ಗಂಗಾವತಿ: ಇಲ್ಲಿನ ಮನೆಯೊಂದರಲ್ಲಿ ಚಿನ್ನ ಕಳ್ಳತನ ನಡೆದಿದ್ದು, ಪ್ರಕರಣ ದಾಖಲಾದ 24 ಗಂಟೆಯಲ್ಲಿ ಚಿನ್ನಾಭರಣಗಳ ಸಮೇತ ಕಳ್ಳರನ್ನು ಪತ್ತೆ ಮಾಡಿ ಬಂಧಿಸಿದ ಘಟನೆ ನಗರಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಗೌಸಿಯಾ ಕಾಲೋನಿ ನಿವಾಸಿ ಮಹಮದ್ ಖಾಜಾ ಹಾಗೂ ಮಹೆಬೂಬನಗರ ನಿವಾಸಿ ಗೌಸ್‌ಪಾಷಾ ಬಂಧಿತ ಆರೋಪಿಗಳು.
ಮುಜಾವರ ಕ್ಯಾಂಪಿನ ಸಂಗಮ್ಮ ಎಂಬುವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆ ಬಾಗಿಲು ಮುರಿದು ಮನೆಯ ಅಲ್ಮೇರಾದಲ್ಲಿದ್ದ 4.70 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 24 ಗಂಟೆಯಲ್ಲಿ ಚಿನ್ನಾಭರಣಗಳ ಸಮೇತ ಕಳ್ಳರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಕುಂದಾಪುರ: ಅಪಘಾತ; ಮೂವರಿಗೆ ಗಾಯ
ಬೈಕ್ ಕಳ್ಳತನ ಪ್ರಕರಣ ನಾಲ್ವರ ಬಂಧನ
ನಗರ ಠಾಣೆಯ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು ಸೇರಿ ನಾಲ್ವರು ಕಳ್ಳರನ್ನು 6 ಬೈಕ್ ಸಮೇತ ಬಂಧಿಸಲಾಗಿದೆ.
ರಾಜಾಭಕ್ಷಿ, ಪ್ರವೀಣಕುಮಾರ ಹಾಗೂ ಇಬ್ಬರು ಅಪ್ರಾಪ್ತರು ಕಳ್ಳತನ ಬಂಧಿತ ಆರೋಪಿಗಳು.
ಎರಡು ಪ್ರಕರಣಗಳನ್ನು ಪತ್ತೆ ಮಾಡಲು ಎಸ್ಪಿ ಅರುಣಾಂಶ್ಯು ಗಿರಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಅವರು ಪಿಐ ವೆಂಕಟಸ್ವಾಮಿ, ಪಿಎಸ್‌ಐ ಕಾಮಣ್ಣ ಹಾಗೂ ಗ್ಯಾನಪ್ಪ ಕುರಿ, ಮೈಲಾರಪ್ಪ, ಪ್ರಭಾಕರ, ಮರಿಶಾಂತಗೌಡ, ಪರಸಪ್ಪ, ರಾಘವೇಂದ್ರ, ಶಿವಕುಮಾರ, ನೀಲಪ್ಪ ಪೊಲೀಸ್ ಸಿಬ್ಬಂದಿಯವರ ನೇತೃತ್ವದ ತಂಡ ಪ್ರಕರಣದ ತೀವ್ರ ತನಿಖೆ ನಡೆಸಿ ಬೇಗನೆ ಆರೋಪಿಗಳನ್ನು ಬೈಕ್ ಹಾಗೂ ಚಿನ್ನಾಭರಣಗಳ ಸಮೇತ ಬಂಧಿಸಿದ್ದು ಇವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.