Advertisement

ನಮ್ಮ ಉದಯವಾಣಿ, ನಮ್ಮಹೃದಯವಾಣಿ

09:59 AM Feb 21, 2020 | mahesh |

ಲೇಖನ ಪ್ರಕಟವಾದ ಸಂಭ್ರಮ
ಮಡಿಲ ಮಗು ಕಣ್ಣು ತೆರೆದಾಗ ಮೊದಲು ಅಮ್ಮನ ಮುಖ ನೋಡಿ ದಂತೆ ನಾನು ಓದಿದ ಮೊದಲ ಪತ್ರಿಕೆ ಉದಯವಾಣಿ. ಪತ್ರಿಕೆಯನ್ನು ಕೊಂಡು ಓದಲು ಶಕ್ತಿ ಇಲ್ಲದ ಆ ಕಾಲದಲ್ಲಿ ಒಂದು ಕಿ.ಮೀ. ದೂರದ ಸಂಬಂಧಿಕರೊಬ್ಬರ ಮನೆಯಿಂದ 2 ದಿನಕ್ಕೊಮ್ಮೆ ಎರವಲು ಪಡೆದಾದರೂ ಓದುತ್ತಿದ್ದೆ. ಉದಯವಾಣಿಯನ್ನು ಓದುವ ಗೀಳು ನನ್ನ ಬರವಣಿಗೆಗೆ ಪ್ರಚೋದನೆ ನೀಡಿತು. ಕಾಲೇಜು ದಿನಗಳಲ್ಲಿ ಬರೆದುದನ್ನೆಲ್ಲ ಉದಯ ವಾಣಿಗೆ ಕಳುಹಿಸುತ್ತಿದ್ದೆ. ಮೊದಲು ಜನತಾವಾಣಿಯಲ್ಲಿ ಬರಹವೊಂದು ಪ್ರಕಟವಾಗಿತ್ತು. ಅದು ನನ್ನಲ್ಲಿ ಬರೆಯುವ ಆತ್ಮವಿಶ್ವಾಸವನ್ನು ಮೂಡಿಸಿತ್ತು. ಸಾಪ್ತಾಹಿಕ, ಮಹಿಳಾ ಸಂಪದದಲ್ಲಿ ಬರಹಗಳು ಪ್ರಕಟವಾಗಿರುವುದು ಬಹಳ ಹೆಮ್ಮೆ ಎನಿಸುತ್ತದೆ. ತನ್ನ ಮೌಲ್ಯವನ್ನು ಉಳಿಸಿಕೊಂಡು ಮನಗೆದ್ದ ಪತ್ರಿಕೆ ನೂರುಕಾಲ ಬೆಳಗಲಿ.
ಶೈಲಜಾ, ಪುದುಕೋಳಿ

Advertisement

ಜ್ಞಾನ ಹೊತ್ತು ಬರುವ ಉದಯವಾಣಿ
ಉದಯವಾಣಿ ಜನಮನದ ಜೀವನಾಡಿ ಎಂಬದು ಅಕ್ಷರಶಃ ನಿಜ. ಕಳೆದ ಹಲವು ವರ್ಷಗಳಿಂದ ಪತ್ರಿಕೆಯ ಒಡನಾಡಿಯಾಗಿದ್ದೇನೆ. ಅದೆಷ್ಟೋ ಮಹತ್ವದ ವಿಚಾರಗಳ ಮೂಲಕ ಜ್ಞಾನ ಸಂಪಾದನೆಗೆ ಉದಯವಾಣಿ ಸಹಾಯಕವಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭ ಪ್ರತಿದಿನ ವಿದ್ಯಾರ್ಥಿಗಳಿಂದ ಉದಯವಾಣಿಯನ್ನು ಓದಿಸು ತ್ತಿದ್ದೆವು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ರಸಪ್ರಶ್ನೆ ಸ್ಪರ್ಧೆ ಆಯೋಜಿಸುತ್ತಿರುವಾಗ ಉದಯವಾ ಣಿಯ ಮೂಲಕ ಪ್ರಚಲಿತ ವಿದ್ಯಮಾನಗಳನ್ನು ಓದುವಂತೆ ಪ್ರೇರೇಪಿಸಿ, ಆ ಮೂಲಕ ವಿದ್ಯಾರ್ಥಿಗಳು ವಿಚಾರಗಳನ್ನು ತಿಳಿದು ಸ್ಪರ್ಧೆಗಳಲ್ಲಿ ವಿಜೇತ ರಾಗುತ್ತಿದ್ದರು. ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಾಗ ಆ ಸುದ್ದಿ ಪತ್ರಿಕೆಯಲ್ಲಿ ವರದಿಯಾಗುತ್ತದೆ. ಇದು ಮಕ್ಕಳ ಎಳೆಯ ಪ್ರತಿಭೆಗೆ ಬಹುದೊಡ್ಡ ಸ್ಫೂರ್ತಿಯಾಗಿದೆ. ಪತ್ರಿಕೆಯ ಸಂಪಾದಕೀಯ ಅಂಕಣದಲ್ಲಿ ಬರುವ ಪ್ರತಿಯೊಂದು ವಿಚಾರವು ಅರ್ಥಪೂರ್ಣ. ಉದಯವಾಣಿ ಇನ್ನಷ್ಟು ವಿನೂತನ ಸುದ್ದಿಗಳೊಂದಿಗೆ ಜನರನ್ನು ತಲುಪಲಿ.
ಉದಯ್‌ ನಾಯ್ಕ…, ಬೈಂದೂರು

Advertisement

Udayavani is now on Telegram. Click here to join our channel and stay updated with the latest news.

Next