Advertisement
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ಪ್ರಾರಂಭದಿದಂಲೂ ಸಾಕಷ್ಟು ಪ್ರಕೃತಿ ವಿಕೋಪಗಳನ್ನು ಎದುರಿಸಿ ಹಾನಿಗೊಳದ ರಸ್ತೆ, ತೊಂದರೆಗೊಳಗಾದ ಜನ ಹಾಗೂ ಪ್ರಾಣಿ ಸಂಕುಲಕ್ಕೆ ಸೂಕ್ತ ರಕ್ಷಣೆ ಕೊಡುವ ಕೆಲಸ ಮಾಡಿದೆ. ಅಧಿಕಾರ ವಹಿಸಿಕೊಂಡ ತಕ್ಷಣ ಭೀಕರ ಪ್ರವಾಹ, ಕೋವಿಡ್ ಮಾಹಾಮಾರಿ ಇವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ.
Related Articles
Advertisement
ಜಿಲ್ಲೆಯ ಬೆಣ್ಣಿಹಳ್ಳದ ಪ್ರವಾಹ ಪ್ರತಿವರ್ಷ ಬರುತ್ತಿದ್ದು, ಈ ಭಾಗದ ಜನರಿಗೆ ಸಮಸ್ಯೆಯಾಗುತ್ತಿದೆ. ಅದರ ಸ್ವತ್ಛತಾ ಕಾರ್ಯಕ್ಕೆ ಹಣವನ್ನು ಬಿಡುಗಡೆ ಮಾಡಲು ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಣ್ಣಿಹಳ್ಳ ತೆರವುಗೊಳಿಸುವ ಪ್ರಸ್ತಾವನೆ ಈಗಾಗಲೇ ನೀರಾವರಿ ನಿಗಮಕ್ಕೆ ಸಲ್ಲಿಸಲಾಗಿದೆ. ನೀರಾವರಿ ಸಚಿವರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಬೆಣ್ಣಿಹಳ್ಳದ ಒತ್ತುವರಿಯನ್ನು ತೆರವುಗೊಳಿಸಿ, ಸ್ವತ್ಛತಾ ಕಾರ್ಯಗಳನ್ನು ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಟ್ರ್ಯಾಕ್ಟರ್ ಪರೇಡ್ ಬೆಂಬಲಿಸಿ ಪ್ರತಿಭಟನೆ
ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡ “ಎ’ ಮತ್ತು “ಬಿ’ ವಿಭಾಗದ ಮನೆಗಳಿಗೆ ಸರಕಾರ 5 ಲಕ್ಷ ರೂ. ನೆರವು ನೀಡಲಿದೆ. ಮೊದಲನೆ ಹಂತದ ಪ್ಲಿಂತ ಲೆವಲ್ ಮಟ್ಟದಲ್ಲಿರುವ ಮನೆಗಳಿಗೆ ಲಕ್ಷ ರೂ. ನೀಡಲಾಗಿದೆ. ಈಗ ಮುಂದಿನ ಹಂತದ ನಕ್ಷೆಗಳನ್ನು ದಾಖಲೆಗಳನ್ನು ಜಿಪಿಎಸ್ ಮೂಲಕ ಅಪ್‌ಲೋಡ್ ಮಾಡಿದರೆ, ಎರಡನೇ ಕಂತಿನ ಹಣ ಬಿಡುಗಡೆಯಾಗುತ್ತದೆ. ಅದಕ್ಕಾಗಿ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
ಶಾಸಕ ಎಚ್.ಕೆ. ಪಾಟೀಲ, ಮಾಜಿ ಸಚಿವ ಎಸ್. ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿ.ಪಂ. ಅಧ್ಯಕ್ಷ ಈರಪ್ಪ ನಾಡಗೌಡ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರು, ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಮತ್ತಿತರರು ಇದ್ದರು.