Advertisement

ತಿಂಗಳಲ್ಲಿ ಕೈಕೊಟ್ಟ ಪೊಲೀಸ್‌ ಕಿಯೋಸ್ಕ್‌

05:55 AM Jun 05, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಸಂಚಾರ ಪೊಲೀಸರಿಗೆ ನೆರವಾಗುವ ಉದ್ದೇಶದಿಂದ ಬಿಬಿಎಂಪಿಯು ಖಾಸಗಿ ಸಹಭಾಗಿತ್ವದಲ್ಲಿ ನಗರದ 23 ಜಂಕ್ಷನ್‌ಗಳಲ್ಲಿ ಪೊಲೀಸ್‌ ಕಿಯೋಸ್ಕ್ (ಅತ್ಯಾಧುನಿಕ ಪೊಲೀಸ್‌ ಚೌಕಿ)ಗಳನ್ನು ಮೇ 8ಕ್ಕೆ  ಉದ್ಘಾಟಿಸಿತ್ತು. ಆದರೆ ತಿಂಗಳು ಕಳೆಯುವ ಮುನ್ನವೇ ಚೌಕಿಗಳು ಅವ್ಯವಸ್ಥೆಯ ತಾಣವಾಗುತ್ತಿವೆ.

Advertisement

ಹಡ್ಸನ್‌ ವೃತ್ತದಲ್ಲಿ ಸಾಂಕೇತಿಕವಾಗಿ ಕಿಯೋಸ್ಕ್ ಅನ್ನು ಮೇಯರ್‌ ಎಂ.ಗೌತಮ್‌ಕುಮಾರ್‌ ಉದ್ಘಾಟಿಸಿದ್ದರು. ಸದ್ಯ ಈ ಚೌಕಿಯಲ್ಲಿ  ಕುರ್ಚಿ ಮುರಿದು ಹೋಗಿದ್ದು, ಫ್ಯಾನ್‌, ವಾಯು ನಿಯಂತ್ರಣ ವ್ಯವಸ್ಥೆ ಯಾವುದು ಕೆಲಸ ಮಾಡುತ್ತಿಲ್ಲ. ಇದಕ್ಕೆ ವಿದ್ಯುತ್‌ ಸಂಪರ್ಕ ಇನ್ನು ನೀಡಿಲ್ಲ. ಹೀಗಾಗಿ, ಅತ್ಯಾಧುನಿಕ ಚೌಕಿ ಇದ್ದರೂ ಸಂಚಾರ ಪೊಲೀಸರು ಬಿಸಿಲು, ಮಳೆಯಲ್ಲಿ  ನಿಲ್ಲುವಂತಾಗಿದೆ.

ಸೈನ್‌ಪೋಸ್ಟ್‌ ಸಂಸ್ಥೆ ಮತ್ತು ಬಿಬಿಎಂಪಿ 8 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಿತ್ತು. ಕಿಯೋಸ್ಕ್ ನಿರ್ಮಾಣದ ಹಿನ್ನೆಲೆಯಲ್ಲಿ ಸೈನ್‌ಪೋಸ್ಟ್‌ ಸಂಸ್ಥೆಗೆ 20 ವರ್ಷಗಳ ಜಾಹೀರಾತು ಅವಕಾಶವನ್ನೂ  ನೀಡಲಾಗಿದೆ. ಅಲ್ಲದೆ, ನಗರದಲ್ಲಿ ಇನ್ನೂ 400 ಕಡೆಗಳಲ್ಲಿ ಕಿಯೋಸ್ಕ್ ನಿರ್ಮಾಣ ಮಾಡುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಮೊದಲ ಹಂತದ ಕಿಯೋಸ್ಕ್ಗಳೇ ಕಳಪೆ ವ್ಯವಸ್ಥೆಯಿಂದ ಕೂಡಿರುವುದಕ್ಕೆ ಸಂಚಾರ ಪೊಲೀಸರಿಂದ ಆಕ್ಷೇಪ  ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next