ಬದಿಯಡ್ಕ: ಸರಕಾರಿ ಶಾಲೆಗಳು ಗುಣಮಟ್ಟದ ಯೋಗ್ಯ ಶಿಕ್ಷಣವನ್ನು ನೀಡಿ ಸಮಗ್ರ ಶಿಕ್ಷಣ ಹಕ್ಕನ್ನು ಎಲ್ಲ ವರ್ಗದವರಿಗೂ ಸಮಾನವಾಗಿ ಒದಗಿಸಿಕೊಡುತ್ತಿರುವ ಮಧ್ಯೆ ಇಂದು ಸರಕಾರಿ ಶಾಲೆಗಳು ತೀವ್ರ ಸಮಸ್ಯೆ ಗಳನ್ನು ಎದುರಿಸುತ್ತಿರುವುದು ಕಳವಳ ಕಾರಿ. ಈ ಹಿನ್ನೆಯಲ್ಲಿ ಜನಜಾಗƒತಿಗಾಗಿ ಸರಕಾರ ಹಮ್ಮಿ ಕೊಂಡಿರುವ ಯೋಜನೆಯನ್ನು ಯಶಸ್ವಿಗೊಳಿಸಬೇಕಾದ ಹೊಣೆ ಪ್ರತಿಯೊಬ್ಬನಿಗೂ ಇದೆ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷಿ ಸಾರ್ವಜನಿಕ ವಿದ್ಯಾಭ್ಯಾಸ ಸಂರಕ್ಷಣಾ ಯಜ್ಞದ ಭಾಗವಾಗಿ ಕೇರಳ ಸ್ಟೇಟ್ ಟೀಚರ್ ಎಸೋಸಿಯೇಶನ್ (ಕೆಎಸ್‌ಟಿಎ) ಕುಂಬಳೆ ಉಪಜಿಲ್ಲಾ ಮಟ್ಟದಲ್ಲಿ ಜಿಜೆಬಿಎಸ್ ಪಿಲಾಂಕಟ್ಟೆ ಶಾಲೆಯಲ್ಲಿ ಹಮ್ಮಿಕೊಂಡ “ಮೆರುಗು’ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಎಸ್‌ಟಿಎ ರಾಜ್ಯ ಸಮಿತಿ ಸದಸ್ಯೆ ಶಾಹಿನಾ ಸಲೀಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ. ಶ್ರೀಕಾಂತ್, ಬ್ಲಾಕ್ ಪಂಚಾಯತ್ ಸದಸ್ಯೆ ಮಲ್ಲಿಕಾ ಟೀಚರ್, ಕುಂಬಳೆ ಬ್ಲಾಕ್ ಯೋಜನಾಧಿಕಾರಿ ಕುಂಞಿಕೃಷ್ಣನ್, ಕೆಎಸ್‌ಟಿಎ ಜಿಲ್ಲಾ ಉಪಾಧ್ಯಕ್ಷ ರವೀಂದ್ರನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ವಿಷ್ಣುಪಾಲ್ ಬಿ., ಶಾಲಾ ಹಳೆವಿದ್ಯಾರ್ಥಿ ಮುಹಮ್ಮದ್ ಪಿಲಾಂಕಟ್ಟೆ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಾರ್ಟಿನ್ ಅಬ್ರಹಾಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭಾಸ್ಕರನ್, ಶಾಲಾ ಮಾತೃ ಸಂಘದ ಅಧ್ಯಕ್ಷೆ ಬೇಬಿ ಶಾಲಿನಿ, ಕೆಎಸ್‌ಟಿಎ ಕುಂಬಳೆ ಉಪಜಿಲ್ಲಾ ಘಟಕಾಧ್ಯಕ್ಷ ವಿಜಯಕುಮಾರ್ ಕೆ.ವಿ. ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಕೆಎಸ್‌ಟಿಎ ರಾಜ್ಯ ಸಮಿತಿ ಸದಸ್ಯ ಎ.ಕೆ.ಸದಾನಂದನ್ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಗೆ ಕೊಡುಗೆಯಾಗಿ ನೀಡಿದ ಎಲ್‌ಸಿಡಿ ಪ್ರೊಜೆಕ್ಟರ್‌ನ್ನು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ ಕೆ. ಅವರು ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್ ಜೆ.ಬಿ. ಅವರಿಗೆ ಹಸ್ತಾಂತರಿಸಿ ಉದ್ಘಾಟಿಸಿದರು. ಚೆಂಗಳ ಗ್ರಾಮಪಂಚಾಯತ್ ಸದಸ್ಯ ಅಬ್ದುಲ್ಲ ಕುಂಞಿ ಕೋಳಾರಿ ಸ್ವಾಗತಿಸಿ, ರಾಜೇಶ್ ಎಂ ವಂದಿಸಿದರು.