Advertisement

Assam: ರಾಹುಲ್‌ ಬಳಸಿದ ತನ್ನದೇ ಪ್ರತಿರೂಪಿಯ ಹೆಸರು ಶೀಘ್ರ ಬಹಿರಂಗ: ಹಿಮಾಂತ

10:31 PM Jan 28, 2024 | Team Udayavani |

ಗುವಾಹಟಿ: ಅಸ್ಸಾಂನಲ್ಲಿ ನಡೆದ ಭಾರತ್‌ ಜೋಡೋ ನ್ಯಾಯ ಯಾತ್ರೆ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಳಸಿದ ತನ್ನದೇ ಪ್ರತಿರೂಪಿ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ಶೀಘ್ರವೇ ಬಹಿರಂಗಪಡಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದರು.

Advertisement

“ಅಸ್ಸಾಂನಲ್ಲಿ ಗುರುವಾರ ನಡೆದ ಜೋಡೋ ಯಾತ್ರೆ ವೇಳೆ ಬಸ್‌ನಲ್ಲಿ ಕುಳಿತು ಜನರತ್ತ ಕೈಬೀಸುತ್ತಿದ್ದದ್ದು ಬಹುಶಃ ರಾಹುಲ್‌ ಅಲ್ಲ. ನಾನು ಇದನ್ನು ಸುಮ್ಮನೆ ಹೇಳುತ್ತಿಲ್ಲ. ಶೀಘ್ರದಲ್ಲೇ ರಾಹುಲ್‌ ಬಳ ಸಿದ ತನ್ನದೇ ಪ್ರತಿರೂಪಿ ವ್ಯಕ್ತಿಯ ಹೆಸರು ಮತ್ತು ಅದನ್ನು ಹೇಗೆ ಬಳಸಲಾಯಿತು ಎಂಬುದರ ಮಾಹಿತಿಯನ್ನು ಬಹಿರಂಗಪಡಿಸುತ್ತೇನೆ’ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next