ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆ ಪರಿಸ್ಥಿತಿ ಅವಲೋಕಿಸಲು ಸಕ್ಕರೆ ಸಚಿವ ಶಿವರಾಮ್ ಹೆಬ್ಟಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡರು ಆಗಮಿಸಿದ್ದ ವೇಳೆ ಕಂಪನಿ ಆರಂಭಿಸುವ ವಿಚಾರದಲ್ಲಿ ರೈತ ಸಂಘಟನೆ ಮುಖಂಡರ ನಡುವೆ ವಾಗ್ವಾದ ಹಾಗೂ ಮಾತಿನ ಚಕಮಕಿ ನಡೆದ ಘಟನೆ ಬುಧವಾರ ನಡೆಯಿತು.
ಸಚಿವರು ಕಾರ್ಖಾನೆಗೆ ಆಗಮಿಸುವ ಮುನ್ನವೇ ಜಿಲ್ಲಾ ರೈತ ಹಿತರ ಕ್ಷಣಾ ಸಮಿತಿ ಹೆಸರಿನಲ್ಲಿ ಆಗಮಿಸಿದ್ದ ಮುಖಂಡರು, ಮೈಷುಗರ್ ಒಪ್ಪಿ ಗೆದಾರರ ಸಂಘ ಹಾಗೂ ಸಾತನೂರು ಭಾಗದ ರೈತ ಮುಖಂ ಡರು ಕಂಪ ನಿಯ ಆವರಣದಲ್ಲಿ ಜಮಾಯಿಸಿದ್ದರು. ಎಲ್ಲಾ ಬಣಗಳ ಮುಖಂಡರು ಪ್ರತ್ಯೇಕವಾಗಿ ಗುಂಪುಗೂಡಿ ಚರ್ಚೆಯಲ್ಲಿ ತೊಡಗಿದ್ದರು.
ಸಚಿವರು, ಸಂಸದರು, ಶಾಸಕರು ಮೈಷುಗರ್ ಅತಿಥಿ ಗೃಹಕ್ಕೆ ಆಗಮಿಸಿದ್ದ ವೇಳೆ ಒಂದು ಗುಂಪು ಮೈಷುಗರ್ ಕಾರ್ಖಾನೆ ಗುತ್ತಿಗೆ ಕೊಟ್ಟು ನಡೆಸುವಂತೆ ಒತ್ತಾಯಿಸಿದರೆ, ಮತ್ತೂಂದು ಗುಂಪು ಸರ್ಕಾರಿ ಸ್ವಾಮ್ಯದಲ್ಲೇ ಕಂಪನಿ ಮುನ್ನಡೆಸಬೇಕು ಎಂದು ಆಗ್ರಹಿಸಿತು. ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆ ದಾಗ ಸಚಿವರು ಕಂಪನಿ ಅತಿಥಿ ಗೃಹದ ಒಳಗೆ ತೆರಳಿದರು.
ಸಾತ ನೂರು ಭಾಗದ ರೈತರು ಜಿಲ್ಲಾ ಹಿತರಕ್ಷಣಾ ಸಮಿತಿ ಬ್ಯಾನರ್‌ನಡಿ ಬಂದಿರುವ ಮುಖಂಡರು ಮೈಷುಗರ್ ವ್ಯಾಪ್ತಿಯ ರೈತರೂ ಅಲ್ಲ, ಕಬ್ಬು ಬೆಳೆಗಾರರೂ ಅಲ್ಲ. ನಾವು ಮೈಷುಗರ್‌ಗೆ ಕಬ್ಬು ಪೂರೈಸುವ ರೈತರಾಗಿದ್ದು, ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಕಾರ್ಖಾ ನೆ ನಡೆಸಲು ನಮ್ಮ ಅಭ್ಯಂತರವಿಲ್ಲ. ಮೈಷುಗರ್‌ನಲ್ಲಿ ಕಬ್ಬು ಅರೆಯುವಿಕೆ ಆರಂಭವಾಗಬೇಕೆಂದು ಏರಿದ ಧ್ವನಿಯಲ್ಲಿ ಮಾತನಾಡಿದರು.
ಮೈಷುಗರ್ ಕಾರ್ಖಾನೆ ಆಸ್ತಿ ಸಂರಕ್ಷಿಸಲು ಸರ್ಕಾರಿ ಸ್ವಾಮ್ಯದಲ್ಲೇ ಕಂಪನಿ ಉಳಿಯಬೇಕು ಎನ್ನುವುದು ನಮ್ಮ ಆಗ್ರಹ ಎಂಬುದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡರ ವಾದವಾಗಿತ್ತು. ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದವರು ಕಾರ್ಖಾನೆ ಒಅಂಡ್ ಎಂಗೆ ನೀಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದಷ್ಟು ಶೀಘ್ರವಾಗಿ ಪ್ರಕ್ರಿಯೆ ಪೂರ್ಣಗೊಳಿಸಿ ಆಗಸ್ಟ್ ಮೊದಲ ವಾರದಿಂದಲೇ ಕಾರ್ಖಾನೆ ಆರಂಭಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರ ನಡುವಿನ ಭಿನ್ನಾಭಿಪ್ರಾಯ ಮನಗಂಡ ಸಚಿವರು, ಸಂಸದರು, ಶಾಸಕರು ಕಾರ್ಖಾನೆ ಆವರಣದಿಂದ ಹೊರನಡೆ ದರು. ಈ ವೇಳೆ ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್ ನಡೆಯಬೇ ಕೆಂದು ಒಂದು ಗುಂಪು ಘೋಷಿಸಿದರೆ, ಇನ್ನೊಂದು ಗುಂಪು ವಿರೋಧಿ ಗುಂಪಿನವರ ವಿರುದ ಧಿಕ್ಕಾರ ಕೂಗಿದರು.