Advertisement

ಜೋ ಬೈಡೆನ್‌ ವಿರುದ್ಧ ವಾಗ್ಧಂಡನೆ?

12:58 AM Jul 26, 2023 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ವಿದೇಶಿ ಶೆಲ್‌ ಕಂಪೆನಿಗಳಿಂದ ತಮ್ಮ ಕುಟುಂಬಸ್ಥರು ಹಾಗೂ ಸಹವರ್ತಿಗಳಿಗೆ ಅಕ್ರಮ ಹಣಕಾಸು ಸಂದಾಯಕ್ಕೆ ಸಹಕರಿಸಿದ್ದಾರೆಂಬ ಆರೋಪಗಳು ಕೇಳಿಬಂದಿವೆ.

Advertisement

ಈ ಸಂಬಂಧ ಬೈಡೆನ್‌ಗೆ ವಾಗ್ಧಂಡನೆ ವಿಧಿಸುವ ಸಾಧ್ಯತೆಗಳಿವೆ ಎಂದು ಅಮೆರಿಕ ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ನ ಸ್ಪೀಕರ್‌ ಕೆವಿನ್‌ ಮೆಕಾರ್ಥಿ ಸುಳಿವು ನೀಡಿದ್ದಾರೆ. ಖಾಸಗಿ ಸುದ್ದಿ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಮೆಕಾರ್ಥಿ ಈ ವಿಚಾರ ಪ್ರಸ್ತಾವಿಸಿದ್ದಾರೆ.

ಬೈಡೆನ್‌ ಅವರು ತಾವಾಗಲಿ, ತಮ್ಮ ಕುಟುಂಬವಾಗಲಿ ಚೀನದಿಂದ ಯಾವುದೇ ಅಕ್ರಮ ಹಣವನ್ನು ಪಡೆದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಆದರೆ ಅವರ ಈ ವಾದ ಸುಳ್ಳು ಎಂಬುದನ್ನು ನಾವು ಶೀಘ್ರವೇ ನಿರೂಪಿಸುತ್ತೇವೆ. ಅವರಷ್ಟೇ ಅಲ್ಲ ಅವರ ಪುತ್ರ ಹಂಟರ್‌ ಬೈಡೆನ್‌ ನಡೆಸಿರುವ ತೆರಿಗೆ ವಂಚನೆಯೂ ಕೂಡ ಶೀಘ್ರವೇ ತಾರ್ಕಿಕ ಅಂತ್ಯ ಪಡೆಯಲಿದೆ. ಹಂಟರ್‌ ಪ್ರಕರಣದಲ್ಲಿ ಪ್ರಾಸಿಕ್ಯೂಟರ್‌ಗಳು ಬೇಕಂತಲೇ ಮಂದಗತಿಯ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಆದರೆ ಬೈಡೆನ್‌ ಕುಟುಂಬದ ವಿರುದ್ಧದ ಆರೋಪಗಳ ತನಿಖೆ ಈಗಾಗಲೇ ದೋಷರೋಪಣೆ ಹಂತಕ್ಕೆ ತಲುಪಿರುವ ಕಾರಣ, ಶೀಘ್ರವೇ ಸತ್ಯ ಬಯಲಾಗಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next