Advertisement

99 ಬಾರಿ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದ ಸವಾರ ಕಡೆಗೂ ಸಿಕ್ಕಿಬಿದ್ದ!

02:43 PM Sep 28, 2023 | Team Udayavani |

ಬೆಂಗಳೂರು: ಬರೋಬ್ಬರಿ 99 ಬಾರಿ ಸಂಚಾರ ನಿಯಮ ಉಲ್ಲಂ ಸಿದ ಬೈಕ್‌ ಸವಾರನನ್ನು ಪತ್ತೆಹಚ್ಚಿದ ಮೈಕೋ ಲೇಔಟ್‌ ಸಂಚಾರ ಪೊಲೀಸರು ಆತನ ವಿರುದ್ಧ ಕೇಸ್‌ ದಾಖಲಿಸಿ ಜೈಲಿಗೆ ಕಳುಹಿಸಿದ್ದು, 56 ಸಾವಿರ ದಂಡ ವಿಧಿಸಿದ್ದಾರೆ. ಬಿಳೆಕಲ್ಲಹಳ್ಳಿಯ ಹಸನ್‌ ಬಂಧಿತ ಬೈಕ್‌ ಸವಾರ.

Advertisement

ಹಸನ್‌ ತನ್ನ ಬೈಕ್‌ನಲ್ಲಿ ಹೆಲ್ಮೆಟ್‌ ಇಲ್ಲದೇ ಪ್ರಯಾಣ, ದೋಷಪೂರಿತ ನಂಬರ್‌ ಪ್ಲೇಟ್‌, ಚಾಲನೆ ವೇಳೆ ಮೊಬೈಲ್‌ ಬಳಕೆ, ಸಿಗ್ನಲ್‌ ಜಂಪ್‌ ಸೇರಿ 99 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಹೀಗಾಗಿ ದಂಡಪಾವತಿ ಮಾಡುವಂತೆ ಈ ಹಿಂದೆ ಸಾಕಷ್ಟು ಬಾರಿ ನೋಟಿಸ್‌ ಕೊಡಲಾಗಿತ್ತು. ಆದರೆ, ಪ್ರತಿಕ್ರಿಯೆ ನೀಡಿರಲಿಲ್ಲ.

ಈ ಮಧ್ಯೆ ಕಳೆದ ವಾರ ಹೆಲ್ಮೆಟ್‌ ಇಲ್ಲದೇ ಏಕಮುಖ ರಸ್ತೆಯಲ್ಲಿ ಬೈಕ್‌ ಸವಾರಿ ಮಾಡಿ, ಕಾರೊಂದಕ್ಕೆ ಅಡ್ಡ ಬಂದಿದ್ದ. ಅದನ್ನು ಕಾರು ಚಾಲಕರೊಬ್ಬರು ಡ್ಯಾಶ್‌ಬೋರ್ಡ್‌ನಲ್ಲಿರುವ ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯವನ್ನು ನಗರ ಪೊಲೀಸ್‌ ಆಯುಕ್ತರು, ಸಂಚಾರ ಪೊಲೀಸರ ಎಕ್ಸ್‌ ಖಾತೆಗೆ ಟ್ಯಾಗ್‌ ಮಾಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಪತ್ತೆ ಹಚ್ಚುವಂತೆ ಸಂಬಂಧಿಸಿದ ಪೊಲೀಸರಿಗೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿರುವ ಮೈಕೋ ಲೇಔಟ್‌ ಸಂಚಾರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next