Advertisement

ಬಿಜೆಪಿಯಿಂದ ಕ್ಷೇತ್ರ ಜನಾಭಿಪ್ರಾಯ ಸಂಗ್ರಹ

10:40 AM Jan 28, 2018 | Team Udayavani |

ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ವಿವಿಧ ವಲಯಗಳ ಜತೆಗೆ ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಪ್ರಸ್ತಾಪಿಸಿ ಅದಕ್ಕೆ ಬೇಕಾದ ಕಾರ್ಯಕ್ರಮಗಳನ್ನೂ ರೂಪಿಸಲು ರಾಜ್ಯ ಬಿಜೆಪಿ “ನಿಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸಲಹೆ ನೀಡಿ’
ಎಂಬ ಕಾರ್ಯಕ್ರಮ ರೂಪಿಸಿದೆ.

Advertisement

ನವಭಾರತಕ್ಕಾಗಿ ನವ ಕರ್ನಾಟಕ- ಜನಪರ ಶಕ್ತಿ ಎಂಬ ಘೋಷವಾಕ್ಯದಡಿ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ
ಮತ್ತು ಆಯಾ ವಿಧಾನಸಭಾ ಕ್ಷೇತ್ರದ ಗಣ್ಯರು, ಮತದಾರರ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದು, ಈಗಾಗಲೇ 40
ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕಾರ್ಯ ಪೂರ್ಣಗೊಳಿಸಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಚಾಲಕ ಮತ್ತು ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ
ಮಾತನಾಡಿ, ಈಗಾಗಲೇ ಆನ್‌ಲೈನ್‌, ವಾಟ್ಸ್‌ಆ್ಯಪ್‌, ಸಭೆಗಳ ಮೂಲಕ 40 ವಿಧಾನಸಭಾ ಕ್ಷೇತ್ರಗಳಲ್ಲಿ 40 ಲಕ್ಷ ಜನರನ್ನು ಸಂಪರ್ಕಿಸಲಾಗಿದ್ದು, 20 ಸಾವಿರ ಸಲಹೆಗಳನ್ನು ಪಡೆಯಲಾಗಿದೆ. ಇನ್ನೂ 120 ಕ್ಷೇತ್ರಗಳಲ್ಲಿ ಸಭೆಗಳಿಗೆ
ದಿನಾಂಕ ನಿಗದಿಪಡಿಸಲಾಗಿದ್ದು, ಫೆಬ್ರವರಿ ಅಂತ್ಯದೊಳಗೆ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಲಹೆಗಳನ್ನು
ಪಡೆಯುವ ಕಾರ್ಯ ಪೂರ್ಣಗೊಳಿಸಲಾಗುವುದು. ಒಟ್ಟಾರೆ ಒಂದು ಕೋಟಿ ಜನರನ್ನು ಸಂಪರ್ಕಿಸಿ ಒಂದರಿಂದ ಎರಡು ಲಕ್ಷ ಸಲಹೆಗಳನ್ನು ಪಡೆಯುವ ಉದ್ದೇಶವಿದೆ. ಇದರ ಜತೆಗೆ ಶಿಕ್ಷಣ, ಕೃಷಿ, ವಾಣಿಜ್ಯ ಮತ್ತು ಕೈಗಾರಿಕೆ ಹೀಗೆ 21 ವಲಯಗಳ ಬಗ್ಗೆಯೂ ಪ್ರತ್ಯೇಕವಾಗಿ ಸಲಹೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ಎಲ್ಲಾ ಸಲಹೆಗಳನ್ನು ಪಡೆದ ಬಳಿಕ ಅವುಗಳಲ್ಲಿ ಯಾವುದು ಅನುಷ್ಠಾನ ಸಾಧ್ಯವೋ ಅವುಗಳನ್ನು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗುವುದು. ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವುಗಳನ್ನು ಅನುಷ್ಠಾನಗೊಳಿಸಲಾಗುವುದು. ಅದಕ್ಕಾಗಿ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ, ಸ್ಥಳೀಯ ಮಟ್ಟದಲ್ಲೂ ಪ್ರತ್ಯೇಕ ಪ್ರಣಾಳಿಕೆ ರಚನೆ ಮಾಡಲಾಗುವುದು ಎಂದು ಹೇಳಿದರು. ಈ ಬಾರಿ ಬಿಜೆಪಿ ಜನತೆ ಮತ್ತು ಜನಪ್ರತಿನಿಧಿ ಚರ್ಚಿಸಿ ಅದರಿಂದ ಉತ್ತಮ ಸಲಹೆಗಳನ್ನು  ತೆಗೆದುಕೊಳ್ಳಲು ಚಿಂತಿಸಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸಮಿತಿ ಮಾಡಿ ಸಲಹೆಗಳ ಬಗ್ಗೆ ಚರ್ಚಿಸಲಾಗುವುದು. ನಂತರ ಅದನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದರು.
ಸಲಹೆಗೆ www.navakarnatakabjp.com ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next