Advertisement

ಸೀಟ್‌ ಬೆಲ್ಟ್ ಕಥೆ

10:06 AM Mar 06, 2020 | mahesh |

ಹಿಂದಿನ ಕಾರುಗಳಲ್ಲಿ ಸೀಟ್‌ ಬೆಲ್ಟ್ ಇರುತ್ತಿರಲಿಲ್ಲ. ಇಂದಿನ ಕಾರುಗಳಲ್ಲಿ ಸೀಟ್‌ ಬೆಲ್ಟ್ ಇದ್ದರೂ ಕೆಲವರು ಅದನ್ನು ಬಳಸುತ್ತಿಲ್ಲ ಎನ್ನುವುದು ವಿಪರ್ಯಾಸ!

Advertisement

ಇಂದು ಗಂಟೆಗೆ ನೂರಾರು ಕಿ.ಮೀ. ಹೋಗುವ ಕಾರುಗಳು ಸಾಮಾನ್ಯವಾಗಿವೆ. ಬಹಳ ಹಿಂದೆ ಕಾರುಗಳು ಈಗಿನಷ್ಟು ವೇಗಯುತವಾಗಿರಲಿಲ್ಲ. ಗಂಟೆಗೆ 20- 30 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದ್ದರೂ, ಆಗಿನ ಕಾಲದಲ್ಲಿ ಸಂಭವಿಸುತ್ತಿದ್ದ ಅಪಘಾತಗಳು ಪ್ರಾಣಾಂತಿಕವಾಗಿರುತ್ತಿದ್ದವು. ಏಕೆಂದರೆ ಅಂದಿನ ಕಾರುಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿರಲಿಲ್ಲ. ಅಲ್ಲದೆ ಕಾರುಗಳು ತುಂಬಾ ದೊಡ್ಡಕ್ಕಿರುತ್ತಿದ್ದವು.

ವೈದ್ಯರ ಆಗ್ರಹ
1885ರಲ್ಲಿ ಅಮೆರಿಕದ ಎಡ್ವರ್ಡ್‌ ಕ್ಲಾಗ್‌ಹಾರ್ನ್ ಎಂಬಾತ ಮೊತ್ತ ಮೊದಲ ಬಾರಿಗೆ ಬೆಲ್ಟ್ ನ ಪೇಟೆಂಟ್‌ ಪಡೆದನು. ಪೇಟೆಂಟ್‌ ಎಂದರೆ ಹಕ್ಕುಸ್ವಾಮ್ಯ. ಯಾವ ವಸ್ತುವಿಗೆ ಪೇಟೆಂಟ್‌ ಪಡೆಯಲಾಗಿರುತ್ತದೆಯೋ ಆ ವಸ್ತುವನ್ನು ಇನ್ನೊಬ್ಬ ವ್ಯಕ್ತಿ ಬಳಕೆ ಮಾಡಲು ಸಾಧ್ಯವಿಲ್ಲ. ಪೇಟೆಂಟ್‌ ಯಾರ ಹೆಸರಿನಲ್ಲಿ ಇರುತ್ತದೆಯೋ ಆತನ ಅನುಮತಿಯನ್ನು ಪಡೆದ ನಂತರವೇ ಆ ವಸ್ತುವನ್ನು ಬಳಸಬಹುದು. 1930ನೇ ಇಸವಿಯಲ್ಲಿ ವೈದ್ಯರು ಕಾರುಗಳಲ್ಲಿ ಸೀಟ್‌ಬೆಲ್ಟನ್ನು ಅಳವಡಿಸುವಂತೆ ಆಗ್ರಹಿಸತೊಡಗಿದರು. ಅಲ್ಲಿಯ ತನಕ ಸೀಟ್‌ ಬೆಲ್ಟಾಗಳು ಕೇವಲ ರೇಸ್‌ ಕಾರುಗಳಲ್ಲಿ ಮಾತ್ರವೇ ಇರುತ್ತಿತ್ತು. ಆದರೆರಸ್ತೆ ಮೇಲಿನ ಬಹುತೇಕ ಅಪಘಾತಗಳಲ್ಲಿ ಹೆಚ್ಚಿನ ಪ್ರಮಾಣ ಸೀಟು ಬೆಲ್ಟಾ ಇದ್ದಿದ್ದರೆ ತಡೆಯಬಹುದಿತ್ತು ಎಂಬುದು ಆ ವೇಳೆಗಾಗಲೇ ವೈದ್ಯರ ಗಮನಕ್ಕೆ ಬಂದಿತ್ತು. ಹೀಗಾಗಿಯೇ ಅವರು ಕಾರು ತಯಾರಕರಲ್ಲಿ ಸೀಟು ಬೆಲ್ಟನ್ನು ಕಡ್ಡಾಯವಾಗಿ ನೀಡುವಂತೆ ಆಗ್ರಹಿಸತೊಡಗಿದ್ದರು.

ಪೇಟೆಂಟ್‌ ರಹಿತ
ಮೊದಲ ಆಧುನಿಕ ಸೀಟ್‌ ಬೆಲ್ಟನ್ನು ಆವಿಷ್ಕರಿಸಿದ್ದು ನಿಲ್ಸ್‌ ಬೋಹ್ಲಿನ್‌ ಎಂಬ ಎಂಜಿನಿಯರ್‌. ಅವರು ಹೆಸರಾಂತ ಆಟೋಮೊಬೈಲ್‌ ಸಂಸ್ಥೆ ವೋಲ್ವೋನಲ್ಲಿ ಕೆಲಸ ಮಾಡುತ್ತಿದ್ದರು. ಈ ಸೀಟ್‌ ಬೆಲ್ಟನ್ನು ಸಂಸ್ಥೆ ಪೇಟೆಂಟ್‌ ಪಡೆದು ಬೇರೆ ಯಾವ ಕಾರು ಕಂಪನಿಗಳೂ ಅದನ್ನು ಬಳಸದಂತೆ ಮಾಡಬಹುದಿತ್ತು. ಆದರೆ, ಅವರು ಪೇಟೆಂಟ್‌ ಪಡೆದುಕೊಳ್ಳಲಿಲ್ಲ. ಇದರಿಂದಾಗಿ ಈ ಆವಿಷ್ಕಾರವನ್ನು ಇತರೆ ಕಾರು ಕಂಪನಿಯವರೂ ಬಳಸಿಕೊಳ್ಳುವಂತಾಯಿತು. ಉಪಕರಣಗಳನ್ನು ಆವಿಷ್ಕರಿಸಲು ಬುದ್ಧಿಮತ್ತೆ ಇದ್ದರೆ ಸಾಲದು, ಅದು ಸರ್ವರಿಗೂ ಸಿಗಲಿ ಎನ್ನುವ ಅಂತಃಕರಣವೂ ಇರಬೇಕು! ಇಂದು, ಜಗತ್ತಿನಾದ್ಯಂತ ಕೋಟ್ಯಂತರ ಜನರ ಪ್ರಾಣಗಳು ಈ ಆವಿಷ್ಕಾರದಿಂದ ಉಳಿದಿವೆ ಎನ್ನುವುದು ಸೀಟ್‌ ಬೆಲ್ಟ್ ನ ಹೆಗ್ಗಳಿಕೆ.

ಇನ್ನೊಂದು ಸಮಸ್ಯೆ
ಕಾರುಗಳು ಸೀಟ್‌ ಬೆಲ್ಟಿನೊಡನೆ ಬಂತು ಎನ್ನುವುದೇನೋ ಸರಿ. ಆದರೆ ಇ°ಂದು ಸಮಸ್ಯೆ ಇದೇ ವೇಲೆ ಎದುರಾಗಿತ್ತು. ಚಾಲಕರು ಸೀಟ್‌ಬೆಲ್ಟನ್ನು ಧರಿಸುತ್ತಿರಲಿಲ್ಲ. ಆಗ ಸರ್ಕಾರ ಅದನ್ನು ಕಾನೂನಿನಡಿ ಕಡ್ಡಾಯ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿತು. ಸೀಟ್‌ ಬೆಲ್ಟಾ ತೊಡದೆ ವಾಹನ ಚಲಾಯಿಸುವುದು ನಿಯಮ ಉಲ್ಲಂ ಸಿದಂತೆ ಎಂದು ದಂಡವನ್ನು ಹೇರಿತು. ಸೀಟ್‌ ಬೆಲ್ಟ್ ತೊಡುವುದನ್ನು ಕಡ್ಡಾಯ ಮಾಡಿದ ಮೊದಲ ದೇಶ ಜೆಕೋಸ್ಲೋವಾಕಿಯ.

Advertisement

ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next