ವಾರಾಣಸಿ : ಜಿಲ್ಲಾ ನ್ಯಾಯಾಲಯದ ಆದೇಶದ ನಂತರ ವಾರಾಣಸಿಯ ಜ್ಞಾನವಾಪಿ ಮಸೀದಿಯೊಳಗಿನ ‘ವ್ಯಾಸ್ ಜಿ ಕಾ ತೆಹ್ಖಾನಾ’ದಲ್ಲಿ ಅರ್ಚಕರೊಬ್ಬರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಜ್ಞಾನವಾಪಿ ಪ್ರಕರಣದ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಪೂಜೆ ಸಲ್ಲಿಸಿರುವ ವಿಡಿಯೋ ದೃಶ್ಯಗಳನ್ನು ದೃಢಪಡಿಸಿದ್ದಾರೆ.ನಿತ್ಯ 5 ಆರತಿ ಮಾಡಲಾಗುತ್ತದೆ. ಮಂಗಳಾರತಿ ಬೆಳಗ್ಗೆ 3:30ಕ್ಕೆ ,ಭೋಗ ಮಧ್ಯಾಹ್ನ 12ಕ್ಕೆ,ಅಪ್ರಾಣ ಸಂಜೆ 4 ಗಂಟೆಗೆ ಸಂಜೆ 7 ಗಂಟೆಗೆ ಪೂಜೆ ಮತ್ತು ರಾತ್ರಿ 10:30 ಕ್ಕೆ ಶಯನ ಸೇವೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ತುರ್ತು ವಿಚಾರಣೆಯನ್ನು ಕೋರಿ ಅಂಜುಮನ್ ಇಂಟೆಝಾಮಿಯಾ ಮಸೀದಿ ಸಮಿತಿಯನ್ನು ಪ್ರತಿನಿಧಿಸುವ ವಕೀಲರು ಗುರುವಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಸಿಜೆಐ ಅವರು ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.
31 ವರ್ಷಗಳ ನಂತರ ರಾತ್ರಿ ತಹಖಾನಾವನ್ನು ತೆರೆದು ಪ್ರಾರ್ಥನೆ ನಡೆಸಲಾಯಿತು. ಮಸೀದಿಯು ನೆಲಮಾಳಿಗೆಯಲ್ಲಿ ನಾಲ್ಕು ‘ತಹಖಾನಾ’ಗಳನ್ನು ಹೊಂದಿದ್ದು, ವ್ಯಾಸ್ ತಹಖಾನವು ಸ್ಪಷ್ಟವಾಗಿ ವ್ಯಾಸ ಕುಟುಂಬಕ್ಕೆ ಸೇರಿದ್ದಾಗಿದೆ. ನೆಲಮಾಳಿಗೆಯನ್ನು ಶುಚಿಗೊಳಿಸಿದ ನಂತರ, ಲಕ್ಷ್ಮಿ ದೇವಿ ಮತ್ತು ಗಣೇಶನ ‘ಆರತಿ’ ಮಾಡಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.ಬುಧವಾರ ರಾತ್ರಿ 9.30ರ ಸುಮಾರಿಗೆ ಕಾಶಿ-ವಿಶ್ವನಾಥ ದೇವಸ್ಥಾನದ ಟ್ರಸ್ಟ್‌ನ ಸದಸ್ಯರನ್ನು ಕರೆಸಿ ಮಸೀದಿಯ ‘ವಜುಖಾನ’ಕ್ಕೆ ಎದುರಾಗಿರುವ ನಂದಿ ಪ್ರತಿಮೆಯ ಎದುರಿನ ಬ್ಯಾರಿಕೇಡ್‌ಗಳನ್ನು ತೆಗೆಯಲಾಗಿದೆ. ಸ್ಥಳದಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ.