ಶುಕ್ರವಾರ ಮತದಾನ ನಡೆದ 14 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಆದರೆ, ಶೇ.72ರ ಗುರಿ ತಲುಪುವ ಚುನಾವಣ ಆಯೋಗದ ಪ್ರಯತ್ನಗಳಿಗೆ ಇದು ಸಾಕಾಗಲಿಕ್ಕಿಲ್ಲ. ಎರಡನೇ ಹಂತದಲ್ಲಿ ಮೇ 7ರಂದು ಉಳಿದ 14 ಕ್ಷೇತ್ರಗಳಲ್ಲಿ ನಡೆಯುವ ಮತದಾನದ ಮೇಲೆ ಚುನಾವಣಾ ಆಯೋಗದ ಗುರಿ ಸಾಧನೆ ಅವಲಂಬಿತವಾಗಿದೆ.
Advertisement
ಚುನಾವಣ ಆಯೋಗದ ಪ್ರಯತ್ನಗಳಿಗೆ ಯಥಾರೀತಿ ಹಿನ್ನಡೆ ಉಂಟಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ. ಬೆಂಗಳೂರು ಗ್ರಾಮಾಂತರ ಸಹಿತ ನಗರ ವ್ಯಾಪ್ತಿಯ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸವೇನು ಕಂಡು ಬಂದಿಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ಕಳೆದ ಬಾರಿ ಶೇ. 64.09 ಆಗಿದ್ದರೆ, ಈ ಬಾರಿ ಶೇ.67.29 ಮತದಾನ ಆಗಿದೆ. ಬೆಂಗಳೂರು ಉತ್ತರದಲ್ಲಿ ಕಳೆದ ಬಾರಿ ಶೇ.51.26 ಮತದಾನ ಆಗಿದ್ದರೆ, ಈ ಬಾರಿ ಶೇ.52.81 ಆಗಿದೆ. ಬೆಂಗಳೂರು ಕೇಂದ್ರದಲ್ಲಿ ಕಳೆದ ಅತಿ ಕಡಿಮೆ ಶೇ.50.84 ಆಗಿದ್ದರೆ, ಈ ಬಾರಿ ಶೇ.52.81 ಮತದಾನ ಆಗಿದೆ. ಮೊದಲ ಹಂತದಲ್ಲಿ ಮತದಾನ ನಡೆದ 14 ಕ್ಷೇತ್ರಗಳ ಪೈಕಿ ಇದು ಅತಿ ಕಡಿಮೆ ಮತದಾನ ಆಗಿದೆ.