ಹೊಳೆನರಸೀಪುರ: ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಹಳ್ಳಿಮೈಸೂರು ಹೋಬಳಿಗೆ ಸೇರಿದ ಬಹುತೇಕ ಎಲ್ಲಾ ಗ್ರಾಪಂ ಗ್ರಾಮದ ಜೆಡಿಎಸ್ ನಿಷ್ಠಾವಂತ ಮುಖಂಡರು ಗೌಪ್ಯ ಸಭೆ ನಡೆಸಿದ್ದಾರೆ.
ತಾಲೂಕಿನ ಹಳ್ಳಿಮೈಸೂರು ಹೋಬಳಿಗೆ ಸೇರಿದ ಜೆಡಿಎಸ್ ಮುಖಂಡರು ಬುಧವಾರ ಬೆಳಗ್ಗೆ ಪಕ್ಕದ ತಾಲೂಕು ಕೆ.ಆರ್.ನಗರಕ್ಕೆ ಸೇರಿದ ಕಾಳೆನಹಳ್ಳಿ ಗ್ರಾಮದ ಫಾರ್ಮ್ ಹೌಸ್‌ನಲ್ಲಿ ಎ.ಸಿ.ಸೋಮಶೇಖರ್ ಅವರ ನೇತೃತ್ವದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಒಂದೆಡೆ ಸೇರಿ ಬರಲಿರುವ ಚುನಾವಣೆಯಲ್ಲಿ ನಮ್ಮ ಹಳ್ಳಿಮೈಸೂರು ಹೋಬಳಿಯ ಜೆಡಿಎಸ್ ಕಾರ್ಯಕರ್ತರು ಮುಂದಿನ ನಿಲುವಿನ ಬಗ್ಗೆ ಸಭೆ ನಡೆಸಿದರು.
ಹೋಬಳಿ ಅಭಿವೃದ್ಧಿಯೇ ನಮ್ಮ ಗುರಿ: ಪ್ರಸ್ತುತ ಹಳ್ಳಿ ಮೈಸೂರು ಹೋಬಳಿ ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ 2008ರ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ ಹೊಂದಿದ ನಂತರ ಅರಕಲಗೂಡು ವಿಧಾನಸಭೆ ಯಿಂದ ಗೆಲುವು ಸಾಧಿಸಿದ ಶಾಸಕರು, ಹಳ್ಳಿಮೈಸೂರು ಹೋಬಳಿ ಕಡೆಗೆಣಿಸಿದ್ದಾರೆ ಎಂಬ ಆರೋಪವಿದ್ದು, ಅದನ್ನು ಸರಿಪಡಿಸಿಕೊಳ್ಳಲು ಇದೀಗ ಸೂಕ್ತ ಕಾಲ ಒದಗಿದೆ. ಆದ್ದರಿಂದ, ಬರುವ ವಿಧಾನಸಭೆ ಚುನಾ ವಣೆಯಲ್ಲಿ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ನಿಲುವು ಗಟ್ಟಿಗೊಳಿಸುವು ದರಿಂದ ನಮ್ಮ ಹೋಬಳಿಗೆ ಸೂಕ್ತ ಅಭಿವೃದ್ಧಿಗೆ ಸಹಕಾರಿ ಆಗಲಿದೆ. ಆದ್ದರಿಂದ ನಮ್ಮ ನಿಲುವು ಏನೇ ಇದ್ದರೂ ಸಹ ಅದು ನಮ್ಮ ಹೋಬಳಿ ಅಭಿವೃದ್ಧಿಗೆ ಮೊದಲ ಆದ್ಯತೆ ಎಂಬುದು ನಮ್ಮ ನಿಲುವಾಗಿದೆ.
ಹತ್ತು ದಿನ ತಟಸ್ಥ ನೀತಿ ಅನುಸರಿಸಿ: ಪ್ರಸ್ತುತ ರಾಜಕೀಯ ವಿದ್ಯುಮಾನ ದಿನೆದಿನೇ ಒಂದೊಂದು ರೀತಿ ಸುದ್ದಿ ಹರಡುತ್ತಿದೆ. ಇದು ಅಂತ್ಯ ಕಾಣುವವರೆಗೆ ಇನ್ನೂ ಹತ್ತು ದಿನಗಳ ಕಾಲ ಕಾದು ನೋಡೋಣ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಪ್ರಸ್ತುತ ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳು ಯಾರೆಂಬುದು ನಿರ್ಧಾರ ವಾಗದೆ, ದಿನಕ್ಕೊಂದು ಸುದ್ದಿಗಳು ಹರಡುತ್ತಿದೆ. ಆದ್ದರಿಂದ ಹಳ್ಳಿಮೈಸೂರು ಹೋಬಳಿ ಮುಖಂಡರು ಮತ್ತು ಪ್ರಮುಖ ಕಾರ್ಯಕರ್ತರು ಸರಿಯಾದ ನಿಲುವು ಕೈಗೊಳ್ಳುವಲ್ಲಿ ಬಾರಿ ತೊಡಕಾಗಿದೆ. ಆದ್ದರಿಂದ, ಮುಂದಿನ ಹತ್ತು ದಿನಗಳ ಕಾಲ ತಟಸ್ಥ ವಾಗಿ ನಂತರ ಮತ್ತೂಮ್ಮೆ ಸಭೆ ಸೇರಿ ಸೂಕ್ತ ನಿರ್ಧಾರ ಕೈಗೊಳ್ಳೋಣ್ಣ ಎಂದು ಸಭೆಯಲಿ ದ್ದ ಬಹುತೇಕ ಮುಖಂಡರು ಅಭಿಪ್ರಾಯ ಪಟ್ಟರು.
ಅಭಿವೃದ್ಧಿಯಿಂದ ವಂಚಿತವಾಗಿದೆ: ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅನೇಕ ಮುಖಂಡರು ಹಳ್ಳಿಮೈಸೂರು ಹೋಬಳಿಗೆ ಸೂಕ್ತ ಸ್ಥಾನಮಾನ ದೊರಕದೆ ಮೂಲೆ ಗುಂಪಾಗಿದೆ. ಇದಕ್ಕೆ ಶಾಶ್ವತ ತಡೆ ಹಾಕದೆ ಹೋದಲ್ಲಿ ನಮ್ಮ ಹಳ್ಳಿಮೈಸೂರು ಹೋಬಳಿ ಮತ್ತಷ್ಟು ಅಭಿವೃದ್ಧಿಯಿಂದ ವಂಚಿತವಾಗಲಿದೆ. ಜತೆಗೆ ಪ್ರಗತಿಯಲ್ಲೂ ಭಾರಿ ಹಿನ್ನಡೆ ಆಗಲಿದ್ದು ಇದನ್ನು ತಡೆ ಯುವುದೇ ನಮ್ಮ ಮುಖ್ಯ ಉದ್ದೇಶ ಎಂದರು. ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಮುಖಂಡರು, ತಮ್ಮ ನಿಲುವು ಘೋಷಿಸಿ ಮುಂದಿನ ದಿನಗಳಲ್ಲಿ ಸೋಮಶೇಖರ್ ಅವರ ನೇತೃತ್ವದಲ್ಲಿ ಸಾಧಕ-ಬಾಧಕಗಳನ್ನು ಚರ್ಚಿಸಿ ತಿರ್ಮಾನಿಸಲಾಗು ವುದು ಎಂದು ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಹಳ್ಳಿಮೈಸೂರು ಹೋಬಳಿಯ ಪ್ರಮುಖ ಜೆಡಿಎಸ್ ಮುಖಂಡರಾದ ಮಂಗಳವಾಡಿ ಬಾಬು, ರಾಮೇನಹಳ್ಳಿ ಕುಮಾರ್, ನಿಡುವಣಿ ಮಹೇಂದ್ರ, ಸಿ.ಹಿಂದಲಹಳ್ಳಿ ದೇವರಾಜು ಉದ್ದೂರು ಹೊಸಳ್ಳಿ ಮೋಹನ್, ಯೋಗಾ ಸ್ವಾಮಿ, ಬಂಡಿಹಳ್ಳಿ ಮಹಾಬಲ, ನಗರ್ತಿ ಅಶೋಕ ಸೇರಿದಂತೆ ಸುಮಾರು ಐವತ್ತಕ್ಕು ಹೆಚ್ಚು ಮುಖಂಡರಿದ್ದರು.
ನಡೆಸಿಕೊಳ್ಳುವ ರೀತಿ ಆಧರಿಸಿ ನಿರ್ಧಾರ : ಒಂದು ಹಂತದಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಎ.ಮಂಜು ಅವರೇ ಅಭ್ಯರ್ಥಿ ಎಂದು ನಿಖರವಾದಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಎಲ್ಲರೂ ಸೇರಿ ಚರ್ಚೆ ನಡೆ ಸೋಣ. ಹಾಗೂ ಈ ವಿಚಾರದಲ್ಲಿ ಎ.ಮಂಜು ಮತ್ತು ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ಅವರಗಳು ಕೈಗೊಳ್ಳುವ ನಿಲುವು ನಮ್ಮನ್ನು ನಡೆಸಿಕೊಳ್ಳುವ ರೀತಿ ಮೇಲೆ ನಿರ್ಧಾರ ಕೈಗೊಳ್ಳಲಾಗುವುದೆಂದು ನಿರ್ಧರಿಸಿಲಾಯಿತು.