Advertisement

129 ವರ್ಷಗಳ ಬಳಿಕ ದೊರೆತ ಅಪರೂಪದ ಹಾವು

09:16 AM Jun 30, 2020 | mahesh |

ಗುವಾಹಟಿ: ಸುಮಾರು 129 ವರ್ಷಗಳ ಹಿಂದೆ ಕಾಣಿಸಿಕೊಂಡು, ಬಳಿಕ ಕಾಣೆಯಾಗಿದ್ದ ಅಪರೂಪದ ಜಾತಿಯ ಹಾವನ್ನು ಭಾರತೀಯ ವನ್ಯಜೀವಿ ಸಂಸ್ಥೆಯ ತಂಡವೊಂದು ಪತ್ತೆಹಚ್ಚಿದೆ. ಹೆಬಿಯಸ್‌ ಪಿಯಾಲಿ ಎಂಬ ವೈಜ್ಞಾನಿಕ ಹೆಸರಿನ ಹಾಗೂ ಅಸ್ಸಾಂ ಕೀಲ್ ಬ್ಯಾಕ್‌ ಎಂದು ಕರೆಯಲ್ಪಡುವ ಈ ಹಾವು ಕಡೆಯದಾಗಿ ಕಾಣಿಸಿಕೊಂಡಿದ್ದು 1891ರಲ್ಲಿ. ಅಸ್ಸಾಂನ ಸಿಬ್ಸಗರ್‌ ಜಿಲ್ಲೆಯಲ್ಲಿ ಬ್ರಿಟಿಷ್‌ ಟೀ ಪ್ಲಾಂಟರ್‌ ಸ್ಯಾಮ್ಯುಯಲ್‌ ಎಡ್ವರ್ಡ್‌ ಪೀಲ್‌ ಎಂಬಾತನಿಗೆ ಈ ಜಾತಿಯ ಎರಡು ಗಂಡು ಹಾವುಗಳು ಸಿಕ್ಕಿದ್ದವು. 50ರಿಂದ 60 ಸೆ.ಮೀ ಉದ್ದ ಬೆಳೆಯುವ ಅಸ್ಸಾಂ ಕೀಲ್‌ಬ್ಯಾಕ್‌, ಒಂದು ವಿಷವಿಲ್ಲದ ಹಾವು. ವಿಶೇಷವೆಂದರೆ 1891ರಲ್ಲಿ ದೊರೆತಿದ್ದ, ಅಸ್ಸಾಂ-ಅರುಣಾಚಲ ಪ್ರದೇಶದ ಗಡಿಗೆ ಹೊಂದಿಕೊಂಡಿರುವ 118 ಕಿ.ಮೀ ವ್ಯಾಪ್ತಿ ಹೊಂದಿರುವ ಪೋಬಾ ಸಂರಕ್ಷಿತ ಅರಣ್ಯದಲ್ಲೇ ಈ ಹಾವು ದೊರೆತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next