Advertisement

13.5 ಸೆಕೆಂಡ್‌ಗಳಲ್ಲಿ ತಿನಿಸು ನೀಡೋ ರೆಸ್ಟಾರೆಂಟ್‌!

08:33 PM Jan 13, 2022 | Team Udayavani |

ಮೆಕ್ಸಿಕೊ ಸಿಟಿ: ಮಾಮೂಲಿಯಾಗಿ ಯಾವುದೇ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಹೋಗಿ ನೀವು ಖಾದ್ಯಗಳನ್ನು ಆರ್ಡರ್‌ ಮಾಡಿದರೆ, ನೀಡಲು ಕನಿಷ್ಠ 10 ನಿಮಿಷಗಳನ್ನಂತೂ ತೆಗೆದುಕೊಳ್ಳುತ್ತಾರೆ. ಆದರೆ ಮೆಕ್ಸಿಕೋದ ಕಾರ್ನೆ ಗಾರಿಬಾಲ್ಡಿ ರೆಸ್ಟೋರೆಂಟ್‌ನಲ್ಲಿ ಕೇವಲ 13.5 ಸೆಕೆಂಡ್‌ಗಳಲ್ಲಿ ವಿತರಿಸುತ್ತಾರೆ!

Advertisement

ಇದು 1996ರಲ್ಲಿ ನಿರ್ಮಾಣವಾದ ಗಿನ್ನೆಸ್‌ ವಿಶ್ವದಾಖಲೆ. ಈಗಲೂ ಆ ರೆಸ್ಟೋರೆಂಟ್‌ನಲ್ಲಿ ಕೇವಲ 1 ನಿಮಿಷದೊಳಗೆ ಖಾದ್ಯ ಪೂರೈಕೆಯಾಗುತ್ತದೆ. ಪರಿಣಾಮ ಯೂರೋಪ್‌, ಅಮೆರಿಕಗಳಲ್ಲೆಲ್ಲ ಜನಪ್ರಿಯತೆ ಪಡೆದಿದೆ. ಇದರ ಹಿಂದೆ ಒಂದು ರೋಚಕ ಕಥೆಯಿದೆ.

1996ರಲ್ಲಿ ವೈಟರ್‌ಗಳ ನಡುವೆ ಯಾರು ಬೇಗ ಸರ್ವ್‌ ಮಾಡುತ್ತಾರೆ ಎಂಬ ಪೈಪೋಟಿ ಶುರುವಾಗಿತ್ತು. ಆಗೊಬ್ಬರು 13.5 ಸೆಕೆಂಡ್‌ಗಳಲ್ಲಿ ಆಹಾರ ನೀಡಿದರು. ಅಲ್ಲಿಂದ ಈ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಕನಿಷ್ಠ 1 ನಿಮಿಷದೊಳಗೆ ಆಹಾರ ಪೂರೈಕೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next