Advertisement

Tesla: ಮಸ್ಕ್ ಮಾಲೀಕತ್ವದ ಟೆಸ್ಲಾದಲ್ಲಿ ಎಂಜಿನಿಯರ್‌ ಮೇಲೆ ದಾಳಿ ಮಾಡಿದ್ದ ರೋಬೋಟ್‌

08:44 PM Dec 28, 2023 | Team Udayavani |

ವಾಷಿಂಗ್ಟನ್‌: ಖ್ಯಾತ ಉದ್ಯಮಿ ಎಲಾನ್‌ ಮಸ್ಕ್ ಅವರ ಒಡೆತನದ ಟೆಸ್ಲಾ ಸಂಸ್ಥೆಯಲ್ಲಿ ರೊಬೋಟ್‌ ಒಂದು ಇಂಜಿನಿಯರ್‌ ಮೇಲೆ ದಾಳಿ ನಡೆಸಿ, ರಕ್ತಸಿಕ್ತಗೊಳಿಸಿರುವ ಘಟನೆ ವರದಿಯಾಗಿದೆ. ಕೃತಕ ಬುದ್ಧಿಮತ್ತೆ (ಎ.ಐ.) ತಂತ್ರಜ್ಞಾನದ ಅಪಾಯಗಳ ಬಗ್ಗೆ ಆಗಾಗ ಉದ್ಯಮಿ ಎಲಾನ್‌ ಮಸ್ಕ್ ಕಳವಳ ವ್ಯಕ್ತ ಪಡಿಸುತ್ತಿರುವ ನಡುವೆಯೇ ಅವರದ್ದೇ ಸಂಸ್ಥೆಯಲ್ಲಿ ಈ ಘಟನೆ ಬೆಳಕಿಗೆ ಬಂದಿರುವುದು ಮಹತ್ವ ಪಡೆದುಕೊಂಡಿದೆ. 2 ವರ್ಷದ ಹಿಂದೆಯೇ ಈ ಘಟನೆ ನಡೆದಿದ್ದು, ಈಗ ಬಹಿರಂಗಗೊಂಡಿರುವುದು ಅಚ್ಚರಿ ಮೂಡಿಸಿದೆ.

Advertisement

ಟೆಸ್ಲಾದಲ್ಲಿ ಅಲ್ಯೂಮಿನಿಯಂ ಎಕರಹೊಯ್ದ ಬಳಿಕ ತಯಾರಾಗುವ ಕಾರಿನ ಬಿಡಿಭಾಗಗಳನ್ನು ಕತ್ತರಿಸಿ ಅವುಗಳನ್ನು ಸಾಗಿಸುವ ಕೆಲಸಕ್ಕೆಂದೇ ರೊಬೋಟ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅದರ ಕಾರ್ಯಕ್ಕಾಗಿ ರೊಬೋಟ್‌ಗಳನ್ನು ಓರ್ವ ಇಂಜಿನಿಯರ್‌ ಪ್ರೋಗ್ರಾಮಿಂಗ್‌ ಮಾಡುತ್ತಿದ್ದರು. ಈ ವೇಳೆ ಎರಡು ರೊಬೋಟ್‌ಗಳನ್ನು ಕೆಲಸ ಮುಗಿದ ಬಳಿಕ ನಿಷ್ಕ್ರಿಯಗೊಳಿಸಿದ್ದಾರೆ. ಆದರೆ, ಮೂರನೇ ರೊಬೋಟ್‌ ಅನ್ನು ಅಜಾಗರೂಕತೆಯಿಂದ ನಿಷ್ಕ್ರಿಯಗೊಳಿಸುವುದನ್ನು ತಪ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಕ್ರಿಯವಾಗೇ ಉಳಿದಿದ್ದ ರೊಬೋಟ್‌ ಇಂಜಿನಿಯರ್‌ ಮೇಲೆ ದಾಳಿ ನಡೆಸಿದ್ದು, ಅವರು ರಕ್ತದ ಮಡುವಿನಲ್ಲಿ ಬೀಳುವಂತೆ ಮಾಡಿದೆ. ಈ ಘಟನೆ ನಡೆದಿರುವುದು 2021ರಲ್ಲಿ. ಆ ಬಳಿಕ ಇಂಜಿನಿಯರ್‌ ಅನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಲಾಗಿದೆ.

ಅಮೆರಿಕದ ಉದ್ಯೋಗ ಸುರಕ್ಷತೆ ಮತ್ತು ಆರೋಗ್ಯ ಸಚಿವಾಲಯಕ್ಕೆ ಕಂಪನಿ ವರದಿ ಸಲ್ಲಿಸುವ ವೇಳೆ 2021ರಲ್ಲಿ ಘಟನೆ ನಡೆದಿರುವುದನ್ನು ಉಲ್ಲೇಖೀಸಿರುವುದು ಬಹಿರಂಗಗೊಂಡಿದೆ. ಇನ್ನು 2021 ಮತ್ತು 2022ರಲ್ಲಿ ರೊಬೋಟ್‌ ಸಂಬಂಧಿತ ಯಾವುದೇ ಅವಘಡಗಳು ಸಂಸ್ಥೆಯಲ್ಲಿ ವರದಿ ಆಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next