Advertisement
“ಪ್ರಚಲಿತ ವ್ಯಕ್ತಿಗತ ಕಾನೂನು ಸಮುಚ್ಚಯ (Personal civil code law) ನಿಜಕ್ಕೂ ಕಮ್ಯುನಲ್ ಹಾಗೂ ತಾರತಮ್ಯ ಪೂರಿತ. ನಮಗಿಂದು ಬೇಕಾಗಿರುವುದು ಸೆಕ್ಯುಲರ್ ಕಾನೂನು!’ ಇದು 78ನೇ ಸ್ವಾತಂತ್ರ್ಯೋತ್ಸವದ ಸಂದರ್ಭ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜವರಳಿಸಿದ ಪ್ರಧಾನಿ ರಾಷ್ಟ್ರವನ್ನು ಉದ್ದೇಶಿಸಿ ನೀಡಿದ ಕರೆ. ಅದರೊಂದಿಗೇ, “ಈ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯಾಗಬೇಕು; ಹಾಗೂ ಪ್ರತಿಯೊಬ್ಬನೂ ತಂತಮ್ಮ ಅಭಿಮತ ವ್ಯಕ್ತಪಡಿಸಬೇಕು’ ಎಂಬುದಾಗಿಯೂ ಆಶಿಸಿದರು. ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರಕಿಸುವ ನೆಲೆಯಲ್ಲಿ ಸಮಾನ ನಾಗರಿಕ ಸಂಹಿತೆಯ ಆವಶ್ಯಕತೆಯನ್ನು ವಿಶದಪಡಿಸಿದರು. ತಾರತಮ್ಯ ಎಂಬುದು ಒಂದೇ ಮನೆಯ ಮಂದಿಯಲ್ಲಿ ಇರುವಿಕೆ ಎಂದಿಗೂ ಸಮಂಜಸವೆನಿಸಲಾರದು. ಅದೇ ರೀತಿ ಒಂದೇ ದೇಶದೊಳಗೆ ಸಮಾನ ನಾಗ ರಿಕತೆ ಸಂಹಿತೆ ಇಲ್ಲದಿರುವಿಕೆ ಈ ಸ್ವಾತಂತ್ರ್ಯೋತ್ತರ ಭಾರತದ 77 ವರ್ಷ ಗಳ ಒಂದು ವಿಡಂಬನೆಯೇ ಸರಿ!
ವಿಶ್ವದ ಆಧುನಿಕ ರಾಷ್ಟ್ರಗಳಲ್ಲಿ ಧಾರ್ಮಿಕತೆಯ ಆಧಾರದಲ್ಲಿ, ಸಮಾಜವನ್ನು ಭಿನ್ನ ಭಿನ್ನ ನಾಗರಿಕ ಕಾನೂನುಗಳ ಅಡಿಯಲ್ಲಿ ವಿಭಜನೆಗೊಳಿಸುವಿಕೆ ಕಂಡು ಬರುವುದಿಲ್ಲ. ಒಂದು ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಏಕರೂಪದ ಕಾನೂನು ಇರುವಿಕೆ ಪ್ರಗತಿಪರ ಹಾಗೂ ಸೈದ್ಧಾಂತಿಕ ಸಮಾನತೆಯ ಹೆಗ್ಗುರುತು. ಅದರಲ್ಲಿಯೂ ಕಾನೂನು ಸಮುತ್ಛಯದ ಆಳಕ್ಕೆ ಹೋದಾಗ ಸ್ವಾಭಾವಿಕ ನ್ಯಾಯ (Natural Justice) ಎಂಬ ಸುಂದರ ಪದರ ಕಾಣಸಿಗುವಂತಿದೆ. ಇಲ್ಲಿ ಪ್ರಜೆಗಳ ಮಧ್ಯೆ, ಆರ್ಥಿಕ, ಸಾಮಾಜಿಕ, ನೈತಿಕ, ರಾಜಕೀಯ ಕಾನೂನು, ಸಮಾನತೆ ಹಾಗೂ ನ್ಯಾಯದ ಗಟ್ಟಿ ಶಿಲೆಯಲ್ಲಿ ಆವಿರ್ಭಜಿ ಸಬೇಕಾಗುತ್ತದೆ.
Related Articles
Advertisement
ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳಲ್ಲಿ ಉಲ್ಲೇಖ ಭಾರತದ ಸರ್ವೋಚ್ಚ ನ್ಯಾಯಾಲಯ ತನ್ನ ಹಲವಾರು ತೀರ್ಪಿನಲ್ಲಿ ಸಮಾನ ನಾಗರಿಕ ಸಂಹಿತೆ ಅಥವಾ ಸೆಕ್ಯುಲರ್ ಕೋಡ್‌ನ ತೀವ್ರ ಅಗತ್ಯವನ್ನು ಅನೇಕ ಬಾರಿ ಎತ್ತಿ ಹಿಡಿದಿದೆ. ಹಿಂದೂ ಕಕ್ಷಿದಾರರು ತನ್ನ ಮೊದಲ ಪತ್ನಿಗೆ ಗೇಟ್ ಪಾಸ್ ನೀಡಲು ಮತಾಂತರಗೊಂಡು ಎರಡನೇ ವಿವಾಹ ಸಲೀಸಾಗಿ ಮಾಡಿ ಕೊಂಡ ಬಗೆಯನ್ನು ಸುಪ್ರೀಂ ಕೋರ್ಟು ತೀರ್ಪುಗಳಲ್ಲಿ ಉಲ್ಲೇಖಿಸಿದೆ. ಭಾರತ ಸಂವಿಧಾನದ 4ನೇ ವಿಭಾಗ ಎನಿಸಿದ ರಾಜ್ಯ ನಿರ್ದೇಶಕ ತಣ್ತೀಗಳ (Directive Principles of State Policy) 44ನೇ ವಿಧಿ “ಭಾರತದ ಭೂ ಪ್ರದೇಶದೊಳಗೆ ಸಮಾನ ನಾಗರಿಕ ಸಂಹಿತೆ ಎಲ್ಲ ನಾಗರಿಕರಿಗೆ ಅನ್ವಯಿಸಲು ಯತ್ನಿಸತಕ್ಕದ್ದು’ ಎಂಬುದಾಗಿ ಅತ್ಯಂತ ಸ್ಪಷ್ಟ ಶಬ್ದಗಳಲ್ಲಿ ನಮೂದಿಸಲ್ಪಟ್ಟಿದೆ. ಸರಲಾ ಮುದ್ಗಲ್ (1995) ಮೊಕದ್ದಮೆಯಲ್ಲಿ “ಹಿಂದೂ ವಿವಾಹ ನೋಂದಣಿ ಬಳಿಕ ಪತಿ ಇಸ್ಲಾಂಗೆ ಮತಾಂತರಗೊಂಡು ದ್ವಿತೀಯ ವಿವಾಹವಾದರೂ, ತನ್ನಿಂ ತಾನೇ ಮೊದಲ ವಿವಾಹ ಅಸಿಂಧು ಆಗುವಂತಿಲ್ಲ’ ಎಂಬುದಾಗಿ ಸುಪ್ರೀಂ ಕೋರ್ಟು ತೀರ್ಪಿತ್ತಿತು. “1950ರ ಬಳಿಕ ಅನೇಕ ಸರಕಾರಗಳು ಬಂದು ಹೋದರೂ 44ನೇ ವಿಧಿಯ ಬಗ್ಗೆ ಗಂಭೀರವಾಗಿ ಚಿಂತನೆ ಹರಿಸಿಲ್ಲ’ ಎಂಬುದಾಗಿ ನ್ಯಾ|ಮೂ| ಕುಲದೀಪ್ ಸಿಂಗ್ ಹಾಗೂ ನ್ಯಾ| ಮೂ| ಆರ್.ಎಂ. ಶಾಹಿಮಾ ಉದ್ಗರಿಸಿ¨ªಾರೆ. ಅನೇಕ ಇಸ್ಲಾಂ ರಾಷ್ಟ್ರಗಳೂ, ಈ ಬಹು ಪತ್ನಿತ್ವ ವಿಷಯದಲ್ಲಿ ಹಲವಾರು ಸುಧಾರಣೆಗಳನ್ನು ತಂದಿವೆ. ಅಮೆರಿಕ ಕೂಡ “ಸಾರ್ವಜನಿಕ ನೈತಿಕತೆ’ಯ ಆಧಾರದಲ್ಲಿ “ಬಹು ಪತ್ನಿತ್ವ’ ವನ್ನು ನಿಯಂತ್ರಿಸಿದೆ. “1996ರಲ್ಲಿ ಸುಪ್ರೀಂ ಕೋರ್ಟು ಸಮಾನ ನಾಗರಿಕ ಸಂಹಿತೆ ಜಾರಿಗೆ ವಿಷಯದಲ್ಲಿ ಕೇಂದ್ರ ಸರಕಾರ ಏನು ಕ್ರಮ ಕೈಗೊಂಡಿದೆ’ ಎಂಬುದಾಗಿ ಕಾನೂನು ಇಲಾಖೆಗೆ ಕಾರ್ಯದರ್ಶಿ ಮೂಲಕ ನೋಟಿಸ್ ನೀಡಿತ್ತು. ವಿಚ್ಛೇದಿತ ಮಹಿಳೆಗೆ ಅಂತೆಯೇ, ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಒದಗುವ ಸಂಕಷ್ಟದ ಬಗ್ಗೆ ಮುಸ್ಲಿಂ ವಿವಾದಿತರ ಮಧ್ಯೆಯೇ ತೀರ್ಪು ಸರ್ವೋಚ್ಚ ನ್ಯಾಯಾಲಯ ಮಹಿಳಾ ಪರವಾಗಿ ನೀಡುವ ಪ್ರಮೇಯ 1997 ನೂರ್ ಸಾಬಾ-ವಿ-ಡ ಮಹಮ್ಮದ್ ಕಾಸಿಮ್ ಮೊಕದ್ದಮೆಯಲ್ಲಿ ಕಂಡು ಬಂತು. ಶಿಯಾ ಪಂಗಡದ ಮುಸ್ಲಿಮರು “ಸೆಕ್ಯಲರ್ ಸಿವಿಲ್ ಕೋಡ್’ ಸ್ವಾಗತಿಸಿರುವುದು ವರದಿ ಆಗುತ್ತಿದೆ. ಇಲ್ಲೊಂದು ಗಮನಾರ್ಹ ಪ್ರಶ್ನೆ “Common Criminal Procedure code” ಅಂತೆಯೇ “Indian Penal Code ಇದೆಲ್ಲ ಸಮಾನವಾಗಿ ಎಲ್ಲ ಪೌರರಿಗೂ ಇರಲಿ’ ಎಂದು ಬಯಸುವ ಮಂದಿ ಸಿವಿಲ್ ವಿಚಾರದಲ್ಲಿ ಮಾತ್ರವೇ ಪ್ರತ್ಯೇಕತೆಗೆ ಧ್ವನಿ ಬದಲಿಸುತ್ತಿರುವುದಾದರೂ ಏಕೆ? ಸೆಕ್ಯುಲರಿಸಂನ ನಿತ್ಯ ಆರಾಧಕರು ಎನ್ನುವ ಮಂದಿ “ಪ್ರತ್ಯ ಪ್ರತ್ಯೇಕ ಕಾನೂನು ಸಮುಚ್ಚಯ ನಮ್ಮ ಹಕ್ಕು’ ಎಂದು ಎತ್ತರದ ಸ್ವರದಲ್ಲಿ ಹಕ್ಕೊತ್ತಾಯ ಮಾಡುವುದಾದರೂ ಎಷ್ಟು ಸಮರ್ಥನೀಯ? ವಿಕಸಿತ ಭಾರತದ ಸುವರ್ಣ ಯುಗದ (Golden Era) ಹೆಗ್ಗುರುತಾಗಿ ಸೆಕ್ಯುಲರ್ ಸಿವಿಲ್ ಕೋಡ್ ಮೂಡಿ ಬರುವಂತಾಗಲಿ. –ಡಾ| ಪಿ.ಅನಂತಕೃಷ್ಣ ಭಟ್,
ಮಂಗಳೂರು