024 | Shreeram Nayak |

ಶಿವಮೊಗ್ಗ: ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ ಆಗುತ್ತಿದ್ದಂತೆ ನಕ್ಸಲರನ್ನು ಮುಖ್ಯ ವಾಹಿನಿಗೆ ಕರೆದುಕೊಂಡು ಬರುವ ಪ್ರಯತ್ನಕ್ಕೆ ಹಿನ್ನಡೆಯಾಯಿತೇ ಎಂಬ ಅನುಮಾನ ಮೂಡಿಸಿದೆ.

Advertisement

ನಕ್ಸಲರ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಗೌರಿ ಲಂಕೇಶ್‌ ಹತ್ಯೆಯ ಬಳಿಕ ನಿಷ್ಕ್ರಿಯಗೊಂಡಿತ್ತು. ಅನಂತರ ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ. ಸರಕಾರ ಕೂಡ ಹೊಸ ಸಮಿತಿ ರಚನೆಗೆ ಮುಂದಾಗಿರಲಿಲ್ಲ. ಕಾಂಗ್ರೆಸ್‌ ಸರಕಾರ ಬರುತ್ತಿದ್ದಂತೆ ಇದಕ್ಕೆ ಜೀವ ಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು.

ನಿರೀಕ್ಷೆಯಂತೆ ಸರಕಾರ ಡಾ| ಬಂಜಗೆರೆ ಜಯಪ್ರಕಾಶ್‌ ನೇತೃತ್ವದಲ್ಲಿ ಸಮಿತಿ ರಚಿಸಿ ಜೀವ ಕೊಟ್ಟಿತ್ತು. ಈ ಸಮಿತಿ ನಕ್ಸಲ್‌ ಓಡಾಟವಿರುವ ಪ್ರದೇಶಗಳಿಗೆ ಭೇಟಿ ನೀಡಿ ಅವರನ್ನು ಸಂಪರ್ಕಿಸುವ ಪ್ರಯತ್ನ ಸಹ ಮಾಡಿತ್ತು. ಪತ್ರಗಳನ್ನು ಸಹ ಬರೆದಿತ್ತು. ಆದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಕೇರಳದಿಂದ ಕರ್ನಾಟಕದ ಕಡೆ ವಾಪಸ್‌ ಬಂದಿದ್ದ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಸಮಿತಿ ಪ್ರಯತ್ನ ಸಹ ಮಾಡಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇಂದಲ್ಲ ನಾಳೆ ಅವರನ್ನು ಸಂಪರ್ಕಿಸಿ ಅವರ ಬೇಡಿಕೆಗಳನ್ನು ತಿಳಿದು ಪರಿಹರಿಸಿ ಮುಖ್ಯವಾಹಿನಿಗೆ ತರಬೇಕೆಂಬ ಹೊತ್ತಿನಲ್ಲೇ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ವಿನಾ ಕಾರಣ ಕಾಡಿನಲ್ಲಿ ಸಾವು-ನೋವುಗಳು ಆಗ ಬಾರದು. ಮುಖ್ಯವಾಹಿನಿಗೆ ಬರುವವರನ್ನು ಕರೆತರಬೇಕು ಎಂಬ ಸಮಿತಿ ಉದ್ದೇಶಕ್ಕೆ ನೀರರೆಚಿದಂತಾಗಿದೆ.

ಶರಣಾಗತಿ ವಿರೋಧಿಸಿದ್ದ
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಬೇಕೆಂದು ಹಿಂದಿನ ಕಾಂಗ್ರೆಸ್‌ ಸರಕಾರ ಗೌರಿ ಲಂಕೇಶ್‌ ನೇತೃತ್ವದಲ್ಲಿ ಸಮಿತಿ ಮಾಡಿತ್ತು. ಈವರೆಗೆ ಒಟ್ಟು 14 ಮಂದಿ ನಕ್ಸಲರು ಮುಖ್ಯವಾಹಿನಿಗೆ ಬಂದಿದ್ದು ಕೆಲವರು ಸರಕಾರದ ಸೌಕರ್ಯ ಪಡೆಯದೇ ಬದುಕುತ್ತಿದ್ದಾರೆ. ಸಮಿತಿ ಮೂಲಕ ಇನ್ನಷ್ಟು ಜನರನ್ನು ಕರೆತರಲು ಸಮಿತಿ ಪ್ರಯತ್ನ ಮಾಡಿತ್ತು. ಆದರೆ ಈ ಹಿಂದೆ ಶರಣಾಗತಿ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ವಿಕ್ರಂ ಗೌಡ ಸಮಿತಿಯ ಗೌರಿ ಲಂಕೇಶ್‌ ವಿರುದ್ಧವೇ ಭಿತ್ತಿಪತ್ರ ಹಂಚಿದ್ದ. ಪ್ರಸ್ತುತ ಇರುವ ಡಾ| ಬಂಜಗೆರೆ ಜಯಪ್ರಕಾಶ್‌ ನೇತೃತ್ವದ ಸಮಿತಿಗೂ ಈವರೆಗೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next