Advertisement
ರಬಕವಿಯ ಬ್ರಹ್ಮಾನಂದ ಆಶ್ರಮ ಹತ್ತಿರ ಬಾಡಿಗೆ ಶೆಡ್‌ನಲ್ಲಿ ವಾಸ ಹೊಂದಿರುವ ಪ್ರಕಾಶ ಹನಗಂಡಿಯವರ ಮಗಳು ದಾನೇಶ್ವರಿ ಈ ಸಾಧನೆ ಮಾಡಿದ ಪ್ರತಿಭಾನ್ವಿತೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.99 ರಷ್ಟು ಅಂಕದೊಂದಿಗೆ ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಳು. ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 585 ಅಂಕಗಳೊಂದಿಗೆ ಶೇ.97.5 ರಷ್ಟು ಅಂಕ ಪಡೆದು ಎಸ್‌ಆರ್‌ಎ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದು ಸಾಧನೆಗೈದಿದ್ದಾಳೆ. ಈಕೆ ಕನ್ನಡ-100, ರಸಾಯನ ಶಾಸ್ತ್ರ- 100, ಗಣಿತ-100, ಜೀವಶಾ-96, ಭೌತಶಾಸ್ತ್ರ-96 ಹಾಗು ಇಂಗ್ಲೀಷ್-93 ಅಂಕ ಪಡೆದಿದ್ದಾಳೆ.
Related Articles
Advertisement
ಮಗಳು ದಾನೇಶ್ವರಿಗೆ ವೈದ್ಯಳಾಗುವ ಆಸೆಯಿದೆ. ಮುಂದಿನ ವಿದ್ಯಾಭ್ಯಾಸಕ್ಕೆ ಹಣವಿಲ್ಲದೆ ಕಣ್ಣೀರುಡುತ್ತಿದ್ದು, ಭವಿಷ್ಯದಲ್ಲಿ ಚೆನ್ನಾಗಿ ಓದಿ ಅವಳ ಕನಸನ್ನು ನನಸಾಗಿಸುವ ಆಸೆ ನನ್ನದಾಗಿದೆ. ಇಂತಹ ಎಷ್ಟೋ ಬಡಕುಟುಂಬಗಳಲ್ಲಿ ಪ್ರತಿಭಾವಂತ ಮಕ್ಕಳಿದ್ದು, ಮುಂದಿನ ಓದಿಗೆ ಕಷ್ಟದಾಯಕವಾಗಿದ್ದಂತು ಸತ್ಯ ಎನ್ನುತ್ತಾರೆ ತಂದೆ ಪ್ರಕಾಶ್.
ವಿದ್ಯಾರ್ಥಿ ದಾನೇಶ್ವರಿ ಪತ್ರಿಕೆಯೊಂದಿಗೆ ಮಾತನಾಡಿ, ಮುಂದೆ ಹೆಚ್ಚು ಓದುವಾಸೆ ನನ್ನ ತಂದೆ ಎಷ್ಟು ಕಲಿಸುವರೋ ಅಷ್ಟು ಓದುವೆ. ಖಾಸಗಿ ಸಂಸ್ಥೆಗಳು ಪಿಯು ಶಿಕ್ಷಣ ಸಂದರ್ಭ ಹೆಗಲು ನೀಡಿ ನನ್ನ ಓದಿಗೆ ಕಾರಣರಾಗಿದ್ದರು. ಈಗಲೂ ನೆರವಾಗುವರೆಂಬ ಬಯಕೆ ನನ್ನದಾಗಿದೆ.
ಈ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲಿಚ್ಚಿಸುವವರು 9663251836 ನಂಬರ್‌ಗೆ ಸಂಪರ್ಕಿಸಬಹುದು.