Advertisement

Kashmiri ಪಂಡಿತರ ನರಮೇಧ ಖಂಡಿಸಿ ಬ್ರಿಟನ್‌ ಸಂಸತ್‌ನಲ್ಲಿ ನಿರ್ಣಯ ಮಂಡನೆ

01:06 AM Jan 19, 2024 | Team Udayavani |

ಲಂಡನ್‌: ಕಣಿವೆಯಲ್ಲಿ 1990ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧವನ್ನು ವಿರೋಧಿಸಿ ಹಾಗೂ ಪಂಡಿತರ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಭಾರತ ಸರಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಬ್ರಿಟನ್‌ ಸಂಸತ್ತಿನಲ್ಲಿ ಮೂವರು ಸಂಸದರು ನಿರ್ಣಯ ಮಂಡಿಸಿದ್ದಾರೆ.

Advertisement

ಜ.19 ಅನ್ನು ಪಂಡಿತರ ನರಮೇಧ ದಿನವೆಂದು ಗುರುತಿಸುವ ಸಂದರ್ಭದಲ್ಲೇ ಈ ನಿರ್ಣಯ ಮಂಡನೆಯಾಗಿರುವುದು ಮಹತ್ವ ಪಡೆದಿದೆ. ಸಂಸದರಾದ ಬಾಬ್‌ ಬ್ಲ್ಯಾಕ್‌ಮ್ಯಾನ್‌, ಡೆಮಾಕ್ರಟಿಲ್‌ ಯೂನಿಯನ್‌ ಪಾರ್ಟಿ ಲೀಡರ್‌ ಜಿಮ್‌ ಶನ್ನಾನ್‌ ಹಾಗೂ ಲೇಬರ್‌ ಪಕ್ಷದ ನಾಯಕರಾದ ವೀರೇಂದ್ರ ಶರ್ಮಾ ಅವರು ಕಾಶ್ಮೀರಿ ಪಂಡಿತರ ನರಮೇಧದ 34ನೇ ವರ್ಷದ ಹಿನ್ನೆಲೆಯಲ್ಲಿ ಈ ನಿರ್ಣಯವನ್ನು ಮಂಡಿಸಲಾಗಿದೆ. ಪಾಕಿಸ್ಥಾನಪ್ರೇರಿತ ಉಗ್ರರು ನಡೆಸಿದ ಈ ಯೋಜಿತ ಹತ್ಯೆಯ ಸಂತ್ರಸ್ತರಿಗೆ ಭಾರತ ಸರಕಾರ ನ್ಯಾಯ ಒದಗಿಸಬೇಕೆಂದು ಸದನದಲ್ಲೇ ಆಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next