Advertisement
ರಸ್ತೆಗಳಲ್ಲಿ ತಿಪ್ಪೆಗುಂಡಿ: ನಗರಸಭೆ ವಿವಿಧ ವಾರ್ಡ್ ಗಳಲ್ಲಿ ಸಾರ್ವಜನಿಕರು ಮನೆಗಳ ಎದುರಿನ ರಸ್ತೆಯಲ್ಲಿ ಹೂವಿನ ಗಿಡ, ನುಗ್ಗೆ ಮರ, ತರಕಾರಿ ಬಳ್ಳಿ, ಅಲಂಕಾರಿಕ ಗಿಡ ಬೆಳೆಸಿ ಹಿತ್ತಲು ಮಾಡಿಕೊಂಡಿ¨ªಾರೆ. ಹಲವು ರಸ್ತೆಗಳಲ್ಲಿ ಎಮ್ಮೆ, ದನಗಳನ್ನು ಕಟ್ಟಿ ಹಾಕುತ್ತಿದ್ದಾರೆ. ಕೆಲವು ಕಡೆ ರಸ್ತೆಯನ್ನು ತಿಪ್ಪೆಗುಂಡಿ ಮಾಡಿಕೊಂಡಿದ್ದಾರೆ. ದನಗಳ ಹಾವಳಿ: ಎಮ್ಮೆ, ದನಗಳನ್ನೂ ರಸ್ತೆಗೆ ಬಿಡಲಾ ಗುತ್ತಿದೆ. ಅಲ್ಲದೆ, ಕಸದಲ್ಲಿ ಆಹಾರ ಹುಡುಕುತ್ತಾ ಕಸ ವನ್ನು ರಸ್ತೆಗೂ ಚೆಲ್ಲುತ್ತಿವೆ. ಜತೆಗೆ ವಾಹನಗಳಿಗೂ ಅಡ್ಡ ಬರುತ್ತಿದ್ದು ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿವೆ.
Related Articles
Advertisement
ಬೀದಿ ನಾಯಿ ಹಾವಳಿ ತಪ್ಪಿಸಿಪ್ರಾಣಿ ದಯಾ ಸಂಘಗಳ ಸಲಹೆ ಪಡೆದು ಬೀದಿ ನಾಯಿ ಹಾವಳಿ ತಡೆಗೆ ನಗರಸಭೆ ಕ್ರಮ ವಹಿಸಬೇಕು ಎಂದು ನಾಗರಿಕರ ಹಿತಾಸಕ್ತಿ ಸಮಿತಿ ಅಧ್ಯಕ್ಷ ಎಸ್.ಸಿ.ಮಧುಚಂದನ್ ಒತ್ತಾಯಿಸಿದರು. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಗಟ್ಟುವ ವಿಫಲವಾಗಿರುವ ನಗರಸಭೆ ಆಡಳಿತ ಮಂಡಳಿ ತಕ್ಷಣ ಕ್ರಮ ವಹಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳ ಮೇಲೆ ದಾಳಿ ನಡೆಸಿದ ಉದಾಹರಣೆ ಕಣ್ಣ ಮುಂದೆ ಇವೆ. ರಾತ್ರಿ ವೇಳೆ ಓಡಾಡುವ ಸಾರ್ವಜನಿಕರ ಮೇಲೂ ದಾಳಿ ಮಾಡುತ್ತಿರುವ ಘಟನೆ ಹೆಚ್ಚುತ್ತಲೇ ಇವೆ. ಇಷ್ಟಿದ್ದರೂ ನಗರಸಭೆ ಮಾತ್ರ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಕಿಡಿಕಾರಿದರು. ಗುಂಡಿ ಸರಿಪಡಿಸಿ: ನಗರದ ಬಹುತೇಕ ರಸ್ತೆ ಹಳ್ಳ ಬಿದ್ದಿವೆ.ವಾಹನ ಸವಾರರು ಪರದಾಡುವ ಸ್ಥಿತಿಯಿದೆ. ಅದನ್ನೂ ಮುಚ್ಚುವ ಕೆಲಸ ಮಾಡಬೇಕು. ಒಂದು ತಿಂಗಳ ಗಡುವು ನೀಡುತ್ತಿದ್ದೇವೆ. ಇಲ್ಲವಾದರೆ ನಗರ ನಾಗರಿಕರ ಹಿತಾಸಕ್ತಿ ಸಮಿತಿಯಿಂದ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಗದೀಶ್, ಮಂಜೇಶ್, ರಘು, ಮನ್ಸೂರ್, ಹಾಲಹಳ್ಳಿ ಮಹೇಶ್, ಸಿದ್ದಲಿಂಗ, ಶಶಿಧರ್ ಇದ್ದರು.